IPL 2025: 228 ರನ್​ಗಳ ಬೃಹತ್ ಟಾರ್ಗೆಟ್ ಚೇಸ್ ಮಾಡಿ ಐಪಿಎಲ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ RCB | IPL 2025 RCB registers their highest successful run-chase in ipl history after beating lsg

IPL 2025: 228 ರನ್​ಗಳ ಬೃಹತ್ ಟಾರ್ಗೆಟ್ ಚೇಸ್ ಮಾಡಿ ಐಪಿಎಲ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ RCB | IPL 2025 RCB registers their highest successful run-chase in ipl history after beating lsg

ಬೃಹತ್ ಮೊತ್ತ ಚೇಸ್ ಮಾಡಿ ಗೆದ್ದ ಆರ್​ಸಿಬಿ

ಮಂಗಳವಾರ, ಮೇ 27, 2025ರಂದು ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ನ 70ನೇ ಪಂದ್ಯದಲ್ಲಿ ಆರ್‌ಸಿಬಿಯು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಎಲ್‌ಎಸ್‌ಜಿಯು ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 227 ರನ್‌ಗಳ ದೊಡ್ಡ ಮೊತ್ತವನ್ನು ಗಳಿಸಿತು. ಆರ್‌ಸಿಬಿಯು ಈ ಗುರಿಯನ್ನು 18.4 ಓವರ್‌ಗಳಲ್ಲಿ ಕೇವಲ 4 ವಿಕೆಟ್‌ಗೆ ಚೇಸ್ ಮಾಡಿ, ಐಪಿಎಲ್‌ನಲ್ಲಿ ತನ್ನ ಅತಿ ದೊಡ್ಡ ರನ್ ಚೇಸ್ ದಾಖಲೆಯನ್ನು ಸೃಷ್ಟಿಸಿತು. ಈ ಗೆಲುವಿನೊಂದಿಗೆ ಆರ್‌ಸಿಬಿಯು ಲೀಗ್ ಹಂತದಲ್ಲಿ ಎರಡನೇ ಸ್ಥಾನವನ್ನು ಪಡೆಯಿತು.

ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಅತ್ಯಧಿಕ ಯಶಸ್ವಿ ರನ್ ಚೇಸಿಂಗ್

2025ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ – 228 ರನ್

2010ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 204 ರನ್

2024ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 201 ರನ್

2016ರಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ವಿರುದ್ಧ 192 ರನ್

2023ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 187 ರನ್

ಪಾಯಿಂಟ್ಸ್ ಟೇಬಲ್‌ನಲ್ಲಿ ಆರ್‌ಸಿಬಿಯ ಸ್ಥಾನ

ಈ ಗೆಲುವಿನೊಂದಿಗೆ ಆರ್‌ಸಿಬಿಯು 14 ಪಂದ್ಯಗಳಲ್ಲಿ 19 ಅಂಕಗಳನ್ನು ಗಳಿಸಿ, ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೇರಿತು. ಇದರಿಂದ ತಂಡವು ಕ್ವಾಲಿಫೈಯರ್ 1 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆಡುವ ಅವಕಾಶವನ್ನು ಪಡೆಯಿತು. ಈ ಪಂದ್ಯವು ಮೇ 29, 2025ರಂದು ನವ ಚಂಡೀಗಢದಲ್ಲಿ ನಡೆಯಲಿದೆ. ಎರಡನೇ ಸ್ಥಾನವು ಆರ್‌ಸಿಬಿಗೆ ಫೈನಲ್‌ಗೆ ತಲುಪಲು ಎರಡು ಅವಕಾಶಗಳನ್ನು ನೀಡುತ್ತದೆ, ಏಕೆಂದರೆ ಕ್ವಾಲಿಫೈಯರ್ 1 ರಲ್ಲಿ ಸೋತರೂ, ಎಲಿಮಿನೇಟರ್ ಗೆದ್ದ ತಂಡದ ವಿರುದ್ಧ ಇನ್ನೊಂದು ಅವಕಾಶವಿರುತ್ತದೆ.

ಲಕ್ನೋ ವಿರುದ್ಧ ಪಂದ್ಯದ ವಿವರ

ಲಕ್ನೋದಲ್ಲಿ ನಡೆದ ಪಂದ್ಯದಲ್ಲಿ ಎಲ್‌ಎಸ್‌ಜಿಯ ನಾಯಕ ರಿಷಭ್ ಪಂತ್ 61 ಎಸೆತಗಳಲ್ಲಿ 118 ರನ್‌ಗಳ (11 ಫೋರ್, 8 ಸಿಕ್ಸ್) ಅಜೇಯ ಶತಕವನ್ನು ಬಾರಿಸಿದರು. ಇದು ಅವರ ಐಪಿಎಲ್‌ನ ಎರಡನೇ ಶತಕವಾಗಿದ್ದು, 54 ಎಸೆತಗಳಲ್ಲಿ ಶತಕ ಪೂರೈಸಿದ ಅವರು ಎಲ್‌ಎಸ್‌ಜಿಗಾಗಿ ಅತಿ ವೇಗದ ಶತಕದ ದಾಖಲೆಯನ್ನು ನಿರ್ಮಿಸಿದರು. ಮಿಚೆಲ್ ಮಾರ್ಷ್ 37 ಎಸೆತಗಳಲ್ಲಿ 67 ರನ್‌ಗಳನ್ನು ಗಳಿಸಿ ಎಲ್‌ಎಸ್‌ಜಿಗೆ 227/3 ರನ್‌ಗಳ ದೊಡ್ಡ ಮೊತ್ತವನ್ನು ದಾಖಲಿಸಿಲು ನೆರವಾದರು.

ಆರ್‌ಸಿಬಿಯ ರನ್ ಚೇಸ್‌ನ ಹೈಲೈಟ್ಸ್

228 ರನ್​ಗಳ ಗುರಿ ಬೆನ್ನಟ್ಟಿದ ಆರ್​ಸಿಬಿ ಇನ್ನು 8 ಎಸೆತಳಿರುವಂತೆ 18.4 ಓವರ್ಗಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಜಿತೇಶ್ ಶರ್ಮಾ 33 ಎಸೆತಗಳಲ್ಲಿ ಅಜೇಯ 85 ರನ್​ಗಳಿಸಿದರೆ, ಕೊಹ್ಲಿ 30 ಎಸೆತಗಳಲ್ಲಿ 54, ಮಯಾಂಕ್ ಅಗರ್ವಾಲ್ 23 ಎಸೆತಗಳಲ್ಲಿ ಅಜೇಯ 41 ರನ್​ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.