Mangaluru: ಭೂಗರ್ಭದಲ್ಲಿ ಅಡಗಿತ್ತು ದೈವ ಸಾನಿಧ್ಯ; 700 ವರ್ಷದ ಸರ್ಪ ರಹಸ್ಯ ಬಯಲು! | 700 old temple found in buried land in Pedamale mangaluru

Mangaluru: ಭೂಗರ್ಭದಲ್ಲಿ ಅಡಗಿತ್ತು ದೈವ ಸಾನಿಧ್ಯ; 700 ವರ್ಷದ ಸರ್ಪ ರಹಸ್ಯ ಬಯಲು! | 700 old temple found in buried land in Pedamale mangaluru

Last Updated:

ನಾಗಬನ ಉತ್ಖನನ ಮಾಡುವಾಗ ದೈವಸ್ಥಾನದ ದಂಬೆಕಲ್ಲು ಪತ್ತೆಯಾಗಿತ್ತು. ಇದನ್ನ ಪರಿಶೀಲಿಸಿದ್ದ ಪುರಾತತ್ವ ತಜ್ಞರು ಇದು 700 ವರ್ಷಗಳ ಹಳೆಯ ಕಲ್ಲು ಎಂದಿದ್ದಾರೆ.

ಸಾಂದರ್ಭಿಕ ಚಿತ್ರಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಗಳೂರು: ಅದು 700 ವರ್ಷಗಳ ಹಿಂದಿನ ದೇಗುಲ (Old Temple). ಭೂಗರ್ಭ ಸೇರಿ ಅದೆಷ್ಟು ವರ್ಷ ಆಗಿತ್ತೋ ಒಂದೂ ಗೊತ್ತಿಲ್ಲ. ಇತ್ತೀಚಿಗೆ ಊರಲ್ಲಿ (Village) ಶುರುವಾಗಿದ್ದ ಸಮಸ್ಯೆಗಳು, ದೈವದ ಸನ್ನಿಧಿಯನ್ನ (Dakshina Kannada) ಗುರುತಿಸುವಂತೆ ಮಾಡಿದೆ.

ತುಳುನಾಡಿನ ಮಣ್ಣಿನ ಮಹಿಮೆಯೇ ಅಂತದ್ದು, ಇಲ್ಲಿನ ದೈವಗಳು ತೋರೋ ಪವಾಡಕ್ಕೆ ಮನುಷ್ಯರ ಬಳಿ ಉತ್ತರವೇ ಇಲ್ಲ. ವಿಜ್ಞಾನಕ್ಕೂ ನಿಲುಕದಂತಾ ಅದೆಷ್ಟೋ ಅಚ್ಚರಿಗಳು ನಡೆದೋಗಿವೆ. ದೈವಗಳ ಕುರುಹು ಹಿಡಿದು ಹೊರಟವರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಈಗ ಮಂಗಳೂರಿನ ಹೊರವಲಯದಲ್ಲಿರುವ ಪೆದಮಲೆಯಲ್ಲೂ ಇಂತದ್ದೇ ಘಟನೆ ನಡೆದಿದೆ. ಬರೋಬ್ಬರಿ 300 ವರ್ಷಗಳ ಹಿಂದೆ ಮಣ್ಣಲ್ಲಿ ಹುದುಗಿ ಹೋಗಿದ್ದ ದೈವಶಕ್ತಿಯೊಂದು ಈಗ ಗೋಚರವಾಗಿದೆ.

ನಾಗನ ನಡೆಯೇ ದೊಡ್ಡ ಯಕ್ಷಪ್ರಶ್ನೆ!

ಮಂಗಳೂರಿನ ಪೆದಮಲೆ ಅನ್ನೋ ಊರಲ್ಲಿ ಇತ್ತೀಚಿಗೆ ಹತ್ತಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದವು. ಊರಲ್ಲಿ ಎಲ್ಲೇ ಹೋದರೂ ನಾಗಸರ್ಪ ಪ್ರತ್ಯಕ್ಷ ಆಗ್ತಿತ್ತು. ಕೊನೆ ಕೊನೆಗೆ ಪ್ರತಿ ಮನೆಯಲ್ಲೂ ನಾಗನ ದರ್ಶನ ಶುರುವಾಗಿತ್ತು. ಹೀಗಾಗಿ ಇಡೀ ಊರಿನವರಿಗೆ ಈ ನಾಗನ ನಡೆಯೇ ದೊಡ್ಡ ಯಕ್ಷಪ್ರಶ್ನೆಯಾಗಿತ್ತು. ದಿಕ್ಕು ಕಾಣದಂತಾದ ಗ್ರಾಮಸ್ಥರು, ಪ್ರಶ್ನಾಚಿಂತನೆ ಮೊರೆ ಹೋಗಿದ್ದಾರೆ. ಆಗಲೇ ನೋಡಿ ನಾಗನ ಸಾನಿಧ್ಯವಿರೋ ಸುಳಿವು ಸಿಕ್ಕಿದ್ದು.

ಸ್ವಲ್ಪ ಕ್ಲೀನ್ ಮಾಡಿಕೊಂಡು ಹೋಗುವಾಗ ವಾಜಿಲದೈ ದೈವದ ದಂಬೆ ಕಲ್ಲು ನಿಂತಿದನ್ನು ಎಲ್ಲರೂ ನೋಡಿದ್ದರು. ಈ ಬಗ್ಗೆ ವೆಂಕಟಕೃಷ್ಣ ಭಟ್ಟರ ಬಳಿ ಇದಕ್ಕೆ ಸಂಬಂಧಿಸಿದ ದಾಖಲೆಗಳು ಇದ್ದವು ಎಂದು ವಾಜಿಲ್ಲಾಯ ದೈವಸ್ಥಾನ ಟ್ರಸ್ಟ್ ಅಧ್ಯಕ್ಷ ಗಿರಿಧರ್ ಶೆಟ್ಟಿ ತಿಳಿಸಿದ್ದಾರೆ.

ಇದನ್ನೂ ಓದಿ: Dakshina Kannada: ಈ ಗ್ರಾಮದಲ್ಲಿ ಸಂಭವಿಸುತ್ತಿದ್ದ ಆಕಸ್ಮಿಕ ಸಾವುಗಳಿಗೆ ಊರಿನ ಜನ ಹುಡುಕಿದ ಪರಿಹಾರವೇನು ಗೊತ್ತಾ?

ದೈವಸ್ಥಾನದ ದಂಬೆಕಲ್ಲು ಪತ್ತೆ

ಸುಮಾರು 700 ವರ್ಷಗಳ ಹಿಂದೆ ಇಲ್ಲೊಂದು ದೇವಸ್ಥಾನ ನಿರ್ಮಾಣ ಗೊಂಡಿತ್ತಂತೆ. ಆದರೆ, ಆಮೇಲೆ ಅದೇನ್​ ಆಯ್ತೋ ಗೊತ್ತಿಲ್ಲ. ಸುಮಾರು 300 ವರ್ಷಗಳ ನಂತರ ನಾಗದೇವಸ್ಥಾನ ಭೂಗರ್ಭ ಸೇರಿತ್ತು. ನಂತರದ ಪೀಳಿಗೆಯವರಿಗೆ ಇಲ್ಲೊಂದು ದೈವಸ್ಥಾನವಿತ್ತು ಅನ್ನೋದರ ಕುರುಹು ಸಹ ಇರ್ಲಿಲ್ಲ. ಆದರೆ ಈಗ ಅದೇ ದೈವ ತನ್ನ ಇರುವಿಕೆಯನ್ನ ತೋರಿಸಿಕೊಟ್ಟಿದೆ. ಹೀಗಾಗಿ ನಾಗಬನ ಉತ್ಖನನ ಮಾಡುವಾಗ ದೈವಸ್ಥಾನದ ದಂಬೆಕಲ್ಲು ಪತ್ತೆಯಾಗಿತ್ತು. ಇದನ್ನ ಪರಿಶೀಲಿಸಿದ್ದ ಪುರಾತತ್ವ ತಜ್ಞರು ಇದು 700 ವರ್ಷಗಳ ಹಳೆಯ ಕಲ್ಲು ಎಂದಿದ್ದಾರೆ. ಹೀಗಾಗಿ ಊರಿನವ್ರೇ ಸೇರ್ಕೊಂಡು ಬೃಹತ್​​ ದೇಗುಲ ನಿರ್ಮಾಣ ಮಾಡ್ತಿದ್ದಾರೆ.

ಭಾವೈಕ್ಯತೆ ಸಾರೋ ಕೆಲಸ

ದೇಗುಲದ ನಿರ್ಮಾಣಕ್ಕೆ ಊರಿನವರೇ ಜಾಗ ನೀಡಿದ್ದು, ಕ್ರಿಶ್ಚಿಯನ್​​ ಸಮುದಾಯದ ಉದ್ಯಮಿಯೊಬ್ಬರು ರಸ್ತೆ ನಿರ್ಮಾಣದ ಜವಾಬ್ದಾರಿ ಹೊತ್ಕೊಂಡಿದ್ದಾರೆ. ಜೊತೆಗೆ ಲಕ್ಷಾಂತರ ರೂಪಾಯಿ ದೇಣಿಗೆಯನ್ನೂ ನೀಡಿದ್ದಾರಂತೆ. ಈ ಮೂಲಕ ಭಾವೈಕ್ಯತೆ ಸಾರೋ ಕೆಲಸ ಮಾಡಿದ್ದಾರೆ.

ನನ್ನ ಕೈಯಿಂದ ಎಷ್ಟು ಸಹಾಯ ಮಾಡಲು ಆಗಿದೆ ಅಷ್ಟು ದಾನ ಮಾಡಿದ್ದೇನೆ. ದೇವಸ್ಥಾನ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮುಂದೇ ಕೂಡ ಇದೇ ರೀತಿ ನಡೆದುಕೊಳ್ಳುತ್ತೇವೆ ಎಂದು ದೇವಸ್ಥಾನಕ್ಕೆ ದೇಣಿಗೆ ನೀಡಿದ್ದ ಮಿನೆಜಸ್ ತಿಳಿಸಿದ್ದಾರೆ.

ದೈವಸ್ಥಾನ ನಿರ್ಮಾಣದ ಕಾರ್ಯ ಬಹುತೇಕ ಕೊನೇ ಹಂತಕ್ಕೆ ಬಂದಿದ್ದು, ಫೆಬ್ರವರಿ 18ರಂದು ಬ್ರಹ್ಮಕಲಶ ನಿರ್ಮಾಣಗೊಳ್ಳಲಿದೆ. ಒಟ್ನಲ್ಲಿ ವಿಜ್ಞಾನ ಎಷ್ಟೇ ಮುಂದುವರಿದ್ರೂ, ದೈವ ಹಾಗೂ ದೇವರ ಮುಂದೆ ಮನುಷ್ಯ ಏನಿಲ್ಲ ಅನ್ನೋದು ಮತ್ತೆ ಮತ್ತೆ ಪ್ರೂವ್​ ಆಗ್ತಿದೆ. (ವರದಿ: ಕಿಶನ್ ಶೆಟ್ಟಿ, ನ್ಯೂಸ್​ 18, ಮಂಗಳೂರು)