Last Updated:
ರವೀಂದ್ರ ಜಡೇಜಾ ಸದ್ಯ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ತಮ್ಮ ಪ್ರಾಬಲ್ಯ ಮುಂದುವರೆಸಿದ್ದಾರೆ. ಈ ನಡುವೆ ಅವರು ಈ ಹಿಂದೆ ಒಮ್ಮೆ ಇಂಗ್ಲೆಂಡ್ ಆಟಗಾರ್ತಿ ಜೊತೆ ನಡೆಸಿದ ಸಂಭಾಷಣೆಯ ಚಾಟಿಂಗ್ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ.
ಭಾರತ ತಂಡದ ಸ್ಟಾರ್ ಆಲ್ರೌಂಡರ್, ವಿಶ್ವದ ನಂ-1 ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಸದ್ಯ ಟೀಂ ಇಂಡಿಯಾ ಪರ ಅಮೋಘ ಪ್ರದರ್ಶನ ನೀಡ್ತಾ ಇದ್ದಾರೆ. ಮಾತ್ರವಲ್ಲ, ಅನೇಕ ಹಿರಿಯ ಆಟಗಾರರು ನಿವೃತ್ತಿ ಹೊಂದಿದ ನಂತರವೂ ಜಡೇಜಾ ಮಾತ್ರ ಇನ್ನೂ ಕೂಡ ಟೀಂ ಇಂಡಿಯಾದ (Team India) ಭಾಗವಾಗಿದ್ದಾರೆ. ಮಾತ್ರವಲ್ಲ, ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ತಮ್ಮ ಪ್ರಾಬಲ್ಯ ಮುಂದುವರೆಸಿದ್ದಾರೆ. ಈ ನಡುವೆ ಅವರು ಈ ಹಿಂದೆ ಒಮ್ಮೆ ಇಂಗ್ಲೆಂಡ್ ಆಟಗಾರ್ತಿ (England Cricketer) ಜೊತೆ ನಡೆಸಿದ ಸಂಭಾಷಣೆಯ ಚಾಟಿಂಗ್ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ.
ಇತ್ತೀಚೆಗೆ, ಲಂಡನ್‌ನ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತನ್ನ ಕೊನೆಯ ಇನ್ನಿಂಗ್ಸ್‌ನಲ್ಲಿ 193 ರನ್‌ಗಳ ಗುರಿ ಬೆನ್ನಟ್ಟುತ್ತಿತ್ತು. ಅಗ್ರ ಕ್ರಮಾಂಕದ ಬ್ಯಾಟರ್ಗಳ ಕುಸಿದ ಹೊರತಾಗಿಯೂ ಅವರು ಗೋಡೆಯಂತೆ ನಿಂತು ಏಕಾಂಗಿಯಾಗಿ ಹೋರಾಟ ನಡೆಸಿದ್ದರು. ಮಾತ್ರವಲ್ಲ, ಅವರು ಅರ್ಧಶತಕ ಸಿಡಿಸಿ ಅಜೇಯರಾಗಿ ಉಳಿದಿದ್ದರು. ಆದ್ರೆ, ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಆದ್ರೆ, ಜಡೇಜಾ ಅವರ ಅದ್ಭುತ ಹೋರಾಟ ಅನೇಕರ ಹೃದಯಗಳನ್ನು ಗೆದ್ದಿತು.
ಈಗ ಅವರು ಬ್ಯಾಟಿಂಗ್ ಮೂಲಕ ಸದ್ದು ಮಾಡುತ್ತಿದ್ದಾರೆ. ಆದ್ರೆ, ಈ ಹಿಂದೆ ಏಪ್ರಿಲ್ 2014 ರಲ್ಲಿ ಜಡೇಜಾ ಸಂಪೂರ್ಣವಾಗಿ ವಿಭಿನ್ನ ಕಾರಣಕ್ಕಾಗಿ ಸುದ್ದಿಯಲ್ಲಿದ್ದರು. ಅದು ಇಂಗ್ಲೆಂಡ್ ಮಹಿಳಾ ತಂಡದ ಮಾಜಿ ವಿಕೆಟ್ ಕೀಪರ್ ಸಾರಾ ಟೇಲರ್ ಅವರೊಂದಿಗಿನ ತಡರಾತ್ರಿಯ ಚಾಟ್ ಆಗಿದ್ದು, ಅದು ವೈರಲ್ ಆಗಿತ್ತು.
ಏಪ್ರಿಲ್ 2014 ರಲ್ಲಿ ನಡೆದ ಟಿ20 ವಿಶ್ವಕಪ್ ಸಮಯದಲ್ಲಿ, ಜಡೇಜಾ ಮತ್ತು ಸಾರಾ ಟೇಲರ್ ನಡುವಿನ ಖಾಸಗಿ ಸಂಭಾಷಣೆ ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗವಾಯಿತು. ವರದಿಯ ಪ್ರಕಾರ, ಏಪ್ರಿಲ್ 7 ರಂದು ತಡರಾತ್ರಿ ಜಡೇಜಾ ಸಾರಾಗೆ ಸಂದೇಶ ಕಳುಹಿಸಿದ್ದರು. ಆದರೆ ಅವರು ಆಕೆಯನ್ನು ಫಾಲೋ ಮಾಡಿರಲಿಲ್ಲ. ಆ ಕಾರಣಕ್ಕೆ ಆ ಸಂದೇಶ ಸಾರ್ವಜನಿಕವಾಗಿ ವೈರಲ್ ಆಗಿತ್ತು.
ಸಾರಾ ಸಂದೇಶಕ್ಕೆ ಪ್ರತಿಕ್ರಿಯಿಸಿ ಸಂಭಾಷಣೆಯನ್ನು ಮುಂದುವರೆಸಿದ್ದರು. 90 ನಿಮಿಷಗಳಲ್ಲಿ, ಸಾರಾ ಅವರು ಸುಮಾರು 12 ಬಾರಿ ಟ್ವೀಟ್ ಮಾಡಿದ್ದರು. ಪ್ರತಿ ಪೋಸ್ಟ್‌ನಲ್ಲಿ ಜಡೇಜಾ ಅವರನ್ನು ಟ್ಯಾಗ್ ಮಾಡಿದ್ದರು. ಆ ಕಾರಣಕ್ಕಾಗಿ ಇಬ್ಬರ ನಡುವಿನ ಪೋಸ್ಟ್ ವ್ಯಾಪಕವಾಗಿ ವೈರಲ್ ಆಗಿತ್ತು. ಹಲವಾರು ಸಂದೇಶಗಳಲ್ಲಿ, ನಿರ್ದಿಷ್ಟವಾಗಿ ಒಂದು ಮೆಸೇಜ್ ತೀವ್ರ ಕುತೂಹಲವಾಗಿತ್ತು. ಅದೇನು ಅಂದ್ರೆ, “ನಾಳೆ ರಾತ್ರಿ. ನೀವು?” ಎಂಬುದು. ಅದಕ್ಕೆ ಉತ್ತರಿಸಿದ ಸಾರಾ “10 am ಪೂಲ್?” ಎಂದು ಉಲ್ಲೇಖಿಸಿದ್ದರು. ಸದ್ಯ, ಈ ಮೆಸೇಜ್ ವ್ಯಾಪಕವಾಗಿ ವೈರಲ್ ಆಗಿತ್ತು.
ಸದ್ಯ, ಈ ಹಳೆಯ ಟ್ವೀಟ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಭಿಮಾನಿಗಳಲ್ಲಿ ಊಹಾಪೋಹ ಮತ್ತು ಕುತೂಹಲವನ್ನು ಹುಟ್ಟುಹಾಕಿದೆ. ಇಬ್ಬರ ನಡುವಿನ ಸಂಭಾಷಣೆ ಸ್ಪಷ್ಟವಾಗಿಲ್ಲದಿದ್ದರೂ ಅದು ದೀರ್ಘಕಾಲದವರೆಗೆ ಸಾರ್ವಜನಿಕವಾಗಿ ಚರ್ಚೆಯ ವಿಷಯವಾಗಿ ಉಳಿದಿದೆ. ಇದು ಜಡೇಜಾ ಅವರ ಕುರಿತು ಮೈದಾನದ ಹೊರಗೆ ಹೆಚ್ಚು ಚರ್ಚಿಸಲ್ಪಟ್ಟ ಕ್ಷಣಗಳಲ್ಲಿ ಒಂದಾಗಿದೆ.
July 20, 2025 8:16 PM IST