Mangaluru Dasara 2024: ಬೃಹತ್‌ ಮೆರವಣಿಗೆಯೊಂದಿಗೆ ಸಂಪನ್ನಗೊಂಡ ಮಂಗಳೂರು ದಸರಾ- ಲಕ್ಷಾಂತರ ಜನರು ಭಾಗಿ | Mangaluru Dasara 2024 End with Lakh of people presence

Mangaluru Dasara 2024: ಬೃಹತ್‌ ಮೆರವಣಿಗೆಯೊಂದಿಗೆ ಸಂಪನ್ನಗೊಂಡ ಮಂಗಳೂರು ದಸರಾ- ಲಕ್ಷಾಂತರ ಜನರು ಭಾಗಿ | Mangaluru Dasara 2024 End with Lakh of people presence

Last Updated:

ಸರ್ಕಾರದ ಯಾವುದೇ ಅನುದಾನವಿಲ್ಲದೆ ಇಷ್ಟು ಅಚ್ಚುಕಟ್ಟಾಗಿ ನಡೆಯುವ ಈ ದಸರಾವನ್ನು ಭಕ್ತರ ಸಹಕಾರದಿಂದ ಅದ್ದೂರಿಯಾಗಿ ನಡೆಸಲಾಗುತ್ತದೆ.

X

ವಿಡಿಯೋ ಇಲ್ಲಿ ನೋಡಿ

ಜಗತ್ ಪ್ರಸಿದ್ದ ಮಂಗಳೂರು ದಸರಾ ಗೆ ಸಂಭ್ರಮದ ತೆರೆಬಿದ್ದಿದೆ. ದಸರಾ ಮಹೋತ್ಸವ ನಡೆಯುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಭಾನುವಾರ ಸಂಜೆ 4 ಗಂಟೆಗೆ ದಸರಾ ಮೆರವಣಿಗೆ ಆರಂಭಗೊಂಡಿತು. ಸುಮಾರು 60ಕ್ಕೂ ಅಧಿಕ ಸ್ತಬ್ದಚಿತ್ರಗಳು ಈ ದಸರಾ ಮೆರವಣಿಗೆಗೆ ಮೆರಗು ನೀಡಿದವು. ದೇಶ ವಿದೇಶಗಳಿಂದ ಬಂದ ಲಕ್ಷಾಂತರ ಮಂದಿ ಭಕ್ತರು ಈ ದಸರಾ ಮೆರವಣಿಗೆಗೆ ಸಾಕ್ಷಿಯಾದರು.

ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಕಳೆದ 10 ದಿನಗಳಿಂದ ಅದ್ದೂರಿಯಾಗಿ ನಡೆದ ನವರಾತ್ರಿ ಮಹೋತ್ಸವಕ್ಕೆ ದಸರಾ ಮೆರವಣಿಗೆಯೊಂದಿಗೆ ತೆರೆ ಬಿದ್ದಿತು. ಕಳೆದ ಅಕ್ಟೋಬರ್ 3 ರಂದು ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರು ದೀಪ ಬೆಳಗಿಸುವುದರೊಂದಿಗೆ ಆರಂಭಗೊಂಡ ಈ ದಸರಾ ಮೆರವಣಿಗೆ ಭಾನುವಾರ ಬೃಹತ್ ಮೆರವಣಿಗೆಯೊಂದಿಗೆ ಸಂಪನ್ನಗೊಂಡಿತು.

ಇದನ್ನೂ ಓದಿ: Bengaluru Yuva Dasara: ಜನರನ್ನು ನಗೆಗಡಲಲ್ಲಿ ತೇಲಿಸಿದ ಹಿರೇಮಗಳೂರು ಕಣ್ಣನ್ ಹರಟೆ

ಸಂಜೆ ಸುಮಾರು 4 ಗಂಟೆಗೆ ಕ್ಷೇತ್ರದಿಂದ ಹೊರಟ ಈ ಬೃಹತ್ ದಸರಾ ಮೆರವಣಿಗೆಯಲ್ಲಿ ವಿಘ್ನನಿವಾರಕ ಗಣೇಶ, ಆದಿಶಕ್ತಿ, ನವದುರ್ಗೆಯರು ಹಾಗೂ ಶಾರದಾ ಮಾತೆಯರ ಮೂರ್ತಿಗಳನ್ನು ಸ್ಥಬ್ದ ಚಿತ್ರದೊಂದಿಗೆ ಕೊಂಡೊಯ್ಯಲಾಯಿತು. ಬೃಹತ್ ದಸರಾ ಮೆರವಣಿಗೆ ಕೇಂದ್ರದ ಮಾಜಿ ಸಚಿವ ದಸರಾ ಮಹೋತ್ಸವದ ರೂವಾರಿ ಬಿ.ಜನಾರ್ದನ ಪೂಜಾರಿ ನೇತೃತ್ವದಲ್ಲಿ ನಡೆಯಿತು. ಸರ್ಕಾರದ ಯಾವುದೇ ಅನುದಾನವಿಲ್ಲದೆ ಇಷ್ಟು ಅಚ್ಚುಕಟ್ಟಾಗಿ ನಡೆಯುವ ಈ ದಸರಾವನ್ನು ಭಕ್ತರ ಸಹಕಾರದಿಂದ ಅದ್ದೂರಿಯಾಗಿ ನಡೆಸಲಾಗುತ್ತದೆ.

ಸುಮಾರು ಒಂದು ಸಾವಿರ ಆಕರ್ಷಕ ಕೇರಳಾ ಕೊಡೆಗಳು, ನೂರಕ್ಕೂ ಅಧಿಕ ಬ್ಯಾಂಡ್ ಸೆಟ್‌ಗಳು, ಸುಮಾರು 50 ಜಾನಪದ ಕುಣಿತಗಳ ತಂಡ, ಕೇರಳಾ ಚೆಂಡೆವಾದನ,ಕೊಂಬು ಕಹಳೆ,ದೇಶದ ಇತಿಹಾಸವನ್ನು ಬಿಂಬಿಸುವ ಸುಮಾರು 63 ಸ್ಥಬ್ದಚಿತ್ರಗಳು ಈ ದಸರಾ ಮೆರವಣಿಗೆಗೆ ಮೆರಗು ನೀಡಿತು. ದಾರಿಯುದ್ದಕ್ಕೂ ಆಕರ್ಷಕ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದರು.ಇದೊಂದು ಜಗತ್ ಪ್ರಸಿದ್ದ ದಸರಾ ಮೆರವಣಿಗೆ ಎಂದು ನೋಡಿದ ಜನ ಸಂತಸ ವ್ಯಕ್ತಪಡಿಸಿದರು.

ಶ್ರೀ ಕ್ಷೇತ್ರದಿಂದ ಭಾನುವಾರ ಸಂಜೆ ಹೊರಟ ಈ ಮೆರವಣಿಗೆ ನಗರದ ಸುಮಾರು 7 ಕಿಲೋ ಮೀಟರ್ ಸಾಗಿದ್ದು, ಸೋಮವಾರ ಮುಂಜಾನೆ 8 ಗಂಟೆಗೆ ಮತ್ತೆ ಶ್ರೀ ಕ್ಷೇತ್ರಕ್ಕೆ ತಲುಪಿದೆ. ಕ್ಷೇತ್ರದ ಪುಷ್ಕರಣಿಯಲ್ಲಿ ಗಣೇಶ, ಆದಿಶಕ್ತಿ, ಶಾರದಾ ಮಾತೆ ಹಾಗೂ ನವದುರ್ಗೆಯರ ಮೂರ್ತಿಯನ್ನು ವಿಸರ್ಜಿಸುವ ಮೂಲಕ ದಸರಾ ಮೆರವಣಿಗೆಗೆ ತೆರೆಬಿದ್ದಿದೆ. ಈ ದಸರಾ ಇನ್ನಷ್ಟು ಪ್ರಸಿದ್ದಿ ಹೊಂದಲಿ ಅನ್ನೋದು ಎಲ್ಲರ ಆಶಯ.