ವಿವೋಗೆ ನಥಿಂಗ್ ಠಕ್ಕರ್ – ಕೈಗೆಟುಕುವ ಬೆಲೆಯಲ್ಲಿ 3ಎ ಸೀರಿಸ್ ಫೋನ್ ಪರಿಚಯಿಸಿದ ಕಂಪನಿ! – NOTHING PHONE 3A SERIES LAUNCHED
Nothing Phone 3a Series Launched: ನಥಿಂಗ್ನ 3ಎ ಸೀರಿಸ್ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಈ ಸೀರಿಸ್ನಲ್ಲಿ ಕಂಪನಿ ನಥಿಂಗ್ ಫೋನ್ 3a ಮತ್ತು ನಥಿಂಗ್ ಫೋನ್ 3a ಪ್ರೊ ಎಂಬ ಎರಡು ಡಿವೈಸ್ಗಳನ್ನು ಪರಿಚಯಿಸಿದೆ.
Nothing Phone 3a Series Launch: ಇಂದು ನಥಿಂಗ್ ತನ್ನ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ ಫೋನ್ 3ಎ ಸೀರಿಸ್ ಅನ್ನು ಬಿಡುಗಡೆ ಮಾಡಿದೆ. ಈ ಸೀರಿಸ್ನಲ್ಲಿ ನಥಿಂಗ್ ಫೋನ್ 3ಎ ಮತ್ತು ನಥಿಂಗ್ ಫೋನ್ 3ಎ ಪ್ರೊ ಸೇರಿವೆ. ಈ ಬಾರಿ ಕಂಪನಿಯು ತನ್ನ ಡಿಸೈನ್, ಪರ್ಫಾರ್ಮೆನ್ಸ್ ಮತ್ತು ಸಾಫ್ಟ್‌ವೇರ್‌ನಲ್ಲಿ ಹಲವು ಅಪ್ಡೇಟ್ಗಳನ್ನು ಮಾಡಿದೆ. ಅದರ ಬಗ್ಗೆ ತಿಳಿಯೋಣ.
ನಥಿಂಗ್ ಫೋನ್ 3ಎ ಸೀರಿಸ್ ಸ್ಪೆಸಿಫಿಕೇಶನ್ಸ್: ಕಂಪನಿಯು ಎರಡೂ ಫೋನ್‌ಗಳಲ್ಲಿ 6.77-ಇಂಚಿನ AMOLED ಡಿಸ್ಪ್ಲೇಯನ್ನು ಒದಗಿಸಿದ್ದು, ಅದು 120Hz ರಿಫ್ರೆಶ್ ರೇಟ್ ಮತ್ತು 3000 ನೀಟ್ಸ್ ಬ್ರೈಟ್ನೆಸ್ ಅನ್ನು ಸಪೋರ್ಟ್ ಮಾಡುತ್ತದೆ. ಪರ್ಫಾರ್ಮೆನ್ಸ್ಗಾಗಿ ಈ ಸ್ಮಾರ್ಟ್‌ಫೋನ್‌ಗಳಿಗೆ Qualcomm Snapdragon 7s Gen 3 ಚಿಪ್‌ಸೆಟ್ ಪ್ರೊಸೆಸರ್ ಒದಗಿಸಲಾಗಿದೆ. ಈ ಫೋನ್ 8GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಆಪ್ಶನ್ ಹೊಂದಿದೆ.
Get Closer.
Phone (3a) and Phone (3a) Pro. Two new signatures. Each refined to capture masterful shots.Available from 11 March, 12 PM. pic.twitter.com/4ZuznroakK
— Nothing India (@nothingindia) March 4, 2025
ಕ್ಯಾಮೆರಾ ಸೆಟಪ್: ಫೋನ್‌ನ ಕ್ಯಾಮೆರಾ ಸೆಟಪ್ ಕುರಿತು ಹೇಳುವುದಾದರೆ, ಕಂಪನಿಯು ನಥಿಂಗ್ ಫೋನ್ 3ಎ ಪ್ರೊನಲ್ಲಿ 50MP ಪೆರಿಸ್ಕೋಪ್ ಲೆನ್ಸ್ ಅನ್ನು ಒದಗಿಸಿದೆ. ಇದು 3x ಆಪ್ಟಿಕಲ್ ಜೂಮ್ ಸಪೋರ್ಟ್ ಮಾಡುತ್ತದೆ. ನಥಿಂಗ್ ಫೋನ್ 3a 50MP ಪ್ರೈಮೆರಿ ಕ್ಯಾಮೆರಾ ಜೊತೆಗೆ 8MP ಅಲ್ಟ್ರಾವೈಡ್ ಲೆನ್ಸ್ ಅನ್ನು ಹೊಂದಿದ್ದು, ಅದು 2x ಆಪ್ಟಿಕಲ್ ಜೂಮ್ ಅನ್ನು ಸಪೋರ್ಟ್ ಮಾಡುತ್ತದೆ. ಸೆಲ್ಫಿಗಳಿಗಾಗಿ ನಥಿಂಗ್ ಫೋನ್ 3a 32-ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ. ನಥಿಂಗ್ ಫೋನ್ 3a ಪ್ರೊ 50-ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.
ಬೆಸ್ಟ್ ಬ್ಯಾಟರಿ: ಪವರ್ಗಾಗಿ ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ಶಕ್ತಿಯುತ 5000mAh ಬ್ಯಾಟರಿ ಒದಗಿಸಲಾಗಿದೆ. ಕಂಪನಿಯ ಪ್ರಕಾರ ಈ ಬ್ಯಾಟರಿ ಕೇವಲ 56 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಈ ಫೋನ್ ಪೂರ್ಣ ಚಾರ್ಜ್‌ನಲ್ಲಿ ಇಡೀ ದಿನದ ಬ್ಯಾಕಪ್ ಒದಗಿಸುತ್ತದೆ. ಇದರ ಜೊತೆಗೆ 50W ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಸಹ ಇದರಲ್ಲಿ ಒದಗಿಸಲಾಗಿದೆ. ಈ ಸಾಧನಗಳು ಆಂಡ್ರಾಯ್ಡ್ 15 ಅನ್ನು ಆಧರಿಸಿದ ನಥಿಂಗ್ ಓಎಸ್ 3.1 ನಲ್ಲಿ ಕಾರ್ಯನಿರ್ವಹಿಸುತ್ತವೆ. ಇದರೊಂದಿಗೆ ಬಳಕೆದಾರರು ಲೆಟೆಸ್ಟ್ ಮತ್ತು ಸ್ಮೂಥ್ ಅನುಭವ ಪಡೆಯುತ್ತಾರೆ.
ನಥಿಂಗ್ ಫೋನ್ 3a, 3a ಪ್ರೊ ಬೆಲೆ: ಬೆಲೆಗಳ ಬಗ್ಗೆ ಹೇಳುವುದಾದರೆ ನಥಿಂಗ್ ಫೋನ್ 3aನ 8GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 22,999 ರೂ. ಮತ್ತು ನಥಿಂಗ್ ಫೋನ್ 3a ಪ್ರೊನ 8GB + 256GB ಮಾದರಿಯ ಬೆಲೆಯನ್ನು 27,999 ರೂ.ಗಳಿಗೆ ನಿಗದಿಪಡಿಸಲಾಗಿದೆ. ಇದಲ್ಲದೆ ಕಂಪನಿಯು ಈ ಫೋನ್‌ಗಳನ್ನು ಬ್ಲ್ಯಾಕ್, ವೈಟ್, ಬ್ಲೂ ಮತ್ತು ಗ್ರೇ ಕಲರ್ಸ್ನಲ್ಲಿ ಬಿಡುಗಡೆ ಮಾಡಿದೆ. ಈ ಫೋನ್‌ಗಳ ಬುಕಿಂಗ್ ಪ್ರಾರಂಭವಾಗಿದೆ. ಇದರ ಮಾರಾಟವು ಮಾರ್ಚ್ 11, 2025 ರಿಂದ ಪ್ರಾರಂಭವಾಗುತ್ತದೆ.
![]() |
Courtesy : amazon.com
|
ವಿವೋ ವಿ50 5ಜಿಗೆ ಕಠಿಣ ಸ್ಪರ್ಧೆ: ವಿವೋ ಇತ್ತೀಚೆಗೆ ತನ್ನ ಹೊಸ ವಿವೋ ವಿ50 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು ಮಧ್ಯಮ ಬಜೆಟ್ ವಿಭಾಗದಲ್ಲಿ ಬರುತ್ತದೆ. ಈ ಫೋನ್ ಅಲ್ಟ್ರಾ ಸ್ಲಿಮ್ ಕ್ವಾಡ್-ಕರ್ವ್ಡ್ ಡಿಸ್ಪ್ಲೇ, 6000mAh ಬ್ಯಾಟರಿ ಮತ್ತು ಪವರ್ಫುಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಈ ಫೋನ್ ಮಾರುಕಟ್ಟೆಯಲ್ಲಿ ಟೈಟಾನಿಯಂ ಗ್ರೇ, ರೋಸ್ ರೆಡ್ ಮತ್ತು ಸ್ಟಾರಿ ನೈಟ್‌ನಂತಹ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಇದು 50MP ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. 50MP ಹೈ-ಕ್ವಾಲಿಟಿ ಸೆಲ್ಫಿ ಕ್ಯಾಮೆರಾ ಕೂಡ ಇದರಲ್ಲಿದೆ.
ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 7 ಜೆನ್ 3 ಪ್ರೊಸೆಸರ್ ಅನ್ನು ಹೊಂದಿದೆ. ಅಲ್ಲದೆ ಇದು ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಪವರ್ಗಾಗಿ ಈ ಸಾಧನದಲ್ಲಿ ಶಕ್ತಿಯುತ 6000mAh ಬ್ಯಾಟರಿಯನ್ನು ಒದಗಿಸಲಾಗಿದ್ದು, ಅದು 90W ವೇಗದ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನಿನ ಬೆಲೆ 34,999 ರೂ. ಆಗಿದೆ.