PBKS vs DC: ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್! ನಿರ್ಣಾಯಕ ಪಂದ್ಯದಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡ DC | punjab kings won the toss and elected to bat first against delhi capitals

PBKS vs DC: ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್! ನಿರ್ಣಾಯಕ ಪಂದ್ಯದಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡ DC | punjab kings won the toss and elected to bat first against delhi capitals

ಪಂಜಾಬ್ ತಂಡದ ಯಾವುದೇ ಬದಲಾವಣೆಯಿಲ್ಲದೆ ಕಣಕ್ಕಿಳಿಯುತ್ತಿದೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಒಂದು ಬದಲಾವಣೆ ಮಾಡಿಕೊಂಡಿದೆ. ವಿಪ್ರಜ್ ನಿಗಮ್ ಬದಲಿಗೆ ಮಾಧವ್ ತಿವಾರಿ ತಂಡಕ್ಕೆ ಸೇರಿಕೊಂಡಿದ್ದಾರೆ.

ಹೆಟು-ಟು-ಹೆಡ್ ದಾಖಲೆ

ಪಂಜಾಬ್ ಮತ್ತು ಡೆಲ್ಲಿ ಪರಸ್ಪರ ಒಟ್ಟು 33 ಪಂದ್ಯಗಳನ್ನು ಆಡಿವೆ.  ಪಿಬಿಕೆಎಸ್ 17 ಪಂದ್ಯಗಳನ್ನು ಗೆದ್ದಿದ್ದರೆ, ಡಿಸಿ 16 ಪಂದ್ಯಗಳನ್ನು ಗೆದ್ದಿದೆ.

ಎರಡು ತಂಡಗಳ  ಪ್ಲೇಯಿಂಗ್ ಇಲೆವೆನ್

ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಫಾಫ್ ಡು ಪ್ಲೆಸಿಸ್, ಅಭಿಷೇಕ್ ಪೊರೆಲ್(ವಿಕೀ), ಕೆಎಲ್ ರಾಹುಲ್, ಸಮೀರ್ ರಿಜ್ವಿ, ಅಕ್ಷರ್ ಪಟೇಲ್(ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಮಾಧವ್ ತಿವಾರಿ, ಮಿಚೆಲ್ ಸ್ಟಾರ್ಕ್, ದುಷ್ಮಂತ ಚಮೀರಾ, ಕುಲದೀಪ್ ಯಾದವ್, ಟಿ ನಟರಾಜನ್.

ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ XI): ಪ್ರಭಾಸಿಮ್ರಾನ್ ಸಿಂಗ್, ಪ್ರಿಯಾಂಶ್ ಆರ್ಯ, ಜೋಶ್ ಇಂಗ್ಲಿಸ್(ವಿಕೀ), ಶ್ರೇಯಸ್ ಅಯ್ಯರ್(ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಮಾರ್ಕೊ ಜಾನ್ಸೆನ್, ಅಜ್ಮತುಲ್ಲಾ ಒಮರ್ಜಾಯ್, ಯುಜ್ವೇಂದ್ರ ಚಾಹಲ್, ಅರ್ಶ್ದೀಪ್ ಸಿಂಗ್

ಪ್ಲೇ ಆಫ್ ಚಾನ್ಸ್ ಹೇಗಿದೆ?

ಪಂಜಾಬ್ ಕಿಂಗ್ಸ್ 11 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಹಾಗೂ 3 ಸೋಲುಗಳೊಂದಿಗೆ 15 ಅಂಕ ಹೊಂದಿದ್ದು, ಅಂಕ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.  ಈ ಪಂದ್ಯವನ್ನ ಗೆದ್ದರೆ ಕೇವಲ ಅಗ್ರಸ್ಥಾನಕ್ಕೇರುವುದಲ್ಲದೆ, ತನ್ನ ಪ್ಲೇ ಆಫ್ ಸ್ಥಾನವನ್ನ ಖಚಿತಪಡಿಸಿಕೊಳ್ಳಲಿದೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್​ಗೆ ಈ ಪಂದ್ಯವನ್ನ ಗೆಲ್ಲಲೇಬೇಕಿದೆ. 11 ಪಂದ್ಯಗಳಿಂದ 5 ಗೆಲುವು-5 ಸೋಲಿನೊಂದಿಗೆ 13 ಅಂಕ ಹೊಂದಿದ್ದು,  ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಡೆಲ್ಲಿ ಪಡೆ ಈ ಪಂದ್ಯ ಸೇರಿ ಒಟ್ಟು 3 ಪಂದ್ಯಗಳನ್ನಾಡಿದ್ದು, ಎಲ್ಲವರನ್ನು ಗೆದ್ದರೆ ಮಾತ್ರ ಪ್ಲೇ ಆಫ್ ಪ್ರವೇಶಿಸಲಿದೆ. ಒಂದರಲ್ಲಿ ಸೋತರೂ ಟೂರ್ನಿಯಿಂದ ಹೊರಬೀಳಲಿದೆ.