Masters League: ಕನ್ನಡಿಗನ ಮಾರಕ ದಾಳಿಗೆ ವಿಂಡೀಸ್ ಉಡೀಸ್! ಮಾಸ್ಟರ್ಸ್‌ಲೀಗ್ ಟ್ರೋಫಿ ಗೆದ್ದು ಬೀಗಿದ ಭಾರತ |India Masters beat West Indies by 6 wickets in Masters League Cricket Trophy final

Masters League: ಕನ್ನಡಿಗನ ಮಾರಕ ದಾಳಿಗೆ ವಿಂಡೀಸ್ ಉಡೀಸ್! ಮಾಸ್ಟರ್ಸ್‌ಲೀಗ್ ಟ್ರೋಫಿ ಗೆದ್ದು ಬೀಗಿದ ಭಾರತ |India Masters beat West Indies by 6 wickets in Masters League Cricket Trophy final

Last Updated:

ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಾಸ್ಟರ್ಸ್‌ ಲೀಗ್ ಫೈನಲ್ ಪಂದ್ಯ ಗೆದ್ದು ಬೀಗಿದೆ.

ಇಂಡಿಯಾ ಮಾಸ್ಟರ್ಸ್ vs ವಿಂಡೀಸ್ ಮಾಸ್ಟರ್ಸ್
ಇಂಡಿಯಾ ಮಾಸ್ಟರ್ಸ್ vs ವಿಂಡೀಸ್ ಮಾಸ್ಟರ್ಸ್
ಇಂಡಿಯಾ ಮಾಸ್ಟರ್ಸ್ vs ವಿಂಡೀಸ್ ಮಾಸ್ಟರ್ಸ್

ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಾಸ್ಟರ್ಸ್‌ ಲೀಗ್ ಫೈನಲ್ (Masters League Final) ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ (Sachin Tendulkar) ನಾಯಕತ್ವ ಇಂಡಿಯಾ ಮಾಸ್ಟರ್ಸ್ (India Masters) ತಂಡ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ತಂಡದ ಕನ್ನಡಿಗ ವಿನಯ್ ಕುಮಾರ್ ಬೌಲಿಂಗ್ ದಾಳಿ ಎದುರಿಸಲಾಗದೆ ಸಾಧಾರಣ ಮೊತ್ತ ಪೇರಿಸಿತು. ವಿಂಡೀಸ್ ಪರ ಆರಂಭಿಕ ಆಟಗಾರ ಡ್ವೆನ್ ಸ್ಮಿತ್ 48 ಹಾಗೂ ಲೆಂಡಲ್ ಸಿಮೋನ್ಸ್ 57 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 158 ರನ್ ಗಳಿಸಿದರು.

ಭಾರತದ ಪರವಾಗಿ ಅಮೋಘ ಬೌಲಿಂಗ್ ಪ್ರದರ್ಶಿಸಿದ ಕನ್ನಡಿಗ ವಿನಯ್ ಕುಮಾರ್ 4 ಓವರ್‌ ಬೌಲಿಂಗ್ ಮಾಡಿ ಕೇವಲ 26 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದು ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ಸ್ಪಿನ್ನರ್ ನದೀಮ್ 2 ವಿಕೆಟ್ ಪಡೆದರು. ಇನ್ನೂ ಪವನ್ ನೇಗಿ ಹಾಗೂ ಕನ್ನಡಿಗ ಸ್ಟುವರ್ಟ್ ಬಿನ್ನಿ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

149 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಟೀಂ ಇಂಡಿಯಾ ಮಾಸ್ಟರ್ಸ್‌ ಪರವಾಗಿ ಆರಂಭಿಕ ಆಟಗಾರ ಅಂಬಟಿ ರಾಯ್ಡು 74 ರನ್ ಹಾಗೂ ಸಚಿನ್ ತೆಂಡೂಲ್ಕರ್ 25 ರನ್ ಸಿಡಿಸುವ ಮೂಲಕ ಉತ್ತಮ ಅಡಿಪಾಯ ಹಾಕಿದರು. ನಂತರ ಬಂದ ಗುರುಕಿರಾತ್ ಸಿಂಗ್ 14 ರನ್ ಸಿಡಿಸಿ ಔಟ್ ಆದರು. ಬಳಿಕ ಯುವರಾಜ್ ಸಿಂಗ್ 13 ರನ್ ಮತ್ತು ಸ್ಟುವರ್ಟ್ ಬಿನ್ನಿ 16 ರನ್ ಸಿಡಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ವೆಸ್ಟ್ ವಿಂಡಸ್ ಮಾಸ್ಟರ್ಸ್‌ ಪರ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ಆಶ್ಲೆ ನರ್ಸ್ 2 ವಿಕೆಟ್ ಪಡೆದು ಮಂಚಿದರು. ಹಾಗೂ ಸುಲೇಮಾನ್ ಬೆನ್ ಹಾಗೂ ಟಿನೋ ಬೆಸ್ಟ್ ತಲಾ ಒಂದು ವಿಕೆಟ್ ಪಡೆದುಕೊಂಡರು.