RCB Vs PBKS: ಇಂದು RCB ಗೆಲುವು ಫಿಕ್ಸ್​​! ಬಲಭಾಗದಲ್ಲಿ ಹೂ ಪ್ರಸಾದ ನೀಡಿ ಅಭಯ ಕೊಟ್ಟ ದೇವಾನುದೇವತೆಗಳು! / RCB vs PBKS: Divine Blessings and Fan Rituals Fuel Belief in RCB’s Victory Today!

RCB Vs PBKS: ಇಂದು RCB ಗೆಲುವು ಫಿಕ್ಸ್​​! ಬಲಭಾಗದಲ್ಲಿ ಹೂ ಪ್ರಸಾದ ನೀಡಿ ಅಭಯ ಕೊಟ್ಟ ದೇವಾನುದೇವತೆಗಳು! / RCB vs PBKS: Divine Blessings and Fan Rituals Fuel Belief in RCB’s Victory Today!

ಆರ್​​ಸಿಬಿ ಮತ್ತು ಪಂಜಾಬ್​ ಕಿಂಗ್ಸ್​​ ನಡುವಿನ ಪಂದ್ಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಕೋಹ್ಲಿ ಪಡೆ ಕಪ್​ ಹಿಡಿದು ತೋರಿಸಬೇಕು ಎಂದು ಬಯಸುತ್ತಿದ್ದಾರೆ. ಮತ್ತು ವಿಶೇಷ ಅಂದರೆ ಈ ಸಲ ಕಪ್​ ನಮ್ದೇ, ಆರ್​ ಸಿಬಿ ಗೆಲುವು ಫಿಕ್ಸ್​​ ಎಂದು ಕೇವಲ ಅಭಿಮಾನಿಗಳಷ್ಟೇ ಅಲ್ಲದೇ ದೇವಾನುದೇವತೆಗಳು ಕೂಡ ಆರ್​​ಸಿಬಿ ಗೆಲುವಿನ ಬಗ್ಗೆ ಸೂಚನೆ ನೀಡಿದೆ.

18 ವರ್ಷಗಳ ಅಜ್ಞಾತವಾಸಕ್ಕೆ ಬೀಳಲಿದ್ಯಾ ಬ್ರೇಕ್?

ಇಂದು ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಮತ್ತು ಪಂಜಾಬ್​ ಕಿಂಗ್ಸ್​​ ನಡುವಿನ ಪಂದ್ಯದಲ್ಲಿ ಈ ಸಲ ಆರ್​ಸಿಬಿ ಗೆಲುವು ಫಿಕ್ಸ್​​ ಎಂದು ದೇವಾನುದೇವತೆಗಳು ಕೂಡ ಬಲಭಾಗದಲ್ಲಿ ಹೂ ಪ್ರಸಾದ ನೀಡಿ ಸೂಚನೆ ನೀಡಿದೆ. ಈ ಬಾರಿ ಆರ್​​ಸಿಬಿ ಗೆದ್ದೇ ಗೆಲ್ಲುತ್ತೆ. ಅಭಿಮಾನಿಗಳು ಹದಿನ್ನೆಂಟು ವರ್ಷದ ಕನಸು ನನಸಾಗಲಿದೆ ಎಂದು ದೇವರು ಆಶೀರ್ವಾದ ಮಾಡಿದೆ. ಬೆಳಗ್ಗೆಯಿಂದ ರಾಜ್ಯಾದ್ಯಂತ ಆರ್​​ಸಿಬಿ ಅಭಿಮಾನಿಗಳು ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದು, ಈ ವೇಳೆ ದೇವರು ಬಲಭಾಗದಲ್ಲಿ ಹೂ ಪ್ರಸಾದ ನೀಡಿ ಗೆಲುವಿನ ಭರವಸೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಆರ್​ಸಿಬಿ ಗೆಲುವಿನ ಬಗ್ಗೆ ಕೊಲ್ಲಾಪುರದಮ್ಮ ಬಲಗಡೆ ಹೂ ಪ್ರಸಾದ ನೀಡಿ ಅಭಯ!

ಇಂದು ಆರ್​​ಸಿಬಿ ಗೆಲುವು ಫಿಕ್ಸ್​​ ಎಂದು ಕೊಲ್ಲಾಪುರದಮ್ಮ ಬಲಗಡೆ ಹೂ ಪ್ರಸಾದ ನೀಡಿ ಸೂಚನೆ ಕೊಟ್ಟಿದ್ದಾರೆ. ಇಂದು ಆರ್​​ಸಿಬಿ ಮತ್ತು ಪಂಜಾಬ್​ ಕಿಂಗ್ಸ್​​ ನಡುವೆ ಪಂದ್ಯ ನಡೆಯುತ್ತಿದ್ದು, ಆರ್​​ಸಿಬಿ ಜಯಭೇರಿ ಬಾರಿಸಲಿ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕೊಲ್ಲಾಪುರದಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ತಾಯಿ ಬಲಭಾಗದಿಂದ ಹೂ ಪ್ರಸಾದ ನೀಡಿ ಗೆಲುವಿನ ಅಭಯ ನೀಡಿದ್ದಾಳೆ.

ಹೌದು, ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣದ ಕೊಲ್ಲಾಪುರದಮ್ಮ ಆರ್​ಸಿಬಿ ಗೆಲುವು ನಿಶ್ಚಿತ ಎಂದು ಬಲಗಡೆ ಹೂ ಪ್ರಸಾದ ನೀಡಿ ಅಭಯ ನೀಡಿದ್ದಾಳೆ. ಚನ್ನಪಟ್ಟಣದ ಪ್ರಸಿದ್ಧ ದೇವತೆ ಎಂದು ಎನಿಸುಕೊಂಡಿರುವ ತಾಯಿ ಕೊಲ್ಲಾಪುರದಮ್ಮ ದೇವಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ RCB ಮ್ಯಾಚ್ ಗೆಲ್ಲಲಿ ಎಂದು ಪೂಜೆ ಸಲ್ಲಿಸುತ್ತಿದ್ದ ವೇಳೆ ಬಲಗಡೆ ಹೂ ನೀಡಿ ತಾಯಿ ಗೆಲುವಿನ ಸೂಚನೆ ನೀಡಿದ್ದಾರೆ. ಇತ್ತ ತಾಯಿ ಗೆಲವಿನ ಸೂಚನೆ ಕೊಡ್ತಿದ್ದಂತೆ RCB ಫ್ಯಾನ್ಸ್ ಸಿಹಿ ಹಂಚಿ ಸಂಭ್ರಮಿಸಿದರು.

ಆರ್​​ಸಿಬಿ ಗೆಲುವಿನ ಬಗ್ಗೆ ಸೂಚನೆ ಕೊಟ್ಟ ಹರಳುಕೋಟೆ ಜನರ್ಧಾನಸ್ವಾಮಿ !

ಇತ್ತ ಚಾಮರಾಜನಗರದಲ್ಲೂ ಶ್ರೀ ಜನಾರ್ಧನ ಸ್ವಾಮಿ ದೇವರು ಆರ್​​ಸಿಬಿ ಗೆಲುವಿನ ಬಗ್ಗೆ ಸೂಚನೆ ನೀಡಿದೆ. ಚಾಮರಾಜನಗರದ ಪುರಾಣಪ್ರಸಿದ್ದ ಹರಳುಕೋಟೆ ಜನರ್ಧಾನಸ್ವಾಮಿ ದೇವಾಲಯದಲ್ಲಿ ದೇವರು ಬಲಭಾಗದಿಂದ ಹೂವಿನ ಪ್ರಸಾದ ನೀಡಿ ಆರ್​​ಸಿಬಿ ಗೆಲವಿನ ಬಗ್ಗೆ ಅಭಯ ನೀಡಿದೆ.

ಚಾಮರಾಜನಗರದ ಪುರಾಣಪ್ರಸಿದ್ದ ಹರಳುಕೋಟೆ ಜನರ್ಧಾನಸ್ವಾಮಿ ದೇವಾಲಯದಲ್ಲಿ ಆರ್‌ಸಿ‌ಬಿ ಗೆಲುವಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಯ್ತು. ಆರ್‌‌ಸಿಬಿ ಆಟಗಾರರ ಹೆಸರಿನಲ್ಲಿ ವಿಶೇಷ ಅರ್ಚನೆ, ಸಂಕಲ್ಪ ಮಾಡಲಾಯ್ತು. ಈ ವೇಳೆ ಹೂ ಪ್ರಸಾದ ನೀಡಿ ಗೆಲುವಿನ ಬಗ್ಗೆ ಅಭಯ ನೀಡಿದೆ. ಈ ಹಿಂದೆ ಕೂಡ ಭಾರತ ತಂಡದ ಗೆಲುವಿಗೆ ಜನಾರ್ಧನ ಸ್ವಾಮಿ‌ ಹೂವಿನ ಪ್ರಸಾದ ನೀಡಿತ್ತು. ಆಗ ಭಾರತ ಐಸಿಸಿ ಚಾಂಪಿಯನ್ ಟ್ರೋಪಿ ಗೆದ್ದಿತ್ತು. ಇದೀಗ RCB ಗೆಲುವಿಗಾಗಿ ಅರ್ಚಕ ಅನಂತ ಪ್ರಸಾದ್ ವಿಶೇಷ ಪೂಜೆ ನೆರವೇರಿಸಿದ್ದಾರೆ.

ಈ ಬಾರಿ RCB ಕಪ್ ಗೆಲ್ಲೋದು 200 ಪರ್ಸೆಂಟ್ ಫಿಕ್ಸ್​​?

ಈ ಬಾರಿ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡ ನೋಡುತ್ತಿದ್ದರೆ ಮತ್ತು ಆಟವನ್ನು ನೋಡುತ್ತಿದ್ದರೆ ಈ ಬಾರಿ RCB ಕಪ್ ಗೆಲ್ಲೋದು 200 ಪರ್ಸೆಂಟ್ ಫಿಕ್ಸ್​​ ಎನ್ನಲಾಗುತ್ತಿದೆ. ಇದರ ಜೊತೆಗೆ ಲಕ್ಷಾಂತರ ಅಭಿಮಾನಿಗಳು ಬೇಡಿಕೆಯ ಫಲ ಮತ್ತು ದೇವಾನುದೇವತೆಗಳ ಆಶೀರ್ವಾದದಿಂದ ಈ ಸಲ ಕಪ್​ ನಮ್ದೇ ಆಗಲಿ ಅನ್ನೋದೇ ನಮ್ಮ ಬಯಕೆ. ಜೈ ಆರ್​​ಸಿಬಿ..