Last Updated:
ದಕ್ಷಿಣ ಕನ್ನಡ: ಮಳೆಗಾಲದಲ್ಲಿ ಕಪ್ಪೆಗಳ ವಟಗುಟ್ಟುವಿಕೆ ಗ್ರಾಮೀಣ ಭಾಗದ ಜನರಿಗೆ ಸಾಮಾನ್ಯ. ಈ ಶಬ್ದಗಳು ಕೃಷಿಕರಿಗೆ ಭತ್ತದ ನಾಟಿ ಸೇರಿದಂತೆ ಇತರ ಕಾರ್ಯಗಳಿಗೆ ಸೂಚನೆ ನೀಡುತ್ತವೆ.
ದಕ್ಷಿಣ ಕನ್ನಡ: ಮಳೆಗಾಲ(Rainy Season) ಬಂತೆಂದರೆ ನಮಗೆ ಮೊದಲು ಕೇಳಿಸೋದು ಕಪ್ಪೆಗಳ(Frogs) ವಟಗುಟ್ಟುವಿಕೆ. ನಗರ ಪ್ರದೇಶದ ಜನರಿಗೆ(People) ಈ ಶಬ್ದಗಳು ಕೇಳಿಸೋದು ಅಪರೂಪವಾಗಿದ್ದರೂ, ಗ್ರಾಮೀಣ ಭಾಗದ ಜನರಿಗೆ ಇದು ಸಾಮಾನ್ಯ. ಮಳೆ ಬಂದು ನೀರು ಕೆರೆ,ಹೊಳೆ, ಬಾವಿಗಳಲ್ಲಿ ಇನ್ನೇನು ತುಂಬಲು ಆರಂಭವಾಗುವ ಸಂದರ್ಭದಲ್ಲಿ ಕಪ್ಪೆಗಳು ಎದ್ದು ಬರುತ್ತವೆ. ಸಂಜೆಯಿಂದ ಮುಂಜಾನೆ ತನಕವೂ ಇಡೀ ರಾತ್ರಿ ಈ ಕಪ್ಪೆಗಳ ವಟಗುಟ್ಟುವಿಕೆ ಕೇಳಿಸುತ್ತೆ.
ಕಪ್ಪೆಗಳು ಈ ರೀತಿ ವಟಗುಟ್ಟಲು ಆರಂಭಿಸಿದಾಗ ಗ್ರಾಮೀಣ ಭಾಗದ ಕೃಷಿಕರಿಗೆ ಒಂದು ಸಂದೇಶವೂ ತಲುಪುತ್ತದೆ. ಹೌದು, ಕಪ್ಪೆಗಳ ಈ ರೀತಿ ಸಾಮೂಹಿಕ ವಟಗುಟ್ಟುವ ಹಿಂದೆ ಒಂದು ಸಂದೇಶವನ್ನೂ ಕೃಷಿಕರಿಗೆ ನೀಡುತ್ತದೆ. ಹೆಚ್ಚಾಗಿ ಗದ್ದೆ ಮತ್ತು ತೋಟಗಳ ಪಕ್ಕದಲ್ಲೇ ಕಾಣಸಿಗುವ ಕಪ್ಪೆಗಳಿಗೆ ಭೂಮಿಯಿಂದ ನೀರಿನ ಒರೆತ ಆಗುವ ಸಮಯ ತಿಳಿಯುತ್ತದೆ.
ನೀರಿನ ಒರೆತ ಆದ ತಕ್ಷಣವೇ ಈ ಕಪ್ಪೆಗಳು ಜೋರಾಗಿ ವಟಗುಟ್ಟಲು ಆರಂಭಿಸುತ್ತದೆ. ಈ ಸೂಚನೆ ದೊರೆತ ತಕ್ಷಣವೇ ಭತ್ತ ಕೃಷಿ ಮಾಡುವ ಕೃಷಿಕರು ಭತ್ತದ ನಾಟಿ ಹಾಗೂ ಇತರ ಕಾರ್ಯಗಳಿಗೆ ಅಣಿಯಾಗುತ್ತಾರೆ. ಬೇಸಿಗೆ ಕಾಲದಲ್ಲಿ ಸಂಪೂರ್ಣ ಭೂಗತವಾಗುವ ಈ ಕಪ್ಪೆಗಳು ಭೂಮಿಗೆ ಮಳೆಯ ಹನಿ ಬಿದ್ದ ತಕ್ಷಣವೇ ಪ್ರತ್ಯಕ್ಷವಾಗುತ್ತದೆ.
ಒಂದೊಂದು ಗದ್ದೆ, ತೋಟದ ಸುತ್ತ ಸಾವಿರ ಸಾವಿರ ಸಂಖ್ಯೆಯಲ್ಲಿ ಕಂಡು ಬರುವ ಈ ಕಪ್ಪೆಗಳು ಇತ್ತೀಚಿನ ದಿನಗಳಲ್ಲಿ ಮಳೆಗಾಲ ಬಂತೆಂದರೆ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಲು ಆರಂಭವಾಗಿದೆ. ಕಪ್ಪೆಗಳು ವಟಗುಟ್ಟುವ ವಿಡಿಯೋವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚುವ ಜನರೂ ಹೆಚ್ಚಾಗಿದ್ದಾರೆ. ಒಟ್ಟಾರೆ ಮಳೆಗಾಲ ಬಂತೆಂದರೆ ಸಾಕು ಸಾಮಾಜಿಕ ಜಾಲತಾಣದಲ್ಲೆಲ್ಲಾ ಇದೇ ಕಪ್ಪೆಗಳ ವಿಡಿಯೋ ವೈರಲ್ ಆಗುತ್ತಿದೆ.
Dakshina Kannada,Karnataka