IPL Winner: ಕಪ್ ಗೆದ್ದ ಬಳಿಕ ಕಣ್ಣೀರಿಡುತ್ತಾ ಕೊಹ್ಲಿ ಹೇಳಿದ್ದು ಇದೊಂದೇ ಮಾತು! | RCB wins first IPL cup after 18 years gifting fans and virat kohli first reaction

IPL Winner: ಕಪ್ ಗೆದ್ದ ಬಳಿಕ ಕಣ್ಣೀರಿಡುತ್ತಾ ಕೊಹ್ಲಿ ಹೇಳಿದ್ದು ಇದೊಂದೇ ಮಾತು! | RCB wins first IPL cup after 18 years gifting fans and virat kohli first reaction

Last Updated:

ಅಭಿಮಾನಿಗಳು ಪ್ರತೀ ವರ್ಷವೂ ಕೂಡ ಈ ಸಲ ಕಪ್ ನಮ್ದೆ ಈ ಸಲ ಕಪ್ ನಮ್ದೇ ಎಂದು ಹೇಳುತ್ತಿದ್ದರು. ಸದ್ಯ ಈ ಬಾರಿ ಗೆಲ್ಲುವ ಮೂಲಕ ಮೊದಲ ಕಪ್ ಗೆದ್ದು ಅಭಿಮಾನಿಗಳಿಗೆ ಉಡುಗೊರೆ ನೀಡಿದ್ದಾರೆ.

ವಿರಾಟ್ ಕೊಹ್ಲಿವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಫೈನಲ್​​ (IPL 2025 Final) ಪಂದ್ಯ RCB ಹಾಗೂ ಪಂಜಾಬ್ ಕಿಂಗ್ಸ್ ನಡೆವೆ ನಡೆದ ಪಂದ್ಯದಲ್ಲಿ ಆರ್‌ಸಿಬಿ 6 ರನ್‌ನಗಳ ಅಂತರದಲ್ಲಿ ಗೆಲ್ಲುವ ಮೂಲಕ ಬರೋಬ್ಬರಿ 18 ವರ್ಷಗಳ ಬಳಿಕ ಮೊದಲ ಕಪ್ ಗೆದ್ದು ಸಂಭ್ರಮಿಸಿದೆ. ಅಭಿಮಾನಿಗಳು ಪ್ರತೀ ವರ್ಷವೂ ಕೂಡ ಈ ಸಲ ಕಪ್ ನಮ್ದೆ ಈ ಸಲ ಕಪ್ ನಮ್ದೇ ಎಂದು ಹೇಳುತ್ತಿದ್ದರು. ಸದ್ಯ ಈ ಬಾರಿ ಗೆಲ್ಲುವ ಮೂಲಕ ಮೊದಲ ಕಪ್ ಗೆದ್ದು ಅಭಿಮಾನಿಗಳಿಗೆ ಉಡುಗೊರೆ ನೀಡಿದ್ದಾರೆ. ಪಂದ್ಯ ಗೆದ್ದ ಬಳಿಕ ಭಾವುಕರಾದ ವಿರಾಟ್ ಅಭಿಮಾನಿಗಳ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಲ ಕಪ್ ನಮ್ದು

ಹೌದು, ಪಂದ್ಯದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ ಭಾವುಕರಾಗಿಯೇ ಮಾತನಾಡಿದರು. ಮಾತ್ರವಲ್ಲ ಅವರು ನೀಡಿ ಒಂದು ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ. ಮಾತ್ರವಲ್ಲ ವಿರಾಟ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ವಿರಾಟ್ ಕೊಹ್ಲಿ ಹೇಳಿಕೆಯಿಂದ ಸಂತಸಗೊಂಡಿದ್ದಾರೆ. ಅಷ್ಟಕ್ಕೂ ವಿರಾಟ್ ಕೊಹ್ಲಿ ಅಭಿಮಾನಿಗಳ ಕುರಿತು ಹೇಳಿದ್ದೇನು ಎಂದು ನೋಡುವುದಾದ್ರೆ, “ನನ್ನ ಹೃದಯ ಬೆಂಗಳೂರಿನೊಂದಿಗಿದೆ, ನನ್ನ ಆತ್ಮ ಬೆಂಗಳೂರಿನೊಂದಿಗಿದೆ” ಎನ್ನುವ ಮೂಲಕ ಆರ್‌ಸಿಬಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. (My Heart is with bangalore, my soul is with bangalore). ಮಾತ್ರವಲ್ಲ ಮುಂದುವರೆದು ಕ್ರಿಸ್ ಗೇಯ್ಲ್, ಎಬಿ ಡಿವಿಲಿಯರ್ಸ್ ಜೊತೆ ಮಾತನಾಡಿದ ಕೊಹ್ಲಿ ‘ಈ ಸಲ ಕಪ್ ನಮ್ದು’ ಎಂದು ಸಂಭ್ರಮಿಸಿದರು.

ಎಬಿ ಬಗ್ಗೆ ಕೊಹ್ಲಿ ಹೇಳಿದ್ದೇನು?

ಮುಂದುವರೆದು ಮಾತನಾಡಿದ ಅವರು, ಈ ಗೆಲುವು ತಂಡಕ್ಕೆ ಎಷ್ಟು ಮುಖ್ಯವೋ ಅಭಿಮಾನಿಗಳಿಗೂ ಅಷ್ಟೇ ಮುಖ್ಯವಾಗಿತ್ತು. 18 ವರ್ಷಗಳು ಕಳೆದಿವೆ. ಈ ಬಾರಿ ನಾನು ನನ್ನ ಯೌವನವನ್ನು ಮರೆತು ನನ್ನ ಅತ್ಯುನ್ನತೆಯ ಆಟವನ್ನು ನೀಡಿದ್ದೇನೆ. ನನ್ನಲ್ಲಿರುವ ಎಲ್ಲವನ್ನೂ ನಾನು ಅದಕ್ಕೆ ನೀಡಿದ್ದೇನೆ. ಈ ದಿನ ಬರುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಕೊನೆಯ ಚೆಂಡು ಎಸೆದ ತಕ್ಷಣ ಭಾವುಕನಾಗಿದ್ದೆ. ಈ ಫ್ರಾಂಚೈಸಿಗಾಗಿ ಅವರು (ಎಬಿ ಡಿವಿಲಿಯರ್ಸ್) ತುಂಬಾ ಮಾಡಿದ್ದಾರೆ.

ಪಂದ್ಯಕ್ಕೂ ಮೊದಲು ಅವರಿಗೆ ಹೇಳಿದ್ದೆ ಇದು ನಮ್ಮಷ್ಟೇ ನಿಮ್ಮದೂ ಮುಖ್ಯ ಮತ್ತು ಅವರು ನಮ್ಮೊಂದಿಗೆ ಸಂಭ್ರಮಾಚರಣೆ ಮಾಡಬೇಕೆಂದು ನಾನು ಬಯಸಿದ್ದೆ ಎಂದು ಡಿವಿಲಿಯರ್ಸ್ ಕುರಿತು ಮಾತನಾಡಿದರು. ಅವರು ನಮಗಾಗಿ ಹಲವು ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಅವರು 4 ವರ್ಷಗಳ ಹಿಂದೆ ನಿವೃತ್ತರಾಗಿದ್ದಾರೆ. ಅವರು ನಮ್ಮೊಂದಿಗೆ ವೇದಿಕೆಯಲ್ಲಿರಲು ಅರ್ಹರು. ನಾನು ಈ ತಂಡಕ್ಕೆ ನಿಷ್ಠನಾಗಿ ಉಳಿದಿದ್ದೇನೆ, ಏನೇ ಇರಲಿ. ನಾನು ಬೇರೆ ರೀತಿಯಲ್ಲಿ ಯೋಚಿಸಿದ ಕ್ಷಣಗಳನ್ನು ಹೊಂದಿದ್ದೇನೆ, ಆದರೆ ನಾನು ಈ ತಂಡಕ್ಕೆ ಅಂಟಿಕೊಂಡಿದ್ದೇನೆ ಎಂದರು.

ಬೆಂಗಳೂರಿನ ಜೊತೆ ನನಗೆ ಅವಿನಾಭಾವ ಸಂಬಂಧವಿದೆ

ನನ್ನ ಹೃದಯ ಬೆಂಗಳೂರಿನೊಂದಿಗಿದೆ, ನನ್ನ ಆತ್ಮ ಬೆಂಗಳೂರಿನೊಂದಿಗಿದೆ ಮತ್ತು ನಾನು ಐಪಿಎಲ್ ಆಡುವವರೆಗೂ ನಾನು ಆಡುವ ತಂಡ ಇದು. ಇಂದು ರಾತ್ರಿ ನಾನು ಮಗುವಿನಂತೆ ಮಲಗುತ್ತೇನೆ. ಈ ಆಟವನ್ನು ಹೆಚ್ಚು ವರ್ಷಗಳ ಕಾಲ ಆಡಲು ನನಗೆ ಅವಕಾಶವಿದೆ. ನಮಗೆ ನಿವೃತ್ತಿಗೆ ಇನ್ನೂ ಸಮಯವಿದೆ. ಅದಕ್ಕೂ ಮೊದಲು ನನ್ನಲ್ಲಿರುವ ಎಲ್ಲವನ್ನೂ ನೀಡಲು ಬಯಸುತ್ತೇನೆ. ಕೊನೆಗೂ ಅದನ್ನು ನನ್ನ ಮಡಿಲಿಗೆ ಕೊಟ್ಟಿದ್ದಕ್ಕಾಗಿ ದೇವರಿಗೆ ಧನ್ಯವಾದಗಳು ಎಂದರು.