LSG vs MI: ಸೂರ್ಯಕುಮಾರ್​, ರಿಕಲ್ಟನ್ ಅಬ್ಬರ! ಲಖನೌ ಸೂಪರ್ ಜೈಂಟ್ಸ್​​ಗೆ 216 ರನ್​ಗಳ ಕಠಿಣ ಗುರಿ ನೀಡಿದ ಮುಂಬೈ Surya and Rickelton Unleash mi sets 216 Runs Target for lsg

LSG vs MI: ಸೂರ್ಯಕುಮಾರ್​, ರಿಕಲ್ಟನ್ ಅಬ್ಬರ! ಲಖನೌ ಸೂಪರ್ ಜೈಂಟ್ಸ್​​ಗೆ 216 ರನ್​ಗಳ ಕಠಿಣ ಗುರಿ ನೀಡಿದ ಮುಂಬೈ Surya and Rickelton Unleash mi sets 216 Runs Target for lsg

ಮುಂಬೈಗೆ ಆರಂಭಿಕ ಆಘಾತ

ಈ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪವರ್​ ಪ್ಲೇನಲ್ಲೆ ವಿಕೆಟ್ ಕಳೆದುಕೊಳ್ಳುತ್ತಿದೆ. ಕಳೆದ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಬಿಟ್ಟರೆ ಎಲ್ಲಾ ಪಂದ್ಯಗಳಲ್ಲಿ ಪವರ್​ ಪ್ಲೇನಲ್ಲಿ ವಿಕೆಟ್ ಕಳೆದುಕೊಂಡಿದೆ. ಇಂದೂ ಕೂಡ ಕಳೆದ 2 ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದ ರೋಹಿತ್ ಶರ್ಮಾ ಕೇವಲ 5 ಎಸೆತಗಳಲ್ಲಿ 2 ಸಿಕ್ಸರ್​ಗಳ ಸಹಿತ 12 ರನ್​ಗಳಿಸಿ ಗಾಯದಿಂದ ಚೇತರಿಸಿಕೊಂಡು ಬಂದಿರುವ ಮಯಾಂಕ್ ಯಾದವ್​ಗೆ ವಿಕೆಟ್ ಒಪ್ಪಿಸಿದರು.

ಆದರೆ 2ನೇ ವಿಕೆಟ್​ಗೆ ಜೊತೆಯಾದ ವಿಲ್ ಜಾಕ್ಸ್ ಹಾಗೂ ರಿಕಲ್ಟನ್​ 55 ರನ್​​ಗಳ ಜೊತೆಯಾಟ ನೀಡಿದರು. ರಿಕಲ್ಟನ್ 32 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್​ಗಳ ಸಹಿತ 58 ರನ್​ಗಳಿಸಿದರು. ಇವರ ವಿಕೆಟ್ ನಂತರ ಮುಂಬೈ ಬ್ಯಾಟರ್​ಗಳು ದೊಡ್ಡ ಜೊತೆಯಾಟ ನೀಡುವಲ್ಲಿ ವಿಫಲರಾದರು. ವಿಲ್ ಜಾಕ್ಸ್ 21 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್​ ಸಹಿತ 29 ರನ್ಗೆ ಔಟ್ ಆದರೆ, ತಿಲಕ್ ವರ್ಮಾ ಕೇವಲ 6 ರನ್​ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಾಯಕ ಹಾರ್ದಿಕ್ ಪಾಂಡ್ಯ ಮಯಾಂಕ್ ಯಾದವ್​ ಬೌಲಿಂಗ್​​ನಲ್ಲಿ ಕೇವಲ 5 ರನ್​ಗಳಿಸಿ ಔಟ್ ಆದರು.

ಇದನ್ನೂ ಓದಿ: IPL ಇತಿಹಾಸದಲ್ಲಿ ಹೆಚ್ಚು ಪಂದ್ಯ ಮಳೆಗೆ ಆಹುತಿಯಾಗಿರುವುದು ಯಾವ ತಂಡದ್ದೂ ಗೊತ್ತಾ?

ಅಬ್ಬರಿಸಿದ ಸೂರ್ಯಕುಮಾರ್ ಯಾದವ್​

ಅದ್ಭುತ ಫಾರ್ಮ್​​ನಲ್ಲಿರುವ ಸೂರ್ಯಕುಮಾರ್ ಯಾದವ್​ ಲಖನೌ ಬೌಲರ್​ಗಳನ್ನ ಸಮರ್ಥವಾಗಿ ಎದುರಿಸಿದರು. ಅವರು 28 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್​ಗಳ ಸಹಿತ 54 ರನ್​ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ನಮನ್ ಧೀರ್  11  ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್​ಗಳ ಸಹಿತ ಅಜೇಯ25 ರನ್ ಹಾಗೂ ಕಾರ್ಬಿನ್ ಬೌಷ್ 10 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 20 ರನ್​ಗಳಸಿಇ ತಂಡದ ಮೊತ್ತವನ್ನು 200ರ ಗಡಿ ದಾಟಲು ನೆರವಾದರು.

ತಂಡದಲ್ಲಿ ಬದಲಾವಣೆ

ಈ ಪಂದ್ಯದಲ್ಲಿ ಲಖನೌ ಒಂದು ಬದಲಾವಣೆ ಮಾಡಿದೆ. ಗಾಯದಿಂದ ಐಪಿಎಲ್​ ಮೊದಲಾರ್ಧ ಮಿಸ್ ಮಾಡಿಕೊಂಡಿದ್ದ ವೇಗಿ ಮಯಾಂಕ್ ಯಾದವ್ ತಂಡಕ್ಕೆ ಮರಳಿದ್ದಾರೆ. ಶಾರ್ದೂಲ್ ಠಾಕೂರ್ ಬದಲಿಗೆ ಅವರಿಗೆ ಅವಕಾಶ ನೀಡಲಾಗಿದೆ. ಮುಂಬೈ ತಂಡದಲ್ಲೂ ಎರಡು ಬದಲಾವಣೆ ಮಾಡಲಾಗಿದೆ. ಮಿಚೆಲ್ ಸ್ಯಾಂಟ್ನರ್ ಬದಲಿಗೆ ಕರಣ್ ಶರ್ಮಾ ಸ್ಥಾನ ಪಡೆದಿದ್ದಾರೆ. ಕಾರ್ಬಿನ್ ಬಾಷ್ ಮುಂಬೈ ಇಂಡಿಯನ್ಸ್ ಪರ ಐಪಿಎಲ್ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ: DC vs RCB: ಆರ್​ಸಿಬಿ ವಿರುದ್ಧ ಸೇಡಿನ ಪಂದ್ಯಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್‌ ಆನೆ ಬಲ!

ಎರಡೂ ಪ್ಲೇಯಿಂಗ್ ಇಲೆವೆನ್

ಮುಂಬೈ ಇಂಡಿಯನ್ಸ್  : ರೋಹಿತ್ ಶರ್ಮಾ, ರಿಯಾನ್ ರಿಕೆಲ್ಟನ್ (ವಿಕೀ) ವಿಲ್ ಜ್ಯಾಕ್ಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ಸಿ), ನಮನ್ ಧೀರ್, ಕಾರ್ಬಿನ್ ಬಾಷ್, ಟ್ರೆಂಟ್ ಬೌಲ್ಟ್, ದೀಪಕ್ ಚಾಹರ್, ಕರಣ್ ಶರ್ಮಾ.

ಲಕ್ನೋ ಸೂಪರ್ ಜೈಂಟ್ಸ್: ಐಡೆನ್ ಮಾರ್ಕ್ರಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ/ ವಿಕೆಟ್ ಕೀಪರ್), ಅಬ್ದುಲ್ ಸಮದ್, ಆಯುಷ್ ಬಡೋನಿ, ದಿಗೇಶ್ ಸಿಂಗ್ ರಾಠಿ, ರವಿ ಬಿಷ್ಣೋಯ್, ಅವೇಶ್ ಖಾನ್, ಪ್ರಿನ್ಸ್ ಯಾದವ್, ಮಯಾಂಕ್ ಯಾದವ್.