ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ(8) ವಿಕೆಟ್ ಮೂಲಕ ಮೊದಲ ಆಘಾತ ಎದುರಿಸಿತು. ಆದರೆ 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬಂದ ತಿಲಕ್ ವರ್ಮಾ ಹಾಗೂ ಜಾನಿ ಬೈರ್ಸ್ಟೋವ್ 2ನೇ ವಿಕೆಟ್ಗೆ 51 ರನ್ಗಳ ಜೊತೆಯಾಟ ನೀಡಿದರು. ಕಳೆದ ಪಂದ್ಯದಲ್ಲೂ ಅಬ್ಬರದ 44 ರನ್ಗಳಿಸಿದ್ದ ಬೈರ್ಸ್ಟೋವ್ ಇಂದು 24 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ಗಳ ಸಹಿತ 38 ರನ್ಗಳಿಸಿದರು. ನಂತರ ತಿಲಕ್ ಜೊತೆಗೂಡಿದ ಸೂರ್ಯಕುಮಾರ್ 3ನೇ ವಿಕೆಟ್ಗೆ 42 ಎಸೆತಗಳಲ್ಲಿ 72 ರನ್ಗಳ ಜೊತೆಯಾಟ ನೀಡಿದರು. ಉತ್ತಮವಾಗಿ ಆಡುತ್ತಿದ್ದ ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ಗಳ ಸಹಿತ 44 ರನ್ಗಳಿಸಿ ಚಹಲ್ಗೆ ವಿಕೆಟ್ ನೀಡಿದರೆ, ನಂತರದ ಓವರ್ನಲ್ಲೇ ತಿಲಕ್ ವರ್ಮಾ 29 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ಗಳಲ್ಲಿ 44 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ನಾಯಕ ಹಾರ್ದಿಕ್ ಪಾಂಡ್ಯ ಇಂದು ವೈಫಲ್ಯ ಅನುಭವಿಸಿದರು. ಅವರು 13 ಎಸೆತಗಳಲ್ಲಿ ಕೇವಲ 15 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಆದರೆ ಕೊನೆಯಲ್ಲಿ ಅಬ್ಬರಿಸಿದ ನಮನ್ ಧೀರ್ 18 ಎಸೆತಗಳಲ್ಲಿ 7 ಬೌಂಡರಿ ಸಹಿತ ರನ್ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.
ಕೈಲ್ ಜೇಮಿಸನ್ 30ಕ್ಕೆ1, ಯುಜ್ವೇಂದ್ರ ಚಹಲ್ 39ಕ್ಕೆ1, ವೈಶಾಕ್ ವಿಜಯ್ ಕುಮಾರ್ 30ಕ್ಕೆ1, ಮಾರ್ಕಸ್ ಸ್ಟೋಯಿನಿಸ್ 14ಕ್ಕೆ1 ಹಾಗೂ ಅಜ್ಮತ್ವುಲ್ಲಾ ಒಮರ್ಝಾಯ್ 43ಕ್ಕೆ 2 ವಿಕೆಟ್ ಪಡೆದರು.
200ಕ್ಕೂ ಹೆಚ್ಚು ಟಾರ್ಗೆಟ್; ಮುಂಬೈಗೆ ಸೋಲೇ ಇಲ್ಲ!
ಮುಂಬೈ ಇಂಡಿಯನ್ಸ್ ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೆ ಮೊದಲು ಬ್ಯಾಟಿಂಗ್ ಮಾಡಿ 17 ಬಾರಿ 200 + ಸ್ಕೋರ್ ಮಾಡಿರುವ ಮುಂಬೈ ಎಲ್ಲಾ ಪಂದ್ಯಗಳನ್ನು ಡಿಫೆಂಡ್ ಮಾಡಿಕೊಂಡಿದೆ. ಇದು 18ನೇ 200+ ಸ್ಕೋರ್ ಮಾಡಿದ್ದು, ಈ ಪಂದ್ಯದ ಫಲಿತಾಂಶ ಕುತೂಹಲ ಮೂಡಿಸಿದೆ.
ಪಂಜಾಬ್ ಅತಿ ಹಚ್ಚು ಬಾರಿ 200+ ಚೇಸಿಂಗ್ ದಾಖಲೆ
ಮುಂಬೈಗೆ ತದ್ವಿರುದ್ಧವಾಗಿ ಹೆಚ್ಚು ಬಾರಿ 200 ಪ್ಲಸ್ ಸ್ಕೋರ್ಗಳನ್ನ ಯಶಸ್ವಿಯಾಗಿ ಬೆನ್ನಟ್ಟಿ ಗೆದ್ದ ವಿಶ್ವದಾಖಲೆ ಹೊಂದಿದೆ. ಪಂಜಾಬ್ ಕಿಂಗ್ಸ್ 7 ಬಾರಿ 200 ಕ್ಕಿಂತ ಹೆಚ್ಚು ಮೊತ್ತವನ್ನು ಚೇಸ್ ಮಾಡಿ ಗೆದ್ದಿದೆ. ಬೇರೆ ಯಾವುದೇ ತಂಡಗಳು 5ಕ್ಕಿಂಗ್ ಹೆಚ್ಚು ಬಾರಿ ಈ ಸಾಧನೆ ಮಾಡಿಲ್ಲ. ಮುಂಬೈ ಹಾಗೂ ಹೈದರಾಬಾದ್ ತಲಾ 5 ಬಾರಿ ಈ ಸಾಧನೆ ಮಾಡಿವೆ.
ಹೆಡ್ ಟು ಹೆಡ್ ದಾಖಲೆ
2022 ರ ನಂತರ, ಮುಂಬೈ ಇಂಡಿಯನ್ಸ್ ತಂಡವು ಪಂಜಾಬ್ಗಿಂತ 2-3 ಅಂತರದಿಂದ ಮುಂದಿದೆ. ಆದರೆ, ಒಟ್ಟಾರೆ ಪಂದ್ಯಗಳ ಬಗ್ಗೆ ಮಾತನಾಡಿದರೆ, ಮುಂಬೈ ತಂಡ 17-16 ಮುನ್ನಡೆಯಲ್ಲಿದೆ.
ಇನ್ನುಮುಂಬೈ ಇಂಡಿಯನ್ಸ್ ತಂಡ 4 ಕ್ವಾಲಿಫೈಯರ್ -2 ಆಡಿದ್ದು 2-2 ರ ಗೆಲುವು-ಸೋಲಿನ ದಾಖಲೆಯನ್ನು ಹೊಂದಿದೆ. ಅದೇ ಸಮಯದಲ್ಲಿ, ಪಂಜಾಬ್ ತಂಡವು ಈ ಹಿಂದೆ ಒಮ್ಮೆ ಮಾತ್ರ ಕ್ವಾಲಿಫೈಯರ್ -2 ತಲುಪಿದೆ. 2014 ರಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಅನ್ನು 24 ರನ್ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತ್ತು.
June 01, 2025 11:44 PM IST
MI vs PBKS: ಕ್ವಾಲಿಫೈಯರ್-2 ಪಂದ್ಯದಲ್ಲೂ ಮುಂಬೈ ಸಿಡಿಲಬ್ಬರದ ಬ್ಯಾಟಿಂಗ್! ಪಂಜಾಬ್ಗೆ 204 ರನ್ಗಳ ಕಠಿಣ ಗುರಿ ನೀಡಿದ ಹಾರ್ದಿಕ್ ಪಡೆ