IPL 2025: 14 ಎಸೆತಗಳಿಗೆ 53 ರನ್! ನಮ್ಮ ತಂಡದ ಆ ಇಬ್ಬರಿಗೆ ನನ್ನ ಆಟದ ಕ್ರೆಡಿಟ್ ಸಲ್ಲಬೇಕೆಂದ ಶೆಫರ್ಡ್​ | Shepherd s Blazing 53 Romario Credits RCB Legend s Guidance for Match-Winning Knock

IPL 2025: 14 ಎಸೆತಗಳಿಗೆ 53 ರನ್! ನಮ್ಮ ತಂಡದ ಆ ಇಬ್ಬರಿಗೆ ನನ್ನ ಆಟದ ಕ್ರೆಡಿಟ್ ಸಲ್ಲಬೇಕೆಂದ ಶೆಫರ್ಡ್​ | Shepherd s Blazing 53 Romario Credits RCB Legend s Guidance for Match-Winning Knock

Last Updated:

ಆರ್‌ಸಿಬಿ ತಂಡವು IPL 2025 ರಲ್ಲಿ CSK ವಿರುದ್ಧ 2 ರನ್‌ಗಳ ಅಂತರದಿಂದ ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಶೆಫರ್ಡ್ 14 ಎಸೆತಗಳಲ್ಲಿ 53 ರನ್‌ಗಳಿಸಿ ತಂಡಕ್ಕೆ ಮಹತ್ವದ ಕೊನೆ ನೀಡಿದರು.

ರೊಮ್ಯಾರಿಯೋ ಶೆಫರ್ಡ್ರೊಮ್ಯಾರಿಯೋ ಶೆಫರ್ಡ್
ರೊಮ್ಯಾರಿಯೋ ಶೆಫರ್ಡ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು IPL 2025 ರಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದೆ. ಇತ್ತೀಚೆಗೆ CSK ವಿರುದ್ಧದ ನಿರ್ಣಾಯಕ ಪಂದ್ಯವನ್ನು 2 ರನ್‌ಗಳ ಅಲ್ಪ ಅಂತರದಿಂದ ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಈ ಪಂದ್ಯದಲ್ಲಿ ಒಂದು ಹಂತದಲ್ಲಿ ಆರ್​ಸಿಬಿ 180-190 ರನ್​ಗಳಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ರೊಮ್ಯಾರಿಯೋ ಶೆಫರ್ಡ್ ಕೊನೆಯ ಎರಡು ಓವರ್​ಗಲ್ಲಿ ಸಿಡಿಸಲಬ್ಬರದ ಬ್ಯಾಟಿಂಗ್ 53 ರನ್​ ಸಿಡಿಸಿದರು. ಇದರಿಂದ ಆರ್​ಸಿಬಿ 213 ರನ್​ಗಳಿಸಿತು. ಇದಕ್ಕೆ ಉತ್ತರವಾಗಿ ಸಿಎಸ್​ಕೆ 211 ರನ್​ಗಳಿಸಿ 2 ರನ್​ಗಳ ಸೋಲು ಕಂಡಿತು.

ದಿನೇಶ್​ ಕಾರ್ತಿಕ್ ಪಾತ್ರ ಮಹತ್ವದ್ದು

ಈ ಪಂದ್ಯದಲ್ಲಿ 14 ಎಸೆತಗಳಲ್ಲಿ 53 ರನ್​ಗಳಿಸಿ ಐಪಿಎಲ್ ಇತಿಹಾಸದಲ್ಲಿ 2ನೇ ವೇಗದ ಅರ್ಧಶತಕ ಸಿಡಿಸಿದ ಶೆಫರ್ಡ್ ಆರ್​ಸಿಬಿ ತಂಡದ ಇಬ್ಬರು ವ್ಯಕ್ತಿಗಳಿಗೆ ತಮ್ಮ ಇನ್ನಿಂಗ್ಸ್ ಕ್ರೆಡಿಟ್​ ನೀಡಿದ್ದಾರೆ. ಪಂದ್ಯದ ನಂತರ ಮಾತನಾಡಿದ ಶೆಫರ್ಡ್, ” ನಾನು ಬಹಳ ದಿನಗಳಿಂದ ಈ ಅವಕಾಶಕ್ಕಾಗಿ ಕಾಯುತ್ತಿದ್ದೆ. ಕೊನೆಗೂ ನನಗೆ ಈ ಅವಕಾಶ ಸಿಕ್ಕಿತು. ತಂಡಕ್ಕೆ ಉತ್ತಮ ಫಿನಿಶಿಂಗ್ ನೀಡಲು ಪ್ರಯತ್ನಿಸಿದೆ. ನನ್ನ ಬೇಸ್​ ನನ್ನ ಬ್ಯಾಟಿಂಗ್​​ನ ಮೂಲವಾಗಿದೆ. ನಮ್ಮ ಬ್ಯಾಟಿಂಗ್ ಯೂನಿಟ್ ತವರಿನಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಕೆಟ್ಟದಾಗಿ ವಿಫಲವಾಯಿತು. ಆಗ ದಿನೇಶ್ ಕಾರ್ತಿಕ್ ನನ್ನನ್ನು ಕರೆದರು ವಿಶೇಷವಾಗಿ ಅಭ್ಯಾಸ ಮಾಡಿಸಿದ್ದರು. ಅದರ ಫಲಿತಾಂಶ ಇಂದು ಸ್ಪಷ್ಟವಾಗಿ ಗೋಚರಿಸಿದೆ ಎಂದು ಮೆಂಟರ್​ ಕಾರ್ತಿಕ್​​ರನ್ನ ಹೊಗಳಿದರು.

ಬೌಂಡರಿ, ಸಿಕ್ಸರ್ ಕಡೆ ನನ್ನ ಗಮನ

ಮುಂದುವರಿಸಿ, ನಾನು ಸ್ಕೋರ್ ಬಗ್ಗೆ ಕಾಳಜಿ ವಹಿಸಲಿಲ್ಲ. ನಾನು ಪ್ರತಿ ಚೆಂಡನ್ನು ಬಲವಾಗಿ ಹೊಡೆಯಲು, ಫೋರ್ ಅಥವಾ ಸಿಕ್ಸ್ ಹೊಡೆಯಲು ಬಯಸಿದ್ದೆ. ನಾನು ಕ್ರೀಸ್‌ಗೆ ಬಂದಾಗ, ಟಿಮ್ ಡೇವಿಡ್​ ನನಗೆ ನಿರಾಳವಾಗಿ ಆಡುವಂತೆ ಪ್ರೇರೇಪಿಸಿದರು ಮತ್ತು ಅದನ್ನೇ ನಾನು ಮಾಡಿದೆ. ನನಗೆ ಎರಡೂ ಪಾತ್ರಗಳಲ್ಲಿ ಆಸಕ್ತಿ ಇದೆ. ಅದು ಬೌಲರ್ ಆಗಿರಲಿ ಅಥವಾ ಬ್ಯಾಟರ್ ಆಗಿರಲಿ, ನಾನು ಚೆಂಡನ್ನು ಅಥವಾ ಬ್ಯಾಟ್ ಅನ್ನು 50-50 ಸಮತೋಲನಗೊಳಿಸಲು ಬಯಸುತ್ತೇನೆ ಎಂದು ತಿಳಿಸಿದರು.

ಬೌಲಿಂಗ್​​ನಲ್ಲಿ ಸುಧಾರಿಸಬೇಕೆಂದ ಶೆಫರ್ಡ್

ಆದರೆ ಇಂದು ನಾನು ಚೆಂಡಿನೊಂದಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ನಾನು ಇನ್ನೂ ಬೌಲಿಂಗ್‌ನಲ್ಲಿ ಸುಧಾರಿಸಬೇಕಾಗಿದೆ. ಆದರೆ ತಂಡವು ಅದ್ಭುತ ಪ್ರದರ್ಶನ ನೀಡಿತು. ಕಷ್ಟಕರ ಸಂದರ್ಭಗಳಲ್ಲಿ ಎಂಗಿಡಿ ಮತ್ತು ಭುವಿ ನಮಗೆ ಬೆಂಬಲ ನೀಡಿದರು ಎಂದು ರೊಮಾರಿಯೊ ಶೆಫರ್ಡ್ ಹೇಳಿದರು. ಈ ಪಂದ್ಯದಲ್ಲಿ ಅವರು 14 ಎಸೆತಗಳಲ್ಲಿ 4 ಬೌಂಡರಿ ಮತ್ತು 6 ಸಿಕ್ಸರ್​ಗಳ ನೆರವಿನಿಂದ ಔಟಾಗದೆ 53 ರನ್ ಗಳಿಸಿ ಪಂದ್ಯದ ಗತಿಯನ್ನೇ ಬದಲಿಸಿದರು.