Preethiya Parivala: ಪಾಕ್ ಕ್ರಿಕೆಟಿಗನ ಪ್ರೀತಿಯಲ್ಲಿ ಬಿದ್ದ ಖ್ಯಾತ ಮಾಡೆಲ್! ಅವ್ರನ್ನ ಟ್ರೋಲ್ ಮಾಡಿದ್ರೆ, ಇವಳ ಹಾರ್ಟ್‌ಗೆ ಒಡೆದು ಹೋಗುತ್ತಂತೆ! | Popular Model admits she in love with cricketer Babar Azam

Preethiya Parivala: ಪಾಕ್ ಕ್ರಿಕೆಟಿಗನ ಪ್ರೀತಿಯಲ್ಲಿ ಬಿದ್ದ ಖ್ಯಾತ ಮಾಡೆಲ್! ಅವ್ರನ್ನ ಟ್ರೋಲ್ ಮಾಡಿದ್ರೆ, ಇವಳ ಹಾರ್ಟ್‌ಗೆ ಒಡೆದು ಹೋಗುತ್ತಂತೆ! | Popular Model admits she in love with cricketer Babar Azam
News18News18
News18

ಬಾಬರ್ ಅಜಮ್ (babar azam) ಪಾಕಿಸ್ತಾನಿ (Pakistani) ಕ್ರಿಕೆಟ್‌ನ ಅತ್ಯಂತ ಜನಪ್ರಿಯ ಆಟಗಾರರಲ್ಲಿ ಒಬ್ಬರು. ಮೈದಾನದ ಒಳಗೆ ಮತ್ತು ಹೊರಗೆ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ, ARY ಜಿಂದಗಿ ಚಾಟ್ ಶೋನಲ್ಲಿ ಭಾಗವಹಿಸಿದ್ದ ಜನಪ್ರಿಯ ಮಾಡೆಲ್ ದುವಾ ಜಹ್ರಾ, ಬಾಬರ್ ಅಜಮ್ ಅಜಮ್ ಮೇಲಿನ ತನ್ನ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದರು. ಏನು ಹೇಳಿದ್ರು ಗೊತ್ತಾ?

ಯಾರಾದ್ರೂ ಟ್ರೋಲ್‌‌ ಮಾಡಿದ್ರೆ….

ಮಾಡೆಲ್‌ ಮಾತನಾಡಿ, “ಬಾಬರ್ ಅಜಮ್ ನನಗೆ ಒಬ್ಬನೇ. ನನಗೆ ಅವರ ಮೇಲೆ ಅಪಾರ ಪ್ರೀತಿ ಇದೆ, ಮತ್ತು ಅವರ ವಿರುದ್ಧ ನಡೆಯುತ್ತಿರುವ ಟ್ರೋಲಿಂಗ್ ಅನ್ನು ನಾನು ಒಪ್ಪುವುದಿಲ್ಲ. ಬಾಬರ್ ಬಗ್ಗೆ ಯಾರಾದರೂ ಕೆಟ್ಟದಾಗಿ ಮಾತನಾಡುವುದನ್ನು ನೋಡಿದಾಗ ನನಗೆ ತುಂಬಾ ನೋವುಂಟಾಗುತ್ತದೆ, ಅದು ನನ್ನ ಹೃದಯ ಒಡೆದು ಹೋಗುತ್ತೆ ಎಂದು ನನಗೆ ಅನಿಸುತ್ತದೆ.”ಎಂದು ಹೇಳಿಕೊಂಡಿದ್ದಾರೆ.

ವ್ಯಕ್ತಿತ್ವ ಇಷ್ಟ

ಬಾಬರ್ ಅಜಮ್ ಅವರನ್ನು ಆಟಗಾರನಾಗಿ ಮಾತ್ರವಲ್ಲದೆ ಅವರ ವ್ಯಕ್ತಿತ್ವಕ್ಕೂ ನಾನು ಮೆಚ್ಚುತ್ತೇನೆ.. ಅವರು ಸಾಮಾನ್ಯವಾಗಿ ಸಂಬಂಧಗಳಲ್ಲಿ ನಂಬಿಕೆ ಇಡುವುದಿಲ್ಲ, ಆದರೆ ಮದುವೆಯಲ್ಲಿ ನಂಬಿಕೆ ಇಡುತ್ತಾರೆ.. ಪ್ರಾಮಾಣಿಕ ಮತ್ತು ದ್ರೋಹ ಮುಕ್ತ ಸಂಬಂಧಗಳನ್ನು ಅವರು ಬಯಸುತ್ತಾರೆ” ಎಂದು ಹೇಳಿಕೊಂಡಿದ್ದರು.

ಯಾರು ಈ ಮಾಡೆಲ್?

ದುವಾ ಜಹ್ರಾ ಒಬ್ಬ ಮಾಡೆಲ್, ನಟಿ ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿಯಾಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ 351 ಸಾವಿರ ಅನುಯಾಯಿಗಳನ್ನು ಹೊಂದಿದ್ದಾರೆ. ಮತ್ತು ಅವರ ಸೌಂದರ್ಯ ಮತ್ತು ಆಕರ್ಷಕ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಸದ್ಯ ಬಾಬರ್ ಅಜಮ್ ತಮ್ಮ ವೃತ್ತಿಜೀವನದತ್ತ ಗಮನ ಹರಿಸಿದ್ದಾರೆ.

ಇದನ್ನೂ ಓದಿ: Salman Rashmika: ಶೂಟಿಂಗ್‌ ಸೆಟ್‌ನಲ್ಲಿ ಇರಲ್ಲ, ಹೇಳಿದ ಟೈಮ್‌ಗೆ ಬರಲ್ಲ ಅಂದವ್ರಿಗೆ ಖಡಕ್‌ ಟಕ್ಕರ್ ಕೊಟ್ಟ ಸಲ್ಲು ಭಾಯ್‌!

ನಟಿಯ ಜೊತೆ ತುಳುಕು

ಬಾಬರ್ ಅಜಮ್ ತಮ್ಮ ವೃತ್ತಿಜೀವನದ ಹೊರತಾಗಿ, ವೈಯಕ್ತಿಕ ಜೀವನದಲ್ಲೂ ಮುಖ್ಯಾಂಶವಾಗುತ್ತಾರೆ. ಆಗಾಗ ಅವರು ಒಬ್ಬ ನಟಿಯ ಜೊತೆ ಇರುವ ಸುದ್ದಿ ಕೇಳಿಬರುತ್ತದೆ. ಇತ್ತೀಚೆಗಷ್ಟೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಚಿತ್ರದಲ್ಲಿ, ಪಾಕಿಸ್ತಾನ ತಂಡದ ಮಾಜಿ ನಾಯಕ ಬಾಬರ್ ಅಜಮ್ ಒಂದು ಹೋಟೆಲ್‌ನಲ್ಲಿ ಒಬ್ಬ ಯುವತಿಯ ಜೊತೆ ಡಿನ್ನರ್‌ ಡೇಟ್‌ ಮಾಡುತ್ತಿರುವುದು ಕಂಡುಬಂದಿತ್ತು. ಈ ಯುವತಿಯನ್ನು ಬಾಬರ್ ಅಜಮ್ ಅವರ ಗರ್ಲ್‌ಫ್ರೆಂಡ್‌ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Darshan Dhanveer : ಜೈಲಿಂದ ಬಂದ ಮೇಲೆ ದರ್ಶನ್ ಬದಲಾದ್ರಾ? ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಧನ್ವೀರ್!

ಇವರಷ್ಟೇ ಅಲ್ಲದೆ ಮತ್ತೊಬ್ಬ ಯುವತಿಯೂ ಬಾಬರ್ ಅಜಮ್ ಹೆಸರ ಜೊತೆ ತುಳುಕು ಹಾಕಿಕೊಂಡಿತ್ತು. ಈ ವಿಚಾರ ಹೆಚ್ಚು ಸದ್ದು ಮಾಡಿದ್ದು ಆಕೆ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾಳನ್ನು ಹೋಲುತ್ತಿರುವುದರಿಂದ. ಈ ಫೋಟೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ, ಬಾಬರ್ ಅಜಮ್ ಶೀಘ್ರದಲ್ಲೇ ಈ ಯುವತಿಯನ್ನು ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಆಕೆಯ ಹೆಸರು ಹನಿಯಾ ಅಮೀರ್, ಈಕೆ ಕಾಣಲು ಕೊಂಚ ಅನುಷ್ಕಾ ಶರ್ಮಾಳಂತೆ ಕಾಣಿಸುತ್ತಾರೆ. ಇದೇ ಕಾರಣಕ್ಕೆ ಸೋಶಿಯಲ್‌ ಮೀಡಿಯಾದಲ್ಲಿ ಜನರು ಈಕೆಯನ್ನು ಪಾಕಿಸ್ತಾನದ ಅನುಷ್ಕಾ ಶರ್ಮಾ ಎಂದು ಕರೆಯುತ್ತಾರೆ. ಹನಿಯಾ ವೃತ್ತಿಯಲ್ಲಿ ಪಾಕಿಸ್ತಾನಿ ನಟಿ ಎನ್ನಲಾಗಿದೆ.

ಕನ್ನಡ ಸುದ್ದಿ/ ನ್ಯೂಸ್/ಮನರಂಜನೆ/

Preethiya Parivala: ಪಾಕ್ ಕ್ರಿಕೆಟಿಗನ ಪ್ರೀತಿಯಲ್ಲಿ ಬಿದ್ದ ಖ್ಯಾತ ಮಾಡೆಲ್! ಅವ್ರನ್ನ ಟ್ರೋಲ್ ಮಾಡಿದ್ರೆ, ಇವಳ ಹಾರ್ಟ್‌ಗೆ ಒಡೆದು ಹೋಗುತ್ತಂತೆ!