Nicholas Pooran: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ಬೆನ್ನಲ್ಲೆ ಪೂರನ್‌ಗೆ ಜಾಕ್‌ಪಾಟ್! ಮುಂಬೈ ಫ್ರಾಂಚೈಸಿಯ ತಂಡಕ್ಕೆ ನಾಯಕನಾಗಿ ಘೋಷಣೆ | Nicholas Pooran appointed MI New York captain new path for cricket

Nicholas Pooran: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ಬೆನ್ನಲ್ಲೆ ಪೂರನ್‌ಗೆ ಜಾಕ್‌ಪಾಟ್! ಮುಂಬೈ ಫ್ರಾಂಚೈಸಿಯ ತಂಡಕ್ಕೆ ನಾಯಕನಾಗಿ ಘೋಷಣೆ | Nicholas Pooran appointed MI New York captain new path for cricket

ಈ ಸುದ್ದಿಯನ್ನು ಎಂಐ ನ್ಯೂಯಾರ್ಕ್ ಫ್ರಾಂಚೈಸಿ ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಖಚಿತಪಡಿಸಿದ್ದು, “ಹೊಸ ಕಮಾಂಡರ್ ಆಗಮಿಸಿದ್ದಾರೆ. ಕ್ಯಾಪ್ಟನ್ ನಿಕೋಲಸ್ ಪೂರನ್” ಎಂದು ಬರೆದುಕೊಂಡಿದೆ. ಸದ್ಯ, ಎಡಗೈ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್‌ ‘ವಿಶ್ವದ ಅತ್ಯಂತ ಭಯಂಕರ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬ’ ಎಂದು ಬಣ್ಣಿಸಿರುವ ಫ್ರಾಂಚೈಸಿ, ಅವರ ನಾಯಕತ್ವದಲ್ಲಿ ತಂಡವನ್ನು ದೊಡ್ಡ ಗೆಲುವಿನತ್ತ ಕೊಂಡೊಯ್ಯುವ ವಿಶ್ವಾಸ ವ್ಯಕ್ತಪಡಿಸಿದೆ.

ಐಪಿಎಲ್‌ನಲ್ಲಿ ಸ್ಫೋಟಕ ಬ್ಯಾಟಿಂಗ್

ಪೂರನ್ ಈ ಹಿಂದೆ ಎಂಎಲ್‌ಸಿ 2023ರ ಆವೃತ್ತಿಯಲ್ಲಿ 388 ರನ್‌ಗಳೊಂದಿಗೆ ಅತೀ ಹೆಚ್ಚು ರನ್ ಗಳಿಸಿದ್ದ ಆಟಗಾರರಾಗಿದ್ದರು. ಇದರಲ್ಲಿ ಅವರು ಔಟಾಗದ 137 ರನ್‌ಗಳ ಇನಿಂಗ್ಸ್ ಎಂಐ ನ್ಯೂಯಾರ್ಕ್‌ಗೆ ಚೊಚ್ಚಲ ಟ್ರೋಫಿ ಗೆಲ್ಲಲು ನೆರವಾಯಿತು. ಐಪಿಎಲ್ 2025ರಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ ಪರ ಅಬ್ಬರಿಸಿರುವ ಅವರು 524 ರನ್‌ಗಳನ್ನು ಕಲೆಹಾಕಿದ್ದರು. ಮಾತ್ರವಲ್ಲ ಅವರು 196.25ರ ಸ್ಟ್ರೈಕ್ ರೇಟ್‌ನೊಂದಿಗೆ 5 ಅರ್ಧಶತಕಗಳನ್ನು ಕೂಡ ಸಿಡಿಸಿದ್ದಾರೆ. 2024ರಲ್ಲಿ ಅವರು ಒಟ್ಟು 170 ಸಿಕ್ಸರ್‌ ಬಾರಿಸುವ ಮೂಲಕ ವಿಶ್ವದಾಖಲೆ ಮಾಡಿದ್ದಾರೆ. ಇದು ಅವರ ಫಾರ್ಮ್ ಮತ್ತು ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ.

ಎಂಐ ನ್ಯೂಯಾರ್ಕ್‌ನ ಈ ಹಿಂದಿನ ನಾಯಕ ಕಿರಾನ್ ಪೊಲಾರ್ಡ್‌ ಅವರ ಸ್ಥಾನವನ್ನು ಪೂರನ್ ತುಂಬಲಿದ್ದಾರೆ. ಈ ತಂಡವನ್ನು ರಿಲಯನ್ಸ್ ಇಂಡಸ್ಟ್ರೀಸ್‌ನ ಒಡೆತನದ ಇಂಡಿಯಾವಿನ್ ಸ್ಪೋರ್ಟ್ಸ್ ನಿರ್ವಹಿಸುತ್ತಿದ್ದು, ಇದು ಐಪಿಎಲ್‌ನ ಮುಂಬೈ ಇಂಡಿಯನ್ಸ್‌ನ ಮಾಲೀಕತ್ವವನ್ನೂ ಹೊಂದಿದ್ದಾರೆ. ಪೂರನ್‌ಗೆ ಈ ತಂಡದೊಂದಿಗೆ ಈಗಾಗಲೇ ಸಂಪರ್ಕವಿದ್ದು, ಅವರು ಐಎಲ್‌ ಟಿ-20 ಲೀಗ್‌ನಲ್ಲಿ ಎಂಐ ಎಮಿರೇಟ್ಸ್‌ಗಾಗಿ ಆಡುತ್ತಿದ್ದಾರೆ. 2017ರಲ್ಲಿ ಮುಂಬೈ ಇಂಡಿಯನ್ಸ್‌ ಪರ ಸ್ಥಾನ ಪಡೆದಿದ್ದರಾದರೂ ಒಂದೂ ಪಂದ್ಯ ಆಡಿರಲಿಲ್ಲ.

ಪೂರನ್ ಅಂತಾರಾಷ್ಟ್ರೀಕ ಕರಿಯರ್

ಪೂರನ್‌ರ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 106 ಟಿ-20ಐ ಪಂದ್ಯಗಳಲ್ಲಿ 2,275 ರನ್‌ ಗಳಿಸಿದ್ದಾರೆ. ಹಾಗೂ 61 ಏಕದಿನ ಪಂದ್ಯಗಳಲ್ಲಿ, ಅವರು 39.66 ಸರಾಸರಿ ಮತ್ತು 99.15 ಸ್ಟ್ರೈಕ್ ರೇಟ್‌ನಲ್ಲಿ 1983 ರನ್ ಗಳಿಸಿದ್ದಾರೆ. 2022ರಲ್ಲಿ ವೆಸ್ಟ್ ಇಂಡೀಸ್‌ ತಂಡದ ವೈಟ್ ಬಾಲ್ ತಂಡದ ನಾಯಕರಾಗಿದ್ದ ಅವರು, ಆ ವರ್ಷದ ಟಿ-20 ವಿಶ್ವಕಪ್‌ನಲ್ಲಿ ತಂಡದ ಹೀನಾಯ ಪ್ರದರ್ಶನದ ಬಳಿಕ ನಾಯಕತ್ವದಿಂದ ಕೆಳಗಿಳಿದಿದ್ದರು. “ನನ್ನ ದೇಶವನ್ನು ಪ್ರತಿನಿಧಿಸುವುದು ಮತ್ತು ನಾಯಕನಾಗಿ ಸೇವೆ ಸಲ್ಲಿಸುವುದು ಎಂದಿಗೂ ಮರೆಯಲಾಗದ ಗೌರವ” ಎಂದು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾಗಿ ಬರೆದುಕೊಂಡು ತಮ್ಮ ನಿವೃತ್ತಿಯನ್ನು ಖಚಿತಪಡಿಸಿದ್ದರು.

ಸ್ಟಾರ್‌ ಆಟಗಾರರಿರುವ ತಂಡಕ್ಕೆ ನಾಯಕ

ಎಂಎಲ್‌ಸಿ 2025 ಋತುವಿನಲ್ಲಿ ಕ್ವಿಂಟನ್ ಡಿಕಾಕ್, ಕೀರಾನ್ ಪೊಲಾರ್ಡ್, ಮತ್ತು ರಶೀದ್ ಖಾನ್‌ರಂತಹ ಸ್ಟಾರ್ ಆಟಗಾರರೊಂದಿಗೆ ಪೂರನ್ ತಂಡವನ್ನು ಮುನ್ನಡೆಸಲಿದ್ದಾರೆ. ಅವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಮತ್ತು ಫ್ರಾಂಚೈಸಿ ಕ್ರಿಕೆಟ್‌ನ ಅನುಭವವು ಎಂಐ ನ್ಯೂಯಾರ್ಕ್‌ಗೆ ಹೊಸ ಯಶಸ್ಸನ್ನು ತಂದುಕೊಡುವ ನಿರೀಕ್ಷೆಯಿದೆ. ಪೂರನ್‌ರ ಈ ಹೊಸ ಪಾತ್ರವು ಅವರ ಕ್ರಿಕೆಟ್ ವೃತ್ತಿಜೀವನದಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಎಂಐ ಫ್ರಾಂಚೈಸಿ ಲೀಗ್‌ಗಳಲ್ಲಿ ಅವರ ಪ್ರಾಬಲ್ಯವನ್ನು ಮುಂದುವರಿಸಲು ಸಜ್ಜಾಗಿದೆ.

ಐಪಿಎಲ್‌ನಲ್ಲಿ ಮಿಂಚಿರುವ ಪೂರನ್

ಪೂರನ್ 2024 ರಲ್ಲಿ ಅದ್ಭುತವಾದ ಐಪಿಎಲ್ ಋತುವನ್ನು ಹೊಂದಿದ್ದರು, ಐಪಿಎಲ್ 2025 ಅನ್ನು ಮುಗಿಸುವ ಮೊದಲು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು (170) ಗಳಿಸಿದರು, ಐದು ಅರ್ಧಶತಕಗಳು ಸೇರಿದಂತೆ 196.25 ಸ್ಟ್ರೈಕ್ ರೇಟ್‌ನಲ್ಲಿ 524 ರನ್‌ಗಳನ್ನು ಗಳಿಸಿದರು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Nicholas Pooran: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ಬೆನ್ನಲ್ಲೆ ಪೂರನ್‌ಗೆ ಜಾಕ್‌ಪಾಟ್! ಮುಂಬೈ ಫ್ರಾಂಚೈಸಿಯ ತಂಡಕ್ಕೆ ನಾಯಕನಾಗಿ ಘೋಷಣೆ