Last Updated:
ಬೃಹತ್ ಟಾರ್ಗೆಟ್ ಇದ್ರೂ ಕೂಡ ತಂಡ ಒಂದು ಹಂತದಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿತ್ತು. ಆದ್ರೆ, ಸಿಎಸ್‌ಕೆಯ ಮಾಜಿ ಆಟಗಾರ ಹಾಗೂ ಆರ್‌ಸಿಬಿಗೆ ಮೊದಲ ಪಂದ್ಯ ಆಡಿದ ಆ ಒಬ್ಬ ಬೌಲರ್ ಗೆಲುವಿಗೆ ಕಾರಣರಾದರು.
ಬೆಂಗಳೂರು: ವಿರಾಟ್ ಕೊಹ್ಲಿ (Virat Kohli) , ಜಾಕೋಬ್ ಬೆಥೆಲ್ (Bethel) ಹಾಗೂ ರೊಮಾರಿಯೋ ಶೆಫರ್ಡ್ (Shephard) ಸಿಡಿಸಿದ ಅರ್ಧಶತಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 213 ರನ್‌ಗಳ ಬೃಹತ್ ಕಾರಣ ರನ್ ಗಳಿಸಿತು. ಆದ್ರೆ, ಬೃಹತ್ ಟಾರ್ಗೆಟ್ ಇದ್ರೂ ಕೂಡ ತಂಡ ಒಂದು ಹಂತದಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿತ್ತು. ಆದ್ರೆ, ಸಿಎಸ್‌ಕೆಯ ಮಾಜಿ ಆಟಗಾರ ಹಾಗೂ ಆರ್‌ಸಿಬಿಗೆ ಮೊದಲ ಪಂದ್ಯ ಆಡಿದ ಆ ಒಬ್ಬ ಬೌಲರ್ ಗೆಲುವಿಗೆ ಕಾರಣರಾದರು.
ಆರ್‌ಸಿಬಿ ಗೆಲುವಿನ ಹೀರೋ ಆದ್ರು ಲುಂಗಿ ಎನ್‌ಗಿಡಿ
ಹೌದು, ಇಂದು ಆರ್‌ಸಿಬಿ ಪರ ಮೊದಲ ಪಂದ್ಯ ಆಡಿದ ಸೌತ್ ಆಫ್ರಿಕಾ ವೇಗಿ ಲುಂಗಿ ಎನ್ ಗಿಡಿ, ಆರ್‌ಸಿಬಿ ಪರ 17ನೇ ಹಾಗೂ ತಮ್ಮ ಕೋಟಾದ ಕೊನೆಯ ಓವರ್ ಎಸೆಯಲು ಬಂದ ಅವರು, ಸಿಎಸ್‌ಕೆ ಗೆಲುವಿಗೆ 24 ಎಸೆತದಲ್ಲಿ ಕೇವಲ 42 ರನ್ ಅಗತ್ಯವಿತ್ತು. ಈ ಹಂತದಲ್ಲಿ ಅಮೋಘ ಬೌಲಿಂಗ್ ಮಾಡಿದ ಲುಂಗಿ ಎನ್‌ಗಿಡಿ ಕೇವಲ 8 ರನ್ ನೀಡಿ ಪ್ರಮುಖ 2 ವಿಕೆಟ್ ಪಡೆದು ಮಿಂಚಿದರು. ಆ ಮೂಲಕ ತಂಡದ ಗೆಲುವಿಗೆ ಕಾರಣರಾದರು.
ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಸೌತ್ ಇಂಡಿಯನ್ ಡರ್ಬಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬದ್ದ ಎದುರಾಳಿ ಸಿಎಸ್‌ಕೆ ವಿರುದ್ಧ 2 ರನ್‌ಗಳ ರೋಚಕ ಜಯ ಸಾಧಿಸಿದೆ. 214 ರನ್‌ಗಳ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 211 ರನ್ಗಳಿಸಷ್ಟೇ ಶಕ್ತವಾಗಿ 2 ರನ್‌ಗಳ ಸೋಲೊಪ್ಪಿಕೊಂಡಿತು.
May 03, 2025 11:38 PM IST