Last Updated:
ಬಾವಿಯಲ್ಲಿ ತ್ಯಾಜ್ಯರಾಶಿ, ಹೂಳು ತುಂಬಿ ಕಾಲು ಹೂತು ಹೋಗುತ್ತಿತ್ತು. ಆದರೂ ಇಬ್ಬರೂ ಕಷ್ಟಪಟ್ಟು ಹೆಬ್ಬಾವನ್ನು ರಕ್ಷಿಸಿ ಗೋಣಿಚೀಲದಲ್ಲಿ ತುಂಬಿಸಿ ಮೇಲಕ್ಕೆತ್ತಿದ್ದಾರೆ.
ದಕ್ಷಿಣ ಕನ್ನಡ: ಮಂಗಳೂರು ನಗರದ ಮೇರಿಹಿಲ್‌ನ ಪಿಂಟೋಸ್ ಲೇನ್‌ನಲ್ಲಿರುವ ಪಾಳುಬಾವಿಯೊಂದರಲ್ಲಿ (Deserted Well) ಬಿದ್ದಿದ್ದ ಭಾರೀ ಗಾತ್ರದ ಹೆಬ್ಬಾವನ್ನು(Python) ರಕ್ಷಿಸಲಾಗಿದೆ. ಈ ಪಾಳುಬಾವಿಯಲ್ಲಿ ಹೆಬ್ಬಾವು ಬಿದ್ದಿರುವ ಬಗ್ಗೆ ವನ್ಯಜೀವಿ ಸಂರಕ್ಷಕ ಭುವನ್ (Wildlife Conservation Bhuvan) ಅವರಿಗೆ ಬಂದಿತ್ತು. ಹಾಗಾಗಿ ಅವರು ಪಶುವೈದ್ಯ ಡಾ.ಯಶಸ್ವಿ ಅವರೊಂದಿಗೆ ಸ್ಥಳಕ್ಕೆ ತೆರಳಿ ಹೆಬ್ಬಾವಿನ ಇರುವಿಕೆಯನ್ನು ಗಮನಿಸಿದ್ದರು. ಅರಣ್ಯ ಇಲಾಖೆ, ಮಂಗಳೂರಿನ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಅವರೂ ಸ್ಥಳಕ್ಕೆ ಆಗಮಿಸಿದ್ದರು.
ಇದನ್ನೂ ಓದಿ: Attukal Bhagavathy Temple: ಕೇರಳದ ಈ ಕ್ಷೇತ್ರ ಮಹಿಳೆಯರ ಶಬರಿಮಲೆ- ಇಲ್ಲಿನ ಅಟುಕಲ್ ಪೊಂಗಲ್ ಸೇವೆ ಸಖತ್ ಫೇಮಸ್!
ಬಳಿಕ ಡಾ.ಯಶಸ್ವಿ ಅವರ ನಿರ್ದೇಶನಂತೆ ವನ್ಯಜೀವಿ ಸಂರಕ್ಷಕರಾದ ಭುವನ್ ದೇವಾಡಿಗ ಹಾಗೂ ರಾಹುಲ್ ಅವರು ಹತ್ತಾರು ಅಡಿ ಆಳವಿದ್ದ ಬಾವಿಗೆ ಇಳಿದಿದ್ದಾರೆ. ಬಾವಿಯಲ್ಲಿ ತ್ಯಾಜ್ಯರಾಶಿ, ಹೂಳು ತುಂಬಿ ಕಾಲು ಹೂತು ಹೋಗುತ್ತಿತ್ತು. ಆದರೂ ಇಬ್ಬರೂ ಕಷ್ಟಪಟ್ಟು ಹೆಬ್ಬಾವನ್ನು ರಕ್ಷಿಸಿ ಗೋಣಿಚೀಲದಲ್ಲಿ ತುಂಬಿಸಿ ಮೇಲಕ್ಕೆತ್ತಿದ್ದಾರೆ.
ಇನ್ನೊಂದು ಹೆಬ್ಬಾವು ಇದೆ ಎಂದು ಸ್ಥಳೀಯರು ಹೇಳುತ್ತಿದ್ದರೂ, ಅದು ಪತ್ತೆಯಾಗಿಲ್ಲ. ಆದ್ದರಿಂದ ಒಂದು ಹೆಬ್ಬಾವನ್ನು ಮಾತ್ರ ರಕ್ಷಿಸಲಾಗಿದೆ. ರಕ್ಷಿಸಿದ ಸುಮಾರು ಆರು ಅಡಿ ಉದ್ದದ ಹೆಬ್ಬಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.
Dakshina Kannada,Karnataka
April 10, 2025 6:35 PM IST