IPL 2025: ಮುಂಬೈ ವಿರುದ್ಧ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿದ ಗುಜರಾತ್! ಯಾರೇ ಗೆದ್ರು ಸಿಗುತ್ತೆ ಅಗ್ರಸ್ಥಾನ | Gujarat titans won the toss elected to bowl first against Mumbai indians

IPL 2025: ಮುಂಬೈ ವಿರುದ್ಧ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿದ ಗುಜರಾತ್! ಯಾರೇ ಗೆದ್ರು ಸಿಗುತ್ತೆ ಅಗ್ರಸ್ಥಾನ | Gujarat titans won the toss elected to bowl first against Mumbai indians

Last Updated:

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ (Wankhede Stadium) ನಡೆಯುತ್ತಿರುವ ಪಂದ್ಯದಲ್ಲಿ ಟಾಸ್​ ಗೆದ್ದ ಗುಜರಾತ್ ಟೈಟನ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಮುಂಬೈ ಇಂಡಿಯನ್ಸ್ಮುಂಬೈ ಇಂಡಿಯನ್ಸ್
ಮುಂಬೈ ಇಂಡಿಯನ್ಸ್

ಬಲಿಷ್ಠ ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ IPL 2025 ರ 56 ನೇ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್​ ಗೆದ್ದ ಗುಜರಾತ್ ಟೈಟನ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. MI ಮತ್ತು GT ನಡುವೆ ಯಾವ ತಂಡ ಗೆದ್ದರೂ ಅದು ಪ್ಲೇಆಫ್‌ ಸ್ಥಾನವನ್ನ ಬಹುತೇಕ ಖಚಿತಪಡಿಸಿಕೊಳ್ಳಲಿವೆ. ಎರಡೂ ತಂಡಗಳ ಖಾತೆಯಲ್ಲಿ ಪ್ರಸ್ತುತ ತಮ್ಮ ಖಾತೆಯಲ್ಲಿ ತಲಾ 14 ಅಂಕಗಳನ್ನು ಹೊಂದಿವೆ. ಐದು ಬಾರಿಯ ಚಾಂಪಿಯನ್ ಮುಂಬೈ ತಂಡ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ಗುಜರಾತ್ ನಾಲ್ಕನೇ ಸ್ಥಾನದಲ್ಲಿದೆ. ಸತತ ಆರು ಪಂದ್ಯಗಳನ್ನು ಗೆದ್ದ ನಂತರ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ತಂಡದ ಆತ್ಮವಿಶ್ವಾಸ ಉತ್ತುಂಗದಲ್ಲಿದೆ. ಋತುವಿನಲ್ಲಿ ಆರಂಭದಲ್ಲಿ ಗಿಲ್ ಪಡೆ ವಿರುದ್ಧದ ಸೋಲಿಗೆ ಮಂಗಳವಾರ ಸೇಡು ತೀರಿಸಿಕೊಳ್ಳಲು ಮುಂಬೈ ಎದುರು ನೋಡುತ್ತಿದೆ.

ಮಾರ್ಚ್ 29 ರಂದು ಅಹಮದಾಬಾದ್‌ನಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯವನ್ನ ಜಿಟಿ 36 ರನ್‌ಗಳಿಂದ ಗೆದ್ದಿತ್ತು. ಮುಂಬೈ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಐಪಿಎಲ್‌ನಲ್ಲಿ ಇಲ್ಲಿಯವರೆಗೆ ಪರಸ್ಪರ 6 ಪಂದ್ಯಗಳನ್ನು ಆಡಿವೆ. ಈ ಅವಧಿಯಲ್ಲಿ ಗುಜರಾತ್ ಮೇಲುಗೈ ಸಾಧಿಸಿತ್ತು. ಜಿಟಿ ನಾಲ್ಕು ಪಂದ್ಯಗಳನ್ನು ಗೆದ್ದರೆ, ಮುಂಬೈ ಎರಡರಲ್ಲಿ ಮಾತ್ರ ಜಯಗಳಿಸುವಲ್ಲಿ ಯಶಸ್ವಿಯಾಯಿತು.

ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ XI: ಶುಭ್​ಮನ್ ಗಿಲ್ (ನಾಯಕ), ಬಿ ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅರ್ಷದ್ ಖಾನ್, ಜೆರಾಲ್ಡ್ ಕೋಟ್ಜಿ, ರವಿಶ್ರೀನಿವಾಸನ್ ಸಾಯಿ ಕಿಶೋರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ

ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ XI: ರೋಹಿತ್ ಶರ್ಮಾ, ರಿಯಾನ್ ರಿಕೆಲ್ಟನ್ (ವಿಕೀ), ವಿಲ್ ಜಾಕ್ಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಕಾರ್ಬಿನ್ ಬಾಷ್, ದೀಪಕ್ ಚಹಾರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ