MI vs GT: ಮುಂಬೈ ವಿರುದ್ಧ ಗುಜರಾತ್​ ಟೈಟನ್ಸ್​​ಗೆ ಕೊನೆಯ ಎಸೆತದಲ್ಲಿ ಜಯ! ಪಾಂಡ್ಯ ಪಡೆಯ ಸೋಲಿಗೆ ಕಾರಣವಾದ್ರು ಮಾಜಿ MI ಆಟಗಾರ | GT Clinch Thrilling Win Over MI Gujarat Titans Take Top Spot in IPL 2025 Table

MI vs GT: ಮುಂಬೈ ವಿರುದ್ಧ ಗುಜರಾತ್​ ಟೈಟನ್ಸ್​​ಗೆ ಕೊನೆಯ ಎಸೆತದಲ್ಲಿ ಜಯ! ಪಾಂಡ್ಯ ಪಡೆಯ ಸೋಲಿಗೆ ಕಾರಣವಾದ್ರು ಮಾಜಿ MI ಆಟಗಾರ | GT Clinch Thrilling Win Over MI Gujarat Titans Take Top Spot in IPL 2025 Table

Last Updated:

ಗುಜರಾತ್ ಟೈಟನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 156 ರನ್ ಗುರಿ ಬೆನ್ನಟ್ಟಿದ 18.4 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಗುಜರಾತ್​​ಗೆ ರೋಚಕ ಜಯಗುಜರಾತ್​​ಗೆ ರೋಚಕ ಜಯ
ಗುಜರಾತ್​​ಗೆ ರೋಚಕ ಜಯ

ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಅತಿಥೇಯ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟನ್ಸ್ 3 ವಿಕೆಟ್​ಗಳ ರೋಚಕ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಮುಂಬೈ ಇಂಡಿಯನ್ಸ್ ನೀಡಿದ್ದ 156 ರನ್‌ಗಳ ಗುರಿಯನ್ನು ಬೆನ್ನಟ್ಟುವಾಗ ಮಳೆ ಅಡಚಣೆ ಉಂಟಾಯಿತು. ಹಾಗಾಗಿ  19 ಓವರ್​ಗಳಿಗೆ ಪಂದ್ಯವನ್ನ ನಿಗದಿಮಾಡಿ ಗುರಿಯನ್ನ 147ಕ್ಕೆ ಕಡಿತ ಮಾಡಲಾಯಿತು. ಗುಜರಾತ್ ಟೈಟನ್ಸ್​  7 ವಿಕೆಟ್ ಕಳೆದ ಸರಿಯಾಗಿ 19 ಓವರ್​ಗಳಲ್ಲಿ  ಗುರಿ ತಲುಪಿತು. ಮುಂಬೈ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 155 ರನ್ ಗಳಿಸಿತು. ಮುಂಬೈ ಪರ ವಿಲ್ ಜ್ಯಾಕ್ಸ್ (53) ಅರ್ಧಶತಕ ಗಳಿಸಿದರು.

156 ರನ್​ಗಳ ಗುರಿ ಬೆನ್ನಟ್ಟಿದಗುಜರಾತ್ ಕೆಟ್ಟ ಆರಂಭವನ್ನು ಪಡೆದುಕೊಂಡಿತು. ಎರಡನೇ ಓವರ್‌ನ ಎರಡನೇ ಎಸೆತದಲ್ಲಿ ಬೌಲ್ಟ್ ಆರಂಭಿಕ ಆಟಗಾರ ಸಾಯಿ ಸುದರ್ಶನ್ ಅವರನ್ನು ಔಟ್ ಮಾಡಿದರು. ಉತ್ತಮ ಫಾರ್ಮ್‌ನಲ್ಲಿದ್ದ ಸುದರ್ಶನ್ ಐದು ಎಸೆತಗಳಲ್ಲಿ ಕೇವಲ ಐದು ರನ್ ಗಳಿಸಲು ವಿಕೆಟ್ ಕೀಪರ್ ರಿಕಲ್ಟನ್ ಗೆ ಕ್ಯಾಚ್ ನೀಡಿದರು. ಮೊದಲ ವಿಕೆಟ್​ ಕಳೆದುಕೊಂಡ ಆಘಾತದಲ್ಲಿ ಬ್ಯಾಟಿಂಗ್ ಮಾಡಿದ ಪವರ್‌ಪ್ಲೇನಲ್ಲಿ ಗುಜರಾತ್ ನಿಧಾನಗತಿ ಆಟವಾಡಿತು. ಮೊದಲ 6 ಓವರ್‌ಗಳಲ್ಲಿ ಜಿಟಿ 1 ವಿಕೆಟ್ ನಷ್ಟಕ್ಕೆ ಕೇವಲ 29 ರನ್ ಗಳಿಸಿತು. ಗಿಲ್ 21 ಎಸೆತಗಳಲ್ಲಿ 12 ರನ್ ಗಳಿಸಿದರೆ, ಬಟ್ಲರ್ 10 ಎಸೆತಗಳಲ್ಲಿ 10 ರನ್ ಗಳಿಸಿದ್ದರು.

ಈ ಹಂತದಲ್ಲಿ ಮುಂಬೈ ಇಂಡಿಯನ್ಸ್ ಡೆಕ್ವರ್ಥ ಲೂಯಿಸ್​ ಪ್ರಕಾರ ಮುಂಬೈ ಮುನ್ನಡೆಯಲ್ಲಿತ್ತು. ಆದರೆ 8ನೇ ಓವರ್​​ನಲ್ಲಿ ಹಾರ್ದಿಕ್ ಪಾಂಡ್ಯ 18 ರನ್​ ಬಿಟ್ಟುಕೊಟ್ಟರು. ಅಲ್ಲಿಂದ ಪಂದ್ಯ ಗುಜರಾತ್ ಪರ ತಿರುಗಿತು. ಅಲ್ಲಿಂದ ಡಿಎಲ್​ ನಿಯಮಕ್ಕೆ ಅನುಗುಣವಾಗಿ ಬ್ಯಾಟಿಂಗ್ ಮಾಡಿದ ಗಿಲ್​-ಬಟ್ಲರ್​ 2ನೇ ವಿಕೆಟ್​​ಗೆ 63 ಎಸೆತಗಳಲ್ಲಿ 72 ರನ್​ಗಳಿಸಿದರು. ಬಟ್ಲರ್ 27 ಎಸೆತಗಳಲ್ಲಿ3 ಬೌಂಡರಿ, 1 ಸಿಕ್ಸರ್ ಸಹಿತ 30 ರನ್​ಗಳಿಸಿದರು. ನಂತರ ಬಂದ ಶೆರ್ಫೇನ್ ರುದರ್ಫೋರ್ಡ್​ ನಾಯಕ ಗಿಲ್ ಜೊತೆ ಸೇರಿ 3ನೇ ವಿಕೆಟ್​ಗೆ 20 ಎಸೆತಗಳಲ್ಲಿ 35 ರನ್​ ಸೇರಿಸಿದರು. 14ನೇ ಓವರ್​​ನಲ್ಲಿ ಮಳೆ ಬಂದು ಪಂದ್ಯ ಸ್ಥಗಿತಗೊಂಡಿತ್ತು. ಆದರೆ ಮಳೆ ನಿಂತ ನಂತರ ಬೌಲಿಂಗ್​​ಗೆ ಬಂದ ಬುಮ್ರಾ ಗಿಲ್ ವಿಕೆಟ್ ಉರುಳಿಸಿದರು. 46 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 43 ರನ್​ಗಳಿಸಿದರು.

ನಂತರ 16ನೇ ಓವರ್​​ನಲ್ಲಿ ಬೌಲ್ಟ್ ಸ್ಫೋಟಕ ಬ್ಯಾಟರ್ ರುದರ್ಫೋರ್ಡ್​ ವಿಕೆಟ್ ಪಡೆಯುವ ಮೂಲಕ ಪಂದ್ಯದಲ್ಲಿ ಮುಂಬೈ ಕಮ್​ಬ್ಯಾಕ್ ಮಾಡುವಂತೆ ಮಾಡಿತು. ರುದರ್ಫೋರ್ಡ್ 15 ಎಸೆತಗಳಲ್ಲಿ ತಲಾ 2 ಬೌಂಡರಿ, ಸಿಕ್ಸರ್ಸ್​ ಸಹಿತ 28 ರನ್​ಗಳಿಸಿ  ಬೌಲ್ಟ್ ಬೌಲಿಂಗ್​​​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ಈ ವಿಕೆಟ್ ಬೀಳುತ್ತಿದ್ಧಂತೆ ಪಂದ್ಯ ಮುಂಬೈ ಕಡೆಗೆ ವಾಲಿತ್ತು.

ಇದಕ್ಕೂ ಮುನ್ನ ಟಾಸ್​ ಟಾಸ್​ ಸೋತು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತವರಿನ ಅಭಿಮಾನಿಗಳ ಮುಂದೆ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಯಿತು. ಇನ್ನಿಂಗ್ಸ್ ಆರಂಭಿಸಿದ ಮುಂಬೈ ಇಂಡಿಯನ್ಸ್ 2ನೇ ಎಸೆತದಲ್ಲೇ ರಿಕಲ್ಟನ್​ (2) ವಿಕೆಟ್ ಕಳೆದುಕೊಂಡಿತು. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ರೋಹಿತ್ ಇಂದು ಕೇವಲ 7 ರನ್​​ಗಳಿಸಿ ಔಟ್ ಆದರು. ಆದರೆ 3ನೇ ವಿಕೆಟ್​ಗೆ 43 ಎಸೆತಗಳಲ್ಲಿ 71 ರನ್​ಗಳಿಸಿ ಚೇತರಿಕೆ ನೀಡಿದರು. ಸೂರ್ಯಕುಮಾರ್ ಯಾದವ್ 24 ಎಸೆತಗಳಲ್ಲಿ 5 ಬೌಂಡರಿ ಸಹಿತ 35 ರನ್​ಗಳಿಸಿ 11ನೇ ಓವರ್​​ನಲ್ಲಿ ಔಟ್ ಆದರು. ವಿಲ್ ಜಾಕ್ಸ್ 35 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್​ಗಳ ಸಹಿತ 53 ರನ್​ಗಳಿಸಿ 12ನೇ ಓವರ್​ಗಳಲ್ಲಿ ವಿಕೆಟ್ ಒಪ್ಪಿಸಿದರು. ಇವರಿಬ್ಬರ ನಂತರ ಮುಂಬೈ ಇಂಡಿಯನ್ಸ್ ಪತನ ಆರಂಭವಾಯಿತು.

ನಾಯಕ ಹಾರ್ದಿಕ್ ಪಾಂಡ್ಯ (1), ತಿಲಕ್ ವರ್ಮಾ (7) ಮತ್ತು ನಮನ್ ಧೀರ್ (7) ಬಂದಷ್ಟೇ ವೇಗವಾಗಿ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಕಾರ್ಬಿನ್ ಬಾಷ್ 22 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ ಸಹಿತ 27 ರನ್​ಗಳಿಸಿ ತಂಡದ ಮೊತ್ತವನ್ನ 150ಕ್ಕೇರುವಂತೆ ಮಾಡಿದರು. ಕೊನೆಯ ಓವರ್‌ನಲ್ಲಿ ಬಾಷ್ ರನ್ ಔಟ್ ಆದರು. ದೀಪಕ್ ಚಹಾರ್ 8 ರನ್ ಗಳಿಸಿ ಅಜೇಯರಾಗಿ ಉಳಿದರೆ, ಕರಣ್ ಶರ್ಮಾ 1 ರನ್ ಗಳಿಸಿ ಅಜೇಯರಾಗಿ ಉಳಿದರು.

ಗುಜರಾತ್ ಟೈಟನ್ಸ್ ಸಾಯಿ ಕಿಶೋರ್ 24ಕ್ಕೆ2, ರಶೀದ್ ಖಾನ್ 21ಕ್ಕೆ1, ಜೆರಾಲ್ಡ್ ಕೊಯೆಟ್ಜಿ 10ಕ್ಕೆ1, ಪ್ರಸಿಧ್ ಕೃಷ್ಣ 37ಕ್ಕೆ1, ಅರ್ಷದ್ ಖಾನ್ 18ಕ್ಕೆ1, ಮೊಹಮ್ಮದ್ ಸಿರಾಜ್ 29ಕ್ಕೆ1 ವಿಕೆಟ್ ಪಡೆದು ಮಿಂಚಿದರು.