Last Updated:
ಬಾಲಿವುಡ್‌ನ ಆ ನಟಿ ಮತ್ತು ನಾನು ರಿಲೇಷನ್ ಅಲ್ಲಿಯೇ ಇದ್ದೇವು. ಆದರೆ, ನಮ್ಮ ಈ ರಿಲೇಷನ್‌ನಿಂದ ನನ್ನ ಆಟದ ಮೇಲೆ ಎಫೆಕ್ಟ್ ಆಗುತ್ತಿತ್ತು. ನನ್ನ ರನ್ ಕಡಿಮೆ ಆಗ್ತಾನೇ ಹೋಯಿತು. ಹಾಗೆ ಯುವರಾಜ್ ಸಿಂಗ್ ಹೇಳಿಕೊಂಡಿದ್ದರು. ಆ ನಟಿ ಯಾರು? ಲವ್ ಬ್ರೇಕ್ ಅಪ್‌ಗೆ ಇರೋ ಆ ಇನ್ನೂ ಒಂದು ಕಾರಣ ಏನು? ಎಲ್ಲವೂ ಇಲ್ಲಿದೆ ಓದಿ.
ಆಸ್ಟ್ರೇಲಿಯಾದಲ್ಲಿ ಪಂದ್ಯ ನಡೆದಿತ್ತು. ಆ ನಟಿ ಕೂಡ ಆ ದಿನ ಇಲ್ಲಿಯೇ ಶೂಟಿಂಗ್ (Shooting) ಮಾಡ್ತಾ ಇದ್ದರು. ಆದರೆ, ಆ ಕ್ರಿಕೆಟರ್ (Cricketer) ಆ ನಟಿಗೆ ಹೇಳಿಯೇ ಬಿಟ್ಟಿದ್ದರು. ಇನ್ಮೇಲೆ ನೀನು ನಿನ್ನ ಕರಿಯರ್ ನೋಡಿಕೊಂಡು ಬಿಡು. ನಾನು ನನ್ನ ಕರಿಯರ್ ಮೇಲೆ ಫೋಕಸ್ ಮಾಡ್ತೀನಿ. ಕಾರಣ ನಾನು ಹೆಚ್ಚಿನ ರನ್ (Run) ತೆಗೆಯೋ ಹಾಗ್ತಿಲ್ಲ. ಸಾಕಿನ್ನು ನಮ್ಮ ಲವ್ ಸ್ಟೋರಿ..(Love Story) ಅದ್ಯಾಕೋ ಜಾಸ್ತಿ ಆಗ್ತಿದೆ. ಹೀಗೆ ಹೇಳಿ ಆ ಕ್ರಿಕೆಟರ್ ಎದ್ದು ಹೋದ್ರು. ಆದರೆ, ಮನಸ್ಸು ಆ ನಟಿಯತ್ತ ಎಳೆಯುತ್ತಲೇ ಇತ್ತು. ಆಟ ಮುಗಿದ್ಮೇಲೆ ರೂಮ್‌ಗೆ ಬಂದ್ರು. ಆ ಕಡೆಯಿಂದ ನಟಿ ಬಂದ್ರು. ಈ ಕಡೆಯಿಂದ ಕ್ರಿಕೆಟರ್ ಬಂದ್ರು. ಆದರೆ, ಆ ದಿನ ಇನ್ನೂ ಒಂದು ಕೆಲಸ ಆಯಿತು. ಅದು ಇಂಟ್ರಸ್ಟಿಂಗ್ ಆಗಿಯೇ ಇದೆ. ಇಲ್ಲಿ ಮುಂದೆ ಇದೆ ಓದಿ….
ನನ್ನ ಪಿಂಕ್ ಚಪ್ಲಿ ಹಾಕಿ ಕೊಂಡು ಹೋಗು
ಹೌದು, ಈ ರೀತಿ ಆ ನಟಿ ಕ್ರಿಕೆಟರ್ ಯುವರಾಜ್ ಸಿಂಗ್‌ಗೆ ಹೇಳಿದ್ದರು. ಪರಸ್ಪರ ರಾತ್ರಿಯಡಿ ಮಾತ್ ಆಡಿದ್ಮೇಲೆ ಇಬ್ಬರು ಒಂದು ನಿರ್ಧಾರಕ್ಕೆ ಬಂದಿದ್ದರು. ಇನ್ಮೇಲೆ ನಾವು ನಮ್ಮ ಕರಿಯರ್ ಮೇಲೆ ಫೋಕಸ್ ಮಾಡೋಣ. ನಾನು ನನ್ನ ಕರಿಯರ್ ಮೇಲೆ ಫೋಕಸ್ ಮಾಡುತ್ತೇನೆ. ನೀನು ನಿನ್ನ ಕರಿಯರ್ ಮೇಲೆ ಫೋಕಸ್ ಮಾಡು ಅಂತಲೇ ಹೇಳಿಕೊಂಡರು.
ನನ್ನ ಪಿಂಕ್ ಚಪ್ಲಿ ಹಾಕಿ ಕೊಂಡು ಹೋಗು
ಆದರೆ, ಬೆಳಗ್ಗೆ ಒಂದು ಎಡವಟ್ಟು ಆಗಿತ್ತು. ಯುವರಾಜ್ ಸಿಂಗ್ ತಮ್ಮ ಶೂ ಹುಡುಕುತ್ತಿದ್ದರು. ಎಲ್ಲಿ ನನ್ನ ಶೂ ಅಂತ ಆ ನಟಿಯನ್ನ ಕೇಳಿದರು. ನಿನ್ನ ಆ ಶೂಗಳನ್ನ ನಾನು ನನ್ನ ಬ್ಯಾಗ್ ಅಲ್ಲಿಯೇ ಪ್ಯಾಕ್ ಮಾಡಿಕೊಂಡಿದ್ದೇನೆ ಅಂತಲೇ ಹೇಳಿದರು. ಆಗ ಯುವರಾಜ್ ಸಿಂಗ್, ನಾನು ಈಗ ಏನು ಹಾಕಿಕೊಂಡು ಹೋಗ್ಲಿ ಅಂತಲೇ ಕೇಳ್ತಾರೆ. ಅದಕ್ಕೆ ಆ ನಟಿ ಅಲ್ಲಿ ನನ್ನ ಪಿಂಕ್ ಚಪ್ಲಿ ಇವೆ. ಅವುಗಳನ್ನೆ ಹಾಕಿಕೊಂಡು ಹೋಗು ಅಂತಲೇ ಹೇಳ್ತಾರೆ.
ಇದನ್ನೂ ಓದಿ: David warner First Look: ರಾಬಿನ್ ಹುಡ್ ಸಿನಿಮಾದ ಡೇವಿಡ್ ವಾರ್ನರ್ ಲುಕ್ ರಿಲೀಸ್! ಚಿತ್ರದ ಪ್ರಚಾರದಲ್ಲೂ ಇರ್ತಾರಾ?
ಹೀಗೆ ಹೇಳಿರೋದು ದೀಪಿಕಾ ಪಡುಕೋಣೆನೇ ನೋಡಿ
ದೀಪಿಕಾ ಪಡುಕೋಣೆ ಮತ್ತು ಯುವರಾಜ್ ಸಿಂಗ್ ಲವ್ ಸ್ಟೋರಿ ಸಾಕಷ್ಟು ಚರ್ಚೆ ಆಗಿತ್ತು. ಸುಮಾರು ಪಂದ್ಯಗಳಲ್ಲಿ ಇಬ್ಬರು ಜೊತೆಗೆ ಕಾಣಿಸಿಕೊಂಡಿದ್ದರು. 2007 ರ 20 ವಿಶ್ವಕಪ್ ಸಮಯದಲ್ಲಿಯೇ ಇವರು ಭೇಟಿ ಆಗಿದ್ದರು. ಆಗಲೇ ಇವರ ಮಧ್ಯೆ ಸ್ನೇಹ ಬೆಳೆದಿತ್ತು.
ಆದರೆ, ಮುಂದೆ ಇಬ್ಬರು ರಿಲೇಷನ್‌ಶಿಪ್ ಅಲ್ಲೂ ಇದ್ದರು. ಆದರೆ, ಇವರ ಈ ಒಂದು ಲವ್ಲಿ ರಿಲೇಷನ್ ಬಹಳ ದಿನ ಉಳಿಯಲಿಲ್ಲ. ಇದಕ್ಕೆ ಕಾರಣ ಕೂಡ ಇತ್ತು. ಯುವರಾಜ್ ಸಿಂಗ್ ತುಂಬಾನೆ ಪೊಸೆಸ್ಸಿವ್ ಆಗಿಯೇ ಇದ್ದರು. ಇದಲ್ಲದೆ ದೀಪಿಕಾ ಪಡುಕೋಣೆ ನಟ ರಣ್‌ಬೀರ್ ಕಪೂರ್ ಜೊತೆಗೂ ಕ್ಲೋಸ್ ಆಗಿದ್ದರು. ಹಾಗಾಗಿಯೇ ಆ ದಿನ ರಾತ್ರಿ ಬ್ರೇಕ್ ಅಪ್ ಆಯಿತು ಅನ್ನೋ ಮಾತುಗಳೂ ಕೇಳಿ ಬರುತ್ತವೆ.
ಆ ದಿನ ಇಡೀ ರಾತ್ರಿ ಇವರು ಮಾತನಾಡಿದ್ದರು
ಆ ದಿನ ಇಡೀ ರಾತ್ರಿ ಇವರು ಮಾತನಾಡಿದ್ದರು
ಆಸ್ಟ್ರೇಲಿಯಾದಲ್ಲಿ ಮ್ಯಾಚ್ ಇದ್ದವು. ಅದಕ್ಕೇನೆ ಯುವರಾಜ್ ಸಿಂಗ್ ಆಸ್ಟ್ರೇಲಿಯಾಕ್ಕೆ ಬಂದಿದ್ದರು. ದೀಪಿಕಾ ಪಡುಕೋಣೆ ಕೂಡ ಆಸ್ಟ್ರೇಲಿಯಾಕ್ಕೆ ಆಗಮಿಸಿದ್ದರು. ಆದರೆ, ಅದರೆ ಯುವಿ ಪಂದ್ಯ ನೋಡೋಕೆ ಅಲ್ವೇ ಅಲ್ಲ. ಬಚ್ನಾ ಏ ಹಸೀನೋ ಚಿತ್ರದ ಶೂಟಿಂಗ್‌ಗಾಗಿಯೇ ದೀಪಿಕಾ ಪಡುಕೋಣೆ ಇಲ್ಲಿಗೆ ಬಂದಿದ್ದರು.
ಇದನ್ನೂ ಓದಿ: Ranya Rao: ರನ್ಯಾ ರಾವ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಪಾಳಕ್ಕೆ ಹೊಡೆದ್ರಾ ಅಧಿಕಾರಿಗಳು? ಜೈಲಿನಿಂದಲೇ ಪತ್ರ ಬರೆದ ನಟಿ
ಆ ದಿನ ರಾತ್ರಿ ಇವರು ತುಂಬಾನೆ ಮಾತನಾಡಿದರು. ರಾತ್ರಿ ಇಡಿ ಮಾತು ಆಡಿದ್ಮೇಲೆ ಇನ್ಮೇಲೆ ನಿನ್ನ ದಾರಿ ನಿನಗೆ. ನನ್ನ ದಾರಿ ನನಗೆ ಅನ್ನೋ ಅರ್ಥದಲ್ಲಿಯೇ ಹೇಳಿಕೊಂಡಿದ್ದರು. ನಾನು ನನ್ನ ಕರಿಯರ್ ಮೇಲೆ ಫೋಕಸ್ ಮಾಡುತ್ತೇನೆ. ರನ್‌ಗಳು ತುಂಬಾನೆ ಕಡಿಮೆ ಆಗುತ್ತಿವೆ. ನೀನು ನಿನ್ನ ಕರಿಯರ್ ಮೇಲೆ ಪೋಕಸ್ ಮಾಡು ಅಂತಲೇ ಯುವರಾಜ್ ಸಿಂಗ್ ಹೇಳಿದ್ದರು.
ಹೀಗೆ ದೂರ ಆದ ಈ ಜೋಡಿಯ ಲವ್ಲಿ ರಿಲೇಷನ್ ಸ್ಟೋರಿ ಬ್ರೇಕ್ ಆಯಿತು. ಈಗ ಯುವರಾಜ್ ಸಿಂಗ್ ಮಾಡೆಲ್ ಮತ್ತು ನಟಿ ಹ್ಯಾಝೆಲ್ ಕೀಚ್ ಜೊತೆಗೆ ಮದುವೆ ಆಗಿದ್ದಾರೆ. ದೀಪಿಕಾ ಪಡುಕೋಣೆ ನಟ ರಣವೀರ್ ಸಿಂಗ್ ಜೊತೆಗೆ ವಿವಾಹವಾಗಿ ಸುಖ ಜೀವನ ನಡೆಸುತ್ತಿದ್ದಾರೆ ಅಂತಲೂ ಹೇಳಬಹುದು.
Bangalore [Bangalore],Bangalore,Karnataka
March 15, 2025 7:25 PM IST