Karwar: ಕರಾವಳಿಯಲ್ಲಿ ಹಸಿ ಮೀನು ಸಿಗದೇ ಜನರು ಕಂಗಾಲು; ಒಣ ಮೀನಿಗೆ ಹೆಚ್ಚಾಯ್ತು ಡಿಮ್ಯಾಂಡ್! | Weather changes in coastal areas increase demand for dried fish over fresh fish

Karwar: ಕರಾವಳಿಯಲ್ಲಿ ಹಸಿ ಮೀನು ಸಿಗದೇ ಜನರು ಕಂಗಾಲು; ಒಣ ಮೀನಿಗೆ ಹೆಚ್ಚಾಯ್ತು ಡಿಮ್ಯಾಂಡ್! | Weather changes in coastal areas increase demand for dried fish over fresh fish

Last Updated:

ಉತ್ತರ ಕನ್ನಡ ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯದಿಂದ ಹಸಿ ಮೀನು ಸಿಗದೇ ಜನರು ಒಣ ಮೀನನ ಮೊರೆ ಹೋಗಿದ್ದಾರೆ. ಜೂನ್-ಜುಲೈ ತಿಂಗಳಲ್ಲಿ ಆಳ ಸಮುದ್ರ ಮೀನುಗಾರಿಕೆ ನಿಷೇಧದಿಂದ ಮಾರುಕಟ್ಟೆಯಲ್ಲಿ ತಾಜಾ ಮೀನುಗಳ ಕೊರತೆ.

ಸಾಂದರ್ಭಿಕ ಚಿತ್ರಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಾರವಾರ: ಕಳೆದ ತಿಂಗಳಿಂದ ಆಳ ಸಮುದ್ರ ಮೀನುಗಾರಿಕೆ (Sea Fishing) ಸ್ಥಗಿತವಾಗಿದೆ. ಈ‌ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಆರಂಭವಾಗಿದ್ರು ಹವಾಮಾನ ವೈಪರೀತ್ಯದಿಂದ (Extreme Weather) ಮೀನಿನ ಶಿಕಾರಿಯಾಗದೆ ಈ ಜಿಲ್ಲೆಯ ಜನ ಈಗ ಒಣಗಿದ ಮೀನಿನ (Dried Fish) ಮೊರೆ ಹೋಗುತ್ತಿದ್ದಾರೆ.

ಕರಾವಳಿ ಜನರ ಫೆವರೆಟ್ ಆಹಾರ ಅಂದ್ರೆ ಮೀನು. ಆದ್ರೆ ಈ ಭಾಗದಲ್ಲಿ ತಿಂಗಳಿಂದ ಮೀನುಗಾರಿಕೆ ನಡೆಯುತ್ತಿಲ್ಲ. ಇದ್ರಿಂದ ಮಾರುಕಟ್ಟೆಯಲ್ಲಿ ತಾಜಾ ಹಸಿ ಮೀನುಗಳೂ ಸಿಗ್ತಿಲ್ಲ. ಇನ್ನು ಸಾಂಪ್ರದಾಯಿಕ ಮೀನುಗಾರಿಕೆ ಚಾಲ್ತಿಯಲ್ಲಿದ್ರೂ ಹವಾಮಾನ ವೈಪರೀತ್ಯದಿಂದ ಮೀನಿನ ಶಿಕಾರಿಯಾಗುತ್ತಿಲ್ಲ. ಹೀಗಾಗಿ ಜಿಲ್ಲೆಯ ಕರಾವಳಿಯುದ್ದಕ್ಕೂ ಈಗ ಹಸಿ ಮೀನಿಗೆ ಬರ ಶುರುವಾಗಿದೆ.

ಹಸಿ ಮೀನು ಸಿಗದೇ ಕಂಗಾಲಾಗಿರೋ ಜನರು ಈಗ ಒಣ ಮೀನನ ಮೊರೆ ಹೋಗಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಒಣ ಮೀನಿಗೆ ಡಿಮ್ಯಾಂಡ್ ಬಂದಿದೆ. ಕಾರವಾರದಲ್ಲಿ ಭಾನುವಾರದ ಸಂತೆಗೆ ಗೋವಾ, ಸೇರಿ ಹಲವಾರು ಕಡೆಯಿಂದ ಒಣಗಿದ ಮೀನನ್ನ ಖರೀದಿ ಮಾಡಿ ಹೋಗುತ್ತಿದ್ದಾರಂತೆ.

ಕರಾವಳಿಯಲ್ಲಿ ಹಸಿ ಮೀನು ಇಳುವರಿ ಕುಂಠಿತ

ಇನ್ನು ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಸರ್ಕಾರದ ಆದೇಶದಂತೆ ಜೂ‌ನ್ ಮತ್ತು ಜುಲೈ ತಿಂಗಳಲ್ಲಿ ಆಳ ಸಮುದ್ರ ಮೀನುಗಾರಿಕೆ ನಿಷೇಧ ಇರುತ್ತೆ. ಈಗಾಗಲೆ ಮುಂದಿನ ಹತ್ತು ದಿನದಲ್ಲಿ ಅಂದ್ರೆ ಅಗಸ್ಟ್ ತಿಂಗಳಲ್ಲಿ ಮತ್ತೆ ಆಳ ಸಮುದ್ರ ಮೀನುಗಾರಿಕೆ ಆರಂಭವಾಗಲಿದೆ. ಆದ್ರೆ ಈಗಿನ ಹವಾಮಾನದಲ್ಲಿ ಬದಲಾವಣೆ ಮತ್ತು ಸಮುದ್ರದ ಪ್ರಕ್ಷುಬ್ಧತೆಯಿಂದ ಮೀನುಗಾರಿಕೆಗೆ ತೆರಳು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗ್ತಿದೆ. ಆಗಸ್ಟ್ ತಿಂಗಳಲ್ಲೂ ಕೂಡಾ ಜಿಲ್ಲೆಯ ಜನರು ಒಣಮೀನನ್ನೆ ಮೆಚ್ಚಿಕೊಳ್ಳೋದ್ರಲ್ಲಿ ಎರಡು ಮಾತಿಲ್ಲ.