Naraka Chaturdashi: ಉಡುಪಿಯ ಕೃಷ್ಣಮಠದಲ್ಲಿ ನರಕ ಚತುರ್ದಶಿ ಆಚರಣೆ ವಿಭಿನ್ನ | Naraka Chaturdashi celebrated in Udupi Krishna Mutt

Naraka Chaturdashi: ಉಡುಪಿಯ ಕೃಷ್ಣಮಠದಲ್ಲಿ ನರಕ ಚತುರ್ದಶಿ ಆಚರಣೆ ವಿಭಿನ್ನ | Naraka Chaturdashi celebrated in Udupi Krishna Mutt

Last Updated:

ಶ್ರೀಕೃಷ್ಣನ ಪ್ರಮುಖ ಆರಾಧನಾ ಕೇಂದ್ರವಾದ ಉಡುಪಿ ಕೃಷ್ಣ ಮಠದಲ್ಲಿ ನರಕ ಚತುರ್ದಶಿಯನ್ನು ಅತ್ಯಂತ ಸಂಭ್ರಮದಿಂದಲೇ ಆಚರಿಸಲಾಯಿತು.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣಕನ್ನಡ: ನಾಡಿನೆಲ್ಲೆಡೆ ದೀಪಾವಳಿಯ ಸಂಭ್ರಮ(Deepavali Celebration) ಮನೆ ಮಾಡಿದ್ದು, ನರಕ ಚತುರ್ದಶಿಯಿಂದ(Naraka Chaturdashi) ದೀಪಾವಳಿಯ ಹಬ್ಬದ ಆಚರಣೆ ಆರಂಭಗೊಳ್ಳುತ್ತದೆ. ನರಕಾಸುರನನ್ನು ಕೊಂದ ಸಂಭ್ರಮಾಚರಣೆಯನ್ನು ನರಕ ಚತುರ್ದಶಿ ಹಬ್ಬದ ಮೂಲಕ ಆಚರಿಸಲಾಗುತ್ತದೆ. ನರಕ ಚತುರ್ದಶಿಯನ್ನು ಹೆಚ್ಚಾಗಿ ಶ್ರೀಕೃಷ್ಣನ ದೇವಸ್ಥಾನಗಳಲ್ಲಿ(Krishna Temple) ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಕೃಷ್ಣನ ಆರಾಧನೆ ಇರುವ ಕಡೆ ಕೃಷ್ಣನ ಲೀಲೆಗಳ ಜೊತೆಗೆ ಹಬ್ಬವನ್ನು ಒಂದು ಆರಾಧನೆಯ ರೂಪದಲ್ಲಿ ಆಚರಿಸಲಾಗುತ್ತದೆ.

ಸಂಭ್ರಮದಿಂದ ನರಕ ಚತುರ್ದಶಿ ಆಚರಣೆ

ಶ್ರೀಕೃಷ್ಣನ ಪ್ರಮುಖ ಆರಾಧನಾ ಕೇಂದ್ರವಾದ ಉಡುಪಿ ಕೃಷ್ಣ ಮಠದಲ್ಲಿ ನರಕ ಚತುರ್ದಶಿಯನ್ನು ಅತ್ಯಂತ ಸಂಭ್ರಮದಿಂದಲೇ ಆಚರಿಸಲಾಯಿತು. ಪರ್ಯಾಯ ಪುತ್ತಿಗೆ ಮಠದ ಶ್ರೀಗಳ ನೇತೃತ್ವದಲ್ಲಿ ಈ ಬಾರಿ ಕೃಷ್ಣ ಮಠದಲ್ಲಿ ನರಕ ಚತುರ್ದಶಿ ಹಿನ್ನಲೆಯಲ್ಲಿ ಸ್ವಾಮೀಜಿಗಳು ಮತ್ತು ಅವರ ಶಿಷ್ಯವೃಂದ, ಭಕ್ತಾಧಿಗಳು ಪರಸ್ಪರ ಎಣ್ಣೆ ಹಚ್ಚಿ ಅಭ್ಯಂಘ ಸ್ನಾನ ನೆರವೇರಿಸಿದರು. ಹಲವು ಪಾರಂಪರಿಕ ಸಂಪ್ರದಾಯಗಳ ಜೊತೆ ಈ ಆಚರಣೆ ಆರಂಭಗೊಂಡಿತು.

ಇದನ್ನೂ ಓದಿ: Deepavali Celebration: ಕರಾವಳಿ ದೀಪಾವಳಿಯ ವಿಶೇಷ ಈ ಬಲೀಂದ್ರ! ಅಷ್ಟಕ್ಕೂ ಈ ಮರ ನೆಡುವ ಉದ್ದೇಶವೇನು?

ಪುತ್ತಿಗೆ ಮಠಾಧೀಶರಿಗೆ ಎಣ್ಣೆ ಹಚ್ಚಿದ ಶಿಷ್ಯವೃಂದ 

ಮುಂಜಾನೆ 3 ಗಂಟೆಗೆ ಸ್ವಾಮೀಜಿ ಸೇರಿದಂತೆ ಎಲ್ಲಾ ಶಿಷ್ಯವೃಂದ ಅಭ್ಯಂಘನ ಸ್ನಾನಕ್ಕೆ ಬೇಕಾದ ತಯಾರಿಗಳನ್ನು ಮಾಡಿದರು. ಸ್ನಾನ ಮಾಡಲು ಬೇಕಾದ ಬಿಸಿ ನೀರು ಕಾಯಿಸಲು ದೊಡ್ಡ ಪಾತ್ರೆಯನ್ನು ಒಲೆ ಮೇಲೆ ಇರಿಸಿ, ಅದಕ್ಕೆ ಹೂವಿಂದ ಸಿಂಗಾರ ಮಾಡಲಾಯಿತು. ಬಳಿಕ ಪುತ್ತಿಗೆ ಮಠಾಧೀಶರಿಗೆ ಅವರ ಶಿಷ್ಯವೃಂದ ಎಣ್ಣೆ ಹಚ್ಚಿ ಸಂಭ್ರಮಿಸಿದರೆ, ಸ್ವಾಮೀಜಿ ಶಿಷ್ಯವೃಂದಕ್ಕೂ ಎಣ್ಣೆ ಹಚ್ಚಿ ತಲೆತಲಾಂತರಗಳಿಂದ ಬಂದ ಸಂಪ್ರದಾಯವನ್ನು ಪಾಲಿಸಿದರು.

ತೈಲಾಭ್ಯಾಂಗದ ಮೊದಲು ಗಂಧೋಪಾಚಾರವೂ ನಡೆಯಿತು. ಈ ಸಮಯದಲ್ಲಿ ಸ್ವಾಮೀಜಿಗಳು ಸೇರಿದಂತೆ ಶಿಷ್ಯವೃಂದ ಕೃಷ್ಣನಂತೆ ತುಂಟತನವನ್ನೂ ಪ್ರದರ್ಶಿಸಿದರು. ನರಕಾಸುರನನ್ನು ಕೊಂದ ಶ್ರೀಕೃಷ್ಣ ತುಂಟ ಸ್ವಭಾವದವ ಆದ ಕಾರಣ, ಅವನಂತೆಯೇ ತುಂಟತನ ಮಾಡುತ್ತಾ, ನರಕ ಚತುರ್ದಶಿಯನ್ನು ಕೃಷ್ಣಮಠದಲ್ಲಿ ಸಂಭ್ರಮಿಸಲಾಯಿತು.