Last Updated:
ಇಂಡಿಯನ್ ರಾಕ್ ಪೈತಾನ್’ ಎಂದು ಕರೆಯಲಾಗುವ ಹೆಬ್ಬಾವನ್ನು ಆಶಾ ಅವರು ಯಾವುದೇ ಭಯವಿಲ್ಲದೆ ನಾಜೂಕಾಗಿ ಹಿಡಿದು ಗೋಣಿ ಚೀಲಕ್ಕೆ ತುಂಬಿಸುವ ಸಾಹಸಿ ವೀಡಿಯೋ ಇದೀಗ ಕರಾವಳಿ ಭಾಗದಲ್ಲಿ ಭಾರೀ ವೈರಲ್ ಆಗುತ್ತಿದೆ.
ಬೆಳ್ತಂಗಡಿ: ಭಾರೀ ಗಾತ್ರದ ಹೆಬ್ಬಾವೊಂದನ್ನು(Python) ಮಹಿಳೆಯೊಬ್ಬರು ಹಿಡಿದು ಗೋಣಿ ಚೀಲಕ್ಕೆ ತುಂಬಿಸಿ ಕಾಡಿಗೆ ಬಿಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ (Belthangady) ತಾಲೂಕಿನ ಉರುವಾಲು ಗ್ರಾಮದ ನೆಕ್ಕಿಲು ಜಾರಿಗೆದಡಿಯಲ್ಲಿ ನಡೆದಿದೆ. ಹಾವನ್ನು ಹಿಡಿದ ಸಾಹಸಿ ಮಹಿಳೆ ಕುಪ್ಪೆಟ್ಟಿಯ ಆಶಾ. ಹೆಬ್ಬಾವಿನ ಗಾತ್ರವನ್ನು ಕಂಡು ಅಲ್ಲಿದ್ದ ಗಂಡಸರೇ ಬೆದರುತ್ತಿರುವಾಗ ಗಟ್ಟಿಗಿತ್ತಿ ಮಹಿಳೆ ಆಶಾ(Lady Asha) ಎಂಬುವರು ಹೆಬ್ಬಾವನ್ನೇ ಹಿಡಿದು ತಾನು ಯಾವ ಗಂಡಸಿಗೂ ಕಡಿಮೆಯಿಲ್ಲ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ.
`ಇಂಡಿಯನ್ ರಾಕ್ ಪೈತಾನ್’ ಎಂದು ಕರೆಯಲಾಗುವ ಹೆಬ್ಬಾವನ್ನು ಆಶಾ ಅವರು ಯಾವುದೇ ಭಯವಿಲ್ಲದೆ ನಾಜೂಕಾಗಿ ಹಿಡಿದು ಗೋಣಿ ಚೀಲಕ್ಕೆ ತುಂಬಿಸುವ ಸಾಹಸಿ ವೀಡಿಯೋ ಇದೀಗ ಕರಾವಳಿ ಭಾಗದಲ್ಲಿ ಭಾರೀ ವೈರಲ್ ಆಗುತ್ತಿದೆ. ಬೆಕ್ಕೊಂದರ ಬೇಟೆಯಲ್ಲಿದ್ದ ಹೆಬ್ಬಾವನ್ನು ಅಲ್ಲಿದ್ದವರು ಹಿಡಿಯಲು ಹೆದರುತ್ತಿದ್ದರೂ, ಆಶಾ ಅವರು ಬಹಳ ಚಾಕಚಕ್ಯತೆಯಿಂದ ಹಿಡಿದು ಗೋಣಿಚೀಲದಲ್ಲಿ ತುಂಬಿಸಿ ಕಾಡಿಗೆ ಬಿಟ್ಟಿದ್ದಾರೆ.
ಇದನ್ನೂ ಓದಿ: Fly Boat: ಗೋಕರ್ಣದಲ್ಲಿದೆ ಅದ್ಭುತ ವಾಟರ್ ಅಡ್ವೆಂಚರ್- ಕರ್ನಾಟಕದಲ್ಲೇ ಇದು ಮೊದಲ ಪ್ರಯತ್ನ
ನೆಕ್ಕಿಲು ಜಾರಿಗೆದಡಿ ಬಾಬು ಮಾಸ್ಟರ್ ಎಂಬುವವರ ತೋಟದಲ್ಲಿ ಹೆಬ್ಬಾವು ಕಂಡುಬಂದಿತ್ತು.ಈ ವಿಚಾರವನ್ನು ಆಟೋ ಚಾಲಕ ಬಶೀರ್ ಆಶಾ ಅವರಿಗೆ ತಿಳಿಸಿದ್ದರು. ಕೂಡಲೇ ಆಶಾ ಸ್ಥಳಕ್ಕೆ ತೆರಳಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಆಶಾ ಅವರು ಮೂಲತಃ ಮಾಣಿಯವರಾಗಿದ್ದು,ಅವರ ಗಂಡನ ಮನೆ ಅಂಡಿಂಜೆಯಲ್ಲಿದೆ.
ಆಶಾ ಅವರಿಗೆ ಇಬ್ಬರು ಮಕ್ಕಳಿದ್ದು, ಕಳೆದ 21 ವರ್ಷಗಳಿಂದ 900ಕ್ಕೂ ಅಧಿಕ ಹಾವುಗಳ ರಕ್ಷಣೆ ಮಾಡಿದ್ದಾರೆ. ಈ ವರೆಗೆ 98 ಹೆಬ್ಬಾವು, 32 ನಾಗರಹಾವು ಸೇರಿದಂತೆ ಹಲವು ಜಾತಿಯ ಹಾವುಗಳನ್ನು ಆಶಾ ಅವರು ಹಿಡಿದಿದ್ದಾರೆ.
Dakshina Kannada,Karnataka
November 07, 2024 10:50 AM IST