KSRTC Bus: ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಬಂದ ಸರ್ಕಾರಿ ಬಸ್- ಕೊನೆಗೂ ಶಕ್ತಿ ಯೋಜನೆ ಲಾಭ ಪಡೆದ ಜನರು | KSRTC buses arrive for the first time since independence to this place in Dakshina Kannada

KSRTC Bus: ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಬಂದ ಸರ್ಕಾರಿ ಬಸ್- ಕೊನೆಗೂ ಶಕ್ತಿ ಯೋಜನೆ ಲಾಭ ಪಡೆದ ಜನರು | KSRTC buses arrive for the first time since independence to this place in Dakshina Kannada

Last Updated:

ಅದರಲ್ಲೂ ಮಂಗಳೂರಿನಿಂದ ಕಾರ್ಕಳಕ್ಕೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ಸರಕಾರಿ ಬಸ್ಸುಗಳನ್ನೇ ಕಂಡಿರಲಿಲ್ಲ. ಇಲ್ಲಿ ಖಾಸಗಿ ಬಸ್ಸುಗಳದ್ದೇ ಪಾರುಪತ್ಯ. ಆದರೆ ಈಗ ಆ ಪಾರುಪತ್ಯಕ್ಕೆ ಬ್ರೇಕ್ ಬಿದ್ದಿದೆ .ಸರಕಾರಿ ಬಸ್ಸುಗಳನ್ನೇ ಕಾಣದ ಮಂಗಳೂರು ಟೂ ಕಾರ್ಕಳ ರೂಟ್ ಗೆ ಕೆ ಎಸ್ ಆರ್ ಟಿ ಸಿ ಭಾಗ್ಯವನ್ನ ರಾಜ್ಯ ಸಾರಿಗೆ ಇಲಾಖೆ ಕರುಣಿಸಿದೆ . ಶತಮಾನದ ಬೇಡಿಕೆಗೆ ಸರಕಾರ ಅಸ್ತು ಎಂದಿದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಖಾಸಗಿ ಬಸ್‌ಗಳದ್ದೇ(Private Buses ) ಪಾರುಪತ್ಯವಿರುವ ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada District)ಅನೇಕ ಪ್ರದೇಶಗಳು ಸರಕಾರದ ಶಕ್ತಿ ಯೋಜನೆಯಿಂದ ವಂಚಿತವಾಗಿದ್ದವು. ಅದರಲ್ಲೂ ಆ ಒಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆ ಎಸ್ ಆರ್ ಟಿ ಸಿ ಸಂಚಾರವೇ(KSRTC) ಇರಲಿಲ್ಲ. ಖಾಸಗಿ ಬಸ್ ಗಳದ್ದೇ ದರ್ಬಾರು. ಆದರೆ ಇದೀಗ ಈ ಪಾರುಪತ್ಯಕ್ಕೆ ಇತಿಶ್ರೀ ಹಾಡಲಾಗಿದೆ. ಸರಕಾರಿ ಬಸ್ ಓಡಾಟಕ್ಕೆ ಸಾರಿಗೆ ಇಲಾಖೆ (Transport Department) ಅಸ್ತು ಎಂದಿದೆ. ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ಸರ್ಕಾರಿ ಬಸ್ ಸೇವೆ ಆರಂಭವಾಗಿದೆ.

ಖಾಸಗಿ ಬಸ್‌ಗಳ ಪಾರುಪತ್ಯಕ್ಕೆ ಬ್ರೇಕ್‌

ಶಕ್ತಿ ಯೋಜನೆ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ. ಈ ಯೋಜನೆಯಿಂದ ಕೆ ಎಸ್ ಆರ್ ಟಿಸಿ ಬಸ್ಸುಗಳು ಮಹಿಳೆಯರಿಂದ ತುಂಬಿ ತುಳುಕಿದ್ದವು. ಇಡೀ ರಾಜ್ಯದ ಮಹಿಳೆಯರು ಸಂಭ್ರಮಿಸುತ್ತಿದ್ದರೂ ದಕ್ಷಿಣ ಕನ್ನಡದ ಒಂದಿಷ್ಟು ಪ್ರದೇಶದ ಮಹಿಳೆಯರಲ್ಲಿ ಕೊರಗಿತ್ತು. ಯಾಕಂದ್ರೆ ಈ ಪ್ರದೇಶಗಳಲ್ಲಿ ಸರಕಾರಿ ಬಸ್ಸುಗಳ ಸಂಚಾರವೇ ಇರಲಿಲ್ಲ. ಸರಕಾರಿ ಬಸ್‌ಗಳಿಗಿಂತ ಖಾಸಗಿ ಬಸ್‌ಗಳದ್ದೇ ಪಾರುಪತ್ಯವಿತ್ತು . ಅದರಲ್ಲೂ ಮಂಗಳೂರಿನಿಂದ ಕಾರ್ಕಳಕ್ಕೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ಸರಕಾರಿ ಬಸ್ಸುಗಳನ್ನೇ ಕಂಡಿರಲಿಲ್ಲ. ಇಲ್ಲಿ ಖಾಸಗಿ ಬಸ್ಸುಗಳದ್ದೇ ಪಾರುಪತ್ಯ. ಆದರೆ ಈಗ ಆ ಪಾರುಪತ್ಯಕ್ಕೆ ಬ್ರೇಕ್ ಬಿದ್ದಿದೆ .ಸರಕಾರಿ ಬಸ್ಸುಗಳನ್ನೇ ಕಾಣದ ಮಂಗಳೂರು ಟೂ ಕಾರ್ಕಳ ರೂಟ್ ಗೆ ಕೆ ಎಸ್ ಆರ್ ಟಿ ಸಿ ಭಾಗ್ಯವನ್ನ ರಾಜ್ಯ ಸಾರಿಗೆ ಇಲಾಖೆ ಕರುಣಿಸಿದೆ . ಶತಮಾನದ ಬೇಡಿಕೆಗೆ ಸರಕಾರ ಅಸ್ತು ಎಂದಿದೆ.

ಇದನ್ನೂ ಓದಿ: Air India Express: ಹೊಸವರ್ಷಕ್ಕೆ ಮಂಗಳೂರಿನಿಂದ ಸಿಂಗಾಪುರ ನಡುವೆ ನೇರ ವಿಮಾನ ಸಂಚಾರ

ನವೆಂಬರ್‌ 5ರಂದು ನಡೆದಿದ್ದ ಆರ್‌ಟಿಎ ಸಭೆ

ಮಂಗಳೂರು ಟೂ ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಸರಕಾರಿ ಬಸ್ ಗಳನ್ನ ಓಡಿಸಬೇಕು ಅನ್ನೋದು ಹಲವು ದಶಕಗಳ ಬೇಡಿಕೆ. ಆದರೆ ಈ ಬೇಡಿಕೆಗೆ ರಾಜ್ಯ ಸಾರಿಗೆ ಇಲಾಖೆ ಅಸ್ತು ಅಂದರೂ ಖಾಸಗಿ ಬಸ್ ಮಾಲಕರು ವಿರೋಧ ವ್ಯಕ್ತಪಡಿಸುತ್ತಿದ್ರು. ದಿನ ನಿತ್ಯ ಈ ರೂಟ್ ನಲ್ಲಿ ಸಾವಿರಾರು ಪ್ರಯಾಣಿಕರು ಕಾರ್ಕಳದಿಂದ ಮಂಗಳೂರಿಗೆ ಮೂಡುಬಿದಿರೆ ಮೂಲಕ ಪ್ರಯಾಣಿಸುತ್ತಾರೆ. ಶಕ್ತಿ ಯೋಜನೆ ಅನುಷ್ಠಾನವಾದ ಬಳಿಕವಂತೂ ಸರಕಾರಿ ಬಸ್ಸುಗಳ ಬೇಡಿಕೆ ಹೆಚ್ಚಿತ್ತು .ಬಸ್ಸು ಮಂಜೂರಾದರೂ ಖಾಸಗಿ ಲಾಭಿಯಿಂದ ಸಂಕಷ್ಟ ಎದುರಾಗಿತ್ತು. ಮಂಗಳೂರು-ಮೂಡುಬಿದಿರೆ-ಕಾರ್ಕಳ ಮಧ್ಯೆ 8 ಬಸ್‌ಗಳ ಏಳು ಸಿಂಗಲ್‌ ಟ್ರಿಪ್‌ಗಾಗಿ ಕೆಎಸ್‌ಆರ್‌ಟಿಸಿಯಿಂದ 2014ರಲ್ಲಿಅರ್ಜಿ ಸಲ್ಲಿಸಲಾಗಿತ್ತು. ಸದ್ಯ ಈ ವಿಷಯದ ಬಗ್ಗೆ ನವೆಂಬರ್‌ 5ರಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅಧ್ಯಕ್ಷತೆಯಲ್ಲಿಆರ್‌ಟಿಎ ಸಭೆ ನಡೆದು, ಪರ-ವಿರೋಧ ವಾದ ಮಂಡನೆಯಾಗಿತ್ತು. ಉಭಯ ಕಡೆಯ ವಾದ ಆಲಿಸಿದ ಡಿಸಿ, ಆದೇಶ ಕಾಯ್ದಿರಿಸಿದ್ದಾರೆ.

ಹಾಗಾಗಿ ತಾತ್ಕಾಲಿಕ ಪರವಾನಗಿ ಮೂಲಕ ಸರಕಾರಿ ಬಸ್ ಸಂಚಾರ ಆರಂಭವಾಗಿದೆ. ಪ್ರಾಯೋಗಿಕವಾಗಿ ನಾಲ್ಕು ಕೆ ಎಸ್ ಆರ್ ಟಿ ಸಿ ಬಸ್ ಗಳು ಸಂಚಾರ ಶುರು ಮಾಡುತ್ತವೆ. ಮುಂಜಾನೆಯಿಂದ ತಲಾ ಎರಡು ಬಸ್ಸು ಮಂಗಳೂರಿನಿಂದ ಕಾರ್ಕಳಕ್ಕೆ ಹಾಗೂ ಕಾರ್ಕಳದಿಂದ ಮಂಗಳೂರಿಗೆ ಸಂಚರಿಸುತ್ತೆ. ಪ್ರಯಾಣಿಕರು ಅದರಲ್ಲೂ ಪ್ರಮುಖವಾಗಿ ಮಹಿಳೆಯರು ಇದರ ಪ್ರಯೋಜನ ಪಡೆದುಕೊಳ್ಳಿ ಎಂದು ಕೆಎಸ್‌ಆರ್‌ಟಿಸಿ ಹಿರಿಯ ಪ್ರಾದೇಶಿಕ ನಿಯಂತ್ರಕ ರಾಜೇಶ್ ಶೆಟ್ಟಿ ಮನವಿ ಮಾಡಿದ್ದಾರೆ.

ಸದ್ಯ ಸರಕಾರಿ ಬಸ್ ಮಂಜೂರಾದ ಬೆನ್ನಲ್ಲೇ ಕಾರ್ಕಳ, ಮೂಡುಬಿದ್ರೆ, ಕೈಕಂಬ ವ್ಯಾಪ್ತಿಯ ಮಹಿಳೆಯರು ಫುಲ್ ಖುಷಿ ಆಗಿದ್ದಾರೆ. ಶಕ್ತಿ ಯೋಜನೆಯಿಂದ ವಂಚಿತವಾದ ಕೊರಗು ದೂರವಾದ ಹಿನ್ನಲೆ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಾಯೋಗಿಕ ಸಂಚಾರದ ಹಂತದಲ್ಲೇ ಜನರಿಂದ ಉತ್ತಮ ಸ್ಪಂದನೆ ದೊರಕುತ್ತಿದೆ. ಮುಂದೆ ಇನ್ನಷ್ಟು ಸಂಖ್ಯೆಯಲ್ಲಿ ಕೆ ಎಸ್ ಆರ್ ಟಿ ಸಿ ಬಸ್ಸುಗಳಿಗೆ ಬೇಡಿಕೆ ಬರೋ ಸಾಧ್ಯತೆಯೂ ಇದೆ. ಖಾಸಗಿಯವರ ನಿರಂತರ ಲಾಭಿಗೆ ಎಲ್ಲಾ ಅಧಿಕಾರಿಗಳು ಮಣಿದಿದ್ರು. ಆದರೆ ಕೆಎಸ್ ಆರ್ ಟಿ ಸಿ ಡಿಸಿ ರಾಜೇಶ್ ಶೆಟ್ಟಿಯವರ ನಿರಂತರ ಶ್ರಮದ ಪರಿಣಾಮ ಜನ ಕೊನೆಗೂ ಶಕ್ತಿಯೋಜನೆಯ ಲಾಭ ಪಡೆಯುವಂತೆ ಆಗಿದೆ.