Last Updated:
ಹದಿನೇಳರ ಹರೆಯದ ಜೆನಿಕಾ ಈಗಷ್ಟೇ ದ್ವಿತೀಯ ಪಿಯುಸಿ ಮುಗಿಸಿದ್ದಾಳೆ. ಪರೀಕ್ಷೆಗೆ ಹತ್ತಿರದ ದಿನದಲ್ಲೇ ಫ್ಯಾಶನ್ ಶೋ ಇದ್ದು, ಪ್ರ್ಯಾಕ್ಟೀಸ್‌ಗೆ ಸಮಯವಿಲ್ಲದಿದ್ದರೂ, ಅದನ್ನೆಲ್ಲಾ ದಾಟಿ ಈಕೆ ಪ್ರಥಮ ಪ್ರಯತ್ನದಲ್ಲೇ ಯಶಸ್ಸು ಸಾಧಿಸಿದ್ದಾಳೆ.
ದಕ್ಷಿಣ ಕನ್ನಡ: ಹೀಗೆ ಕ್ರೌನ್(Crown) ಧರಿಸಿ ಸಂಭ್ರಮಿಸುತ್ತಿರುವ ಮಂಗಳೂರಿನ ಬಾಲೆಗೆ(Mangaluru Girl) ಮಾಡೆಲಿಂಗ್‌ನಲ್ಲಿ(Modeling) ಬೆರಳೆಣಿಕೆ ದಿನಗಳಷ್ಟೇ ತರಬೇತಿ. ಇದೇ ಮೊದಲ ಬಾರಿಗೆ ಫ್ಯಾಶನ್ ಲೋಕದ ವೇದಿಕೆ ಹತ್ತಿದ ಅನುಭವ. ಚೊಚ್ಚಲ ಪ್ರಯತ್ನದಲ್ಲೇ ಪ್ರಥಮ ರನ್ನರಪ್ ಕಿರೀಟ (First Runner up) ಮುಡಿಗೇರಿಸಿಯೇ ಬಿಟ್ಟಳು ಈ ಬೆಡಗಿ.
ಹೌದು… ಮಂಗಳೂರಿನ ಜೆಪ್ಪು ಕುಡ್ಪಾಡಿ ನಿವಾಸಿ ಜೆನಿಕಾ ಸಾನಿಯಾ ಡಿಸೋಜ ಎಂಬಾಕೆಯೇ ಈ ಸಾಧನೆ ಮಾಡಿದವಳು. ಏಪ್ರಿಲ್ 4ರಂದು ಬಹರೈನ್‌ನಲ್ಲಿ ನಡೆದ ಕುಡ್ಲೋತ್ಸವ ಕಾರ್ಯಕ್ರಮದಲ್ಲಿ ನಡೆದ ಅಂತರಾಷ್ಟ್ರೀಯ ಫ್ಯಾಶನ್ ಶೋನಲ್ಲಿ ಈಕೆ ಮೊದಲ ರನ್ನರ್ ಅಪ್ ಕಿರೀಟ ಮುಡಿಗೇರಿಸಿಕೊಂಡಿದ್ದಾಳೆ. ಹದಿನೇಳರ ಹರೆಯದ ಜೆನಿಕಾ ಈಗಷ್ಟೇ ದ್ವಿತೀಯ ಪಿಯುಸಿ ಮುಗಿಸಿದ್ದಾಳೆ. ಪರೀಕ್ಷೆಗೆ ಹತ್ತಿರದ ದಿನದಲ್ಲೇ ಫ್ಯಾಶನ್ ಶೋ ಇದ್ದು, ಪ್ರ್ಯಾಕ್ಟೀಸ್‌ಗೆ ಸಮಯವಿಲ್ಲದಿದ್ದರೂ, ಅದನ್ನೆಲ್ಲಾ ದಾಟಿ ಈಕೆ ಪ್ರಥಮ ಪ್ರಯತ್ನದಲ್ಲೇ ಯಶಸ್ಸು ಸಾಧಿಸಿದ್ದಾಳೆ.
ಇದನ್ನೂ ಓದಿ: Dakshina Kannada: ಕಟೀಲುಗೆ ಸಾಗುವ ಎಕ್ಕಾರು ಎಂಬಲ್ಲಿ ಶ್ವೇತ ವರ್ಣದ ಸ್ವಾಗತ ಗೋಪುರ ನಿರ್ಮಾಣ!
ಜೆನಿಕಾ ರಾಷ್ಟ್ರಮಟ್ಟದ ಫುಟ್‌ಬಾಲ್ ಮತ್ತು ರಾಜ್ಯಮಟ್ಟದ ಬಾಸ್ಕೆಟ್ ಬಾಲ್ ಆಟಗಾರ್ತಿ. ಬೆಂದೂರಿನ ಸಂತ ಥೆರೆಸಾ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಈಕೆ ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದಾಳೆ. ಫ್ಯಾಶನ್ ಲೋಕದ ಬಗ್ಗೆ ಆಸಕ್ತಿಯಿಲ್ಲದಿದ್ದರೂ ಪ್ರಯತ್ನ ಮಾಡೋಣವೆಂದು ಮಂಗಳೂರಿನ ವೆನ್ಜ್ ಮಾಡೆಲಿಂಗ್ ಅಕಾಡೆಮಿಯಲ್ಲಿ ದೊರಕಿರುವ ಅವಕಾಶವನ್ನು ಬಳಸಿಕೊಂಡಳು.
ನಟಿ, ಮಾಡಲಿಂಗ್ ತರಬೇತುದಾರೆ ವೆನ್ಸಿಟಾ ಡಯಾಸ್ ನೀಡಿರುವ ಕೆಲವೇ ದಿನಗಳ ತರಬೇತಿಯಲ್ಲಿ ಜೆನಿಕಾ ಬಹರೈನ್‌ನಲ್ಲಿ ನಡೆದ ಕುಡ್ಲೋತ್ಸವದಲ್ಲಿ ಪಾಲ್ಗೊಂಡಿದ್ದಳು. ಮೊದಲ ಪ್ರಯತ್ನದಲ್ಲಿಯೇ ಮೊದಲ ರನ್ನರ್‌ಅಪ್ ಆಗಿದ್ದಾಳೆ. ಇದೇ ಸ್ಪರ್ಧೆಯಲ್ಲಿ ಬೆಸ್ಟ್ ಸ್ಮೈಲ್ ಕಿರೀಟವನ್ನು ಪಡೆದಿರುವುದು ವಿಶೇಷ. ಒಟ್ಟಿನಲ್ಲಿ ಈಕೆಯ ಫ್ಯಾಶನ್ ಲೋಕದ ಪ್ರಯಾಣ ಯಶಸ್ಸು ನೀಡಲಿ ಎಂಬುದೇ ನಮ್ಮ ಆಶಯ.
Dakshina Kannada,Karnataka
April 19, 2025 4:48 PM IST