Kemmannu Gundi: ಕೆಮ್ಮಣ್ಣುಗುಂಡಿಯ ಸೌಂದರ್ಯಕ್ಕೆ ಮಾರುಹೋಗದವರಿಲ್ಲ- ಒಮ್ಮೆಯಾದ್ರೂ ಭೇಟಿ ನೀಡಿ | Kemmannu Gundi is Must visit place in Chikkamagaluru

Kemmannu Gundi: ಕೆಮ್ಮಣ್ಣುಗುಂಡಿಯ ಸೌಂದರ್ಯಕ್ಕೆ ಮಾರುಹೋಗದವರಿಲ್ಲ- ಒಮ್ಮೆಯಾದ್ರೂ ಭೇಟಿ ನೀಡಿ | Kemmannu Gundi is Must visit place in Chikkamagaluru

Last Updated:

ಹಿಂದೆ ಮೈಸೂರು ಸಂಸ್ಥಾನದ ನಾಲ್ಕನೆಯ ಕೃಷ್ಣರಾಜ ಒಡೆಯರ್ ಅವರ ಬೇಸಿಗೆಯ ರಾಜಧಾನಿಯಾಗಿ ಕೆಮ್ಮಣ್ಣುಗುಂಡಿ ಹೆಸರುವಾಸಿಯಾಗಿತ್ತು. ಈ ಕಾರಣದಿಂದಾಗಿ ಈ ಗಿರಿಧಾಮವನ್ನು ಶ್ರೀಕೃಷ್ಣರಾಜೇಂದ್ರ ಗಿರಿಧಾಮ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ.

X

ವಿಡಿಯೋ ಇಲ್ಲಿ ನೋಡಿ

ಚಿಕ್ಕಮಗಳೂರು: ಕರ್ನಾಟಕ ಭಾಗದ ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿ ಬರುವ ಅನೇಕ ಪ್ರವಾಸಿಧಾಮಗಳ ಪೈಕಿ ಕೆಮ್ಮಣ್ಣುಗುಂಡಿ (Kemmannu Gundi) ಕೂಡ ಒಂದು. ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನಲ್ಲಿರುವ ಈ ಸುಂದರ ಗಿರಿಧಾಮವು ಕರ್ನಾಟಕದಲ್ಲಿ ಕಂಡುಬರುವ ಆಕರ್ಷಕ ಪ್ರವಾಸಿ ತಾಣಗಳಲ್ಲಿ(Tourist Place) ಒಂದಾಗಿದೆ. ಎಲ್ಲಾ ವಯೋಮಾನದವರು ಆಸ್ವಾದಿಸಬಹುದಾದ ಕೆಮ್ಮಣ್ಣುಗುಂಡಿ ಕೇವಲ ತನ್ನ ಅದ್ವಿತೀಯ ಪ್ರಕೃತಿ ಸೌಂದರ್ಯದಿಂದ ಮಾತ್ರವಲ್ಲದೆ ಸುತ್ತಮುತ್ತಲಿರುವ ಸಾಕಷ್ಟು ಪ್ರವಾಸಿ ಆಕರ್ಷಣೆಗಳಿಂದಲೂ ಸಹ ಪ್ರಸಿದ್ಧವಾಗಿದೆ. ನೀವು ಪ್ರಕೃತಿಯ ಆರಾಧಕರಾಗಿದ್ದರೆ ಈ ಸುಂದರ ಗಿರಿಧಾಮಕ್ಕೆ ಒಂದೊಮ್ಮೆಯಾದರೂ ಭೇಟಿ ನೀಡಲೇಬೇಕು.

ಇದನ್ನೂ ಓದಿ: New Year 2025: ಹೊಸ ವರ್ಷದಂದು ಹೂವಿನಿಂದ ಸಿಂಗಾರಗೊಂಡು ಕಂಗೊಳಿಸಿದ ಕುಕ್ಕೆ ಸುಬ್ರಹ್ಮಣ್ಯ!

ಈ ಗಿರಿಧಾಮದಲ್ಲಿ ಕಬ್ಬಿಣದ ಅದಿರು ಯಥೇಚ್ಚವಾಗಿ ಲಭ್ಯವಿರುವುದರಿಂದ ಈ ಪ್ರದೇಶದ ಮಣ್ಣು ಕೆಂಬಣ್ಣದಿಂದ ಕೂಡಿದೆ. ಅಲ್ಲದೆ, ಇದೊಂದು ಗುಂಡಿ (ಕಣಿವೆ ರೀತಿಯ) ಪ್ರದೇಶವಾದ್ದರಿಂದ ಇದಕ್ಕೆ ಕೆಂಪು ಮಣ್ಣಿನ ಗುಂಡಿ ಎಂದು ಕರೆಯಲಾಯಿತು. ಮುಂದೆ ಕ್ರಮೇಣವಾಗಿ ಕೆಮ್ಮಣ್ಣುಗುಂಡಿ ಎಂದು ಬಂದಿದೆ.

ಹಿಂದೆ ಮೈಸೂರು ಸಂಸ್ಥಾನದ ನಾಲ್ಕನೆಯ ಕೃಷ್ಣರಾಜ ಒಡೆಯರ್ ಅವರ ಬೇಸಿಗೆಯ ರಾಜಧಾನಿಯಾಗಿ ಕೆಮ್ಮಣ್ಣುಗುಂಡಿ ಹೆಸರುವಾಸಿಯಾಗಿತ್ತು. ಈ ಕಾರಣದಿಂದಾಗಿ ಈ ಗಿರಿಧಾಮವನ್ನು ಶ್ರೀಕೃಷ್ಣರಾಜೇಂದ್ರ ಗಿರಿಧಾಮ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ. ಒಟ್ಟಿನಲ್ಲಿ ನೀವು ಒಂದೇ ಕಡೆ ಪ್ರಕೃತಿ ಸೌಂದರ್ಯ, ಚಾರಣ, ಸೂರ್ಯೋದಯ, ಸೂರ್ಯಾಸ್ತ, ಒಂದು ಒಳ್ಳೆ ವಿಶ್ರಾಂತಿ ಬೇಕು ಅಂದ್ರೇ ಮಿಸ್ ಮಾಡ್ದೆ ಕೆಮ್ಮಣ್ಣು ಗುಂಡಿಗೆ ಬನ್ನಿ.