IPL Playoff Scenarios: ಐಪಿಎಲ್ ಪ್ಲೇಆಫ್​ ಪ್ರವೇಶಿಸಲು ಕನಿಷ್ಠ ಎಷ್ಟು ಪಂದ್ಯಗಳನ್ನ ಗೆಲ್ಲಬೇಕು? ಇಲ್ಲಿದೆ ನೋಡಿ ಸಂಪೂರ್ಣ ಲೆಕ್ಕಾಚಾರ | IPL Points Table Number of Wins Required for Teams to Make Playoffs

IPL Playoff Scenarios: ಐಪಿಎಲ್ ಪ್ಲೇಆಫ್​ ಪ್ರವೇಶಿಸಲು ಕನಿಷ್ಠ ಎಷ್ಟು ಪಂದ್ಯಗಳನ್ನ ಗೆಲ್ಲಬೇಕು? ಇಲ್ಲಿದೆ ನೋಡಿ ಸಂಪೂರ್ಣ ಲೆಕ್ಕಾಚಾರ | IPL Points Table Number of Wins Required for Teams to Make Playoffs

ಸಿಎಸ್​ಕೆ vs ಹೈದರಾಬಾದ್ ಭವಿಷ್ಯ ಇಂದು ನಿರ್ಧಾರ

ಐಪಿಎಲ್ 2025 ಸೀಸನ್ ಮೊದಲಾರ್ಧ ಅಂತ್ಯಗೊಂಡಿದೆ. ಪ್ರತಿ ತಂಡವು ಇನ್ನು ನಾಲ್ಕು ಪಂದ್ಯಗಳನ್ನು ಆಡಿದರೆ, ಯಾವ ತಂಡ ಪ್ಲೇಆಫ್‌ಗೆ ಮುನ್ನಡೆಯುತ್ತದೆ ಮತ್ತು ಯಾವ ತಂಡ ಮನೆಗೆ ಹೋಗುತ್ತದೆ ಎಂಬುದು ಸ್ಪಷ್ಟವಾಗುತ್ತದೆ . ಈ ಋತುವಿನಿಂದ ರಾಜಸ್ಥಾನ್ ರಾಯಲ್ಸ್ ಬಹುತೇಕ ಹೊರಬಿದ್ದಿದೆ ಎಂದು ಹೇಳಬಹುದು. ಸನ್‌ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳಲ್ಲಿ ಒಂದರ ಭವಿಷ್ಯ ಇಂದು ನಿರ್ಧಾರವಾಗಲಿದೆ. ಪ್ರಸ್ತುತ ಆರು ತಂಡಗಳು ಪ್ಲೇಆಫ್ ಸ್ಥಾನದ ರೇಸ್​​ನಲ್ಲಿ ಮುಂಚೂಣಿಯಲ್ಲಿವೆ.

ಐಪಿಎಲ್ ಪಾಯಿಂಟ್ ಟೇಬಲ್ ಪ್ರಕಾರ, ರಾಜಸ್ಥಾನ ರಾಯಲ್ಸ್ ಈಗಾಗಲೇ ಪ್ಲೇ-ಆಫ್ ಅವಕಾಶಗಳನ್ನು ಕಳೆದುಕೊಂಡಿದೆ. ಸನ್‌ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಒಂಬತ್ತು ಮತ್ತು ಹತ್ತನೇ ಸ್ಥಾನದಲ್ಲಿವೆ. ಅಗ್ರ 4 ತಂಡಗಳೆಂದರೆ ಗುಜರಾತ್ ಟೈಟಾನ್ಸ್, ದೆಹಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್. ಕೆಕೆಆರ್​, ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ತಂಡಗಳಿಗೆ ಪ್ಲೇ-ಆಫ್ ಪ್ರವೇಶಿಸುವ ಅವಕಾಶ ಇನ್ನೂ ಇದೆ.

ಇದನ್ನೂ ಓದಿ: IPL​​ನಲ್ಲಿ ಅತಿ ಹೆಚ್ಚು ಸಿಕ್ಸರ್, ರೋಹಿತ್ ದಾಖಲೆ ಸನಿಹ ಬಂದ ಕೊಹ್ಲಿ! ಟಾಪ್ 5 ಲಿಸ್ಟ್ ಇಲ್ಲಿದೆ

ಪ್ರತಿ ತಂಡಕ್ಕೂ ಇರುವ ಅವಕಾಶಗಳೇನು?

ಪ್ಲೇಆಫ್‌ಗೆ ಅರ್ಹತೆ ಪಡೆಯಲು ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಉಳಿದಿರುವ ಆರು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಸಾಧಿಸಬೇಕಾಗಿದೆ. ಉಳಿದ ಐದು ಪಂದ್ಯಗಳಲ್ಲಿ ಆರ್‌ಸಿಬಿ ಎರಡರಲ್ಲಿ ಗೆಲ್ಲಲೇಬೇಕು. ಪ್ಲೇಆಫ್‌ಗೆ ಪ್ರವೇಶ ಪಡೆಯಲು ಪಂಜಾಬ್ ಕಿಂಗ್ಸ್ ಆರು ಪಂದ್ಯಗಳಲ್ಲಿ ಮೂರರಲ್ಲಿ ಗೆಲ್ಲಬೇಕು ಮತ್ತು ಮುಂಬೈ ಇಂಡಿಯನ್ಸ್ ಐದು ಪಂದ್ಯಗಳಲ್ಲಿ ಮೂರರಲ್ಲಿ ಗೆಲ್ಲಬೇಕು. ಇದೇನಾದರೂ ಸಾಧ್ಯವಾದರೆ ಈ ನಾಲ್ಕು ತಂಡಗಳು ಪ್ಲೇ ಆಫ್ ಪ್ರವೇಶಿಸಲಿವೆ.

ಲಕ್ನೋ ಸೂಪರ್‌ಜೈಂಟ್ಸ್ ಐದು ಪಂದ್ಯಗಳಲ್ಲಿ ಮೂರರಲ್ಲಿ ಗೆಲ್ಲಲೇಬೇಕು. ಆರು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದರೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಅವಕಾಶ ಸಿಗುತ್ತದೆ. ಸನ್‌ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ತಮ್ಮ ಉಳಿದಿರುವ ಆರು ಪಂದ್ಯಗಳನ್ನು ಗೆಲ್ಲಲೇಬೇಕು. ಪವಾಡ ಸಂಭವಿಸದ ಹೊರತು, ಸನ್‌ರೈಸರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪ್ಲೇಆಫ್ ತಲುಪುವ ಸಾಧ್ಯತೆ ಕಡಿಮೆ. ಕಳೆದ ಆವೃತ್ತಿಯಲ್ಲಿ ಆರ್​ಸಿಬಿ ಇದೇ ಸ್ಥಿತಿಯಲ್ಲಿದ್ದರೂ ಸತತ 6 ಪಂದಗಳಲ್ಲಿ ಗೆಲುವು ಸಾಧಿಸಿ ಪ್ಲೇ ಆಫ್ ಪ್ರವೇಶಿಸಿತ್ತು. ಆದರೆ ಈ ಬಾರಿ ಟಾಪ್ 5 ತಂಡಗಳು ಅತ್ಯುತ್ತಮ ಪ್ರದರ್ಶನ ನೀಡಿರುವುದರಿಂದ ಈ ತಂಡಗಳಿಗೆ ಆ ಚಾನ್ಸ್ ಸಿಗೋದು ಅನುಮಾನವಾಗಿದೆ.

ಐಪಿಎಲ್ 2025 ಪಾಯಿಂಟ್ಸ್ ಟೇಬಲ್

ಎಂಟು ಪಂದ್ಯಗಳಲ್ಲಿ ಆರರಲ್ಲಿ ಗೆಲುವು ಸಾಧಿಸಿ ಗುಜರಾತ್ ಟೈಟಾನ್ಸ್ 12 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ 12 ಅಂಕಗಳೊಂದಿಗೆ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಮೂರೂ ತಂಡಗಳು 12 ಅಂಕಗಳನ್ನು ಹೊಂದಿದ್ದರೂ, ರನ್ ರೇಟ್ ಆಧಾರದ ಮೇಲೆ ಗುಜರಾತ್ ಅಗ್ರಸ್ಥಾನದಲ್ಲಿದೆ.

ಇದನ್ನೂ ಓದಿ: IPL 2025: ಟಿ20ಯಲ್ಲಿ ವೇಗವಾಗಿ 300 ವಿಕೆಟ್‌ಗಳ ಸಾಧನೆ! ವಿಶೇಷ ದಾಖಲೆ ಬರೆದ ಬುಮ್ರಾ

ಕಳೆದ ವಾರ ಕೊನೆಯ ಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್, ಸತತ ಗೆಲುವುಗಳ ಮೂಲಕ ಹತ್ತು ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ಏರಿದೆ. ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್‌ಜೈಂಟ್ಸ್ ಹತ್ತು ಅಂಕಗಳೊಂದಿಗೆ ಐದು ಮತ್ತು ಆರನೇ ಸ್ಥಾನದಲ್ಲಿವೆ. ಕೋಲ್ಕತ್ತಾ ನೈಟ್ ರೈಡರ್ಸ್ ಆರು ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದ್ದರೆ, ರಾಜಸ್ಥಾನ ರಾಯಲ್ಸ್ ನಾಲ್ಕು ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ. ಸನ್‌ರೈಸರ್ಸ್ ಮತ್ತು ಚೆನ್ನೈ ತಂಡಗಳು ತಲಾ ಎರಡು ಪಂದ್ಯಗಳನ್ನು ಗೆದ್ದು ಒಂಬತ್ತು ಮತ್ತು ಹತ್ತನೇ ಸ್ಥಾನದಲ್ಲಿವೆ. ಈ ತಂಡಗಳು ತನ್ನೆಲ್ಲಾ ಪಂದ್ಯಗಳನ್ನ ದೊಡ್ಡ ಅಂತರದಿಂದ ಗೆದ್ದರೆ ಮಾತ್ರವಲ್ಲದೆ, ಇತರೆ ಪಂದ್ಯಗಳ ಫಲಿತಾಂಶ ಕೂಡ ಅವಲಂಭಿಸಿಬೇಕಾಗುತ್ತದೆ.