Last Updated:
ಹಿರಿಯ ಕ್ರಿಕೆಟಿಗರು ಯಾವ ತಂಡ ಗೆಲ್ಲಲಿದೆ. ಯಾವ ತಂಡ ಗೆಲ್ಲಬೇಕು ಎಂಬುದರ ಕುರಿತು ಹೇಳಿಕೆ ನೀಡುತ್ತಿದ್ದಾರೆ. ಈ ನಡುವೆ ಟೀಂ ಇಂಡಿಯಾದ ಮಾಜಿ ಆರಂಭಿಕ ಬ್ಯಾಟರ್ ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL Final) 18ನೇ ಆವೃತ್ತಿಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಯಾವ ತಂಡ ಗೆಲ್ಲಲಿದೆ. ಯಾವ ತಂಡ ಸೋಲಲಿದೆ ಎಂಬುದರ ಕುರಿತಾದ ಚರ್ಚೆಗಳು ವ್ಯಾಪಕವಾಗಿ ನಡೆಯುತ್ತಿವೆ. ಅನೇಕ ಹಿರಿಯ ಕ್ರಿಕೆಟಿಗರು ಯಾವ ತಂಡ ಗೆಲ್ಲಲಿದೆ. ಯಾವ ತಂಡ ಗೆಲ್ಲಬೇಕು ಎಂಬುದರ ಕುರಿತು ಹೇಳಿಕೆ ನೀಡುತ್ತಿದ್ದಾರೆ. ಈ ನಡುವೆ ಟೀಂ ಇಂಡಿಯಾದ ಮಾಜಿ ಆರಂಭಿಕ ಬ್ಯಾಟರ್ ವಿರೇಂದ್ರ ಸೆಹ್ವಾಗ್ (Virendra Sehwag) ಯಾವ ತಂಡ ಗೆಲ್ಲಲಿದೆ ಎಂಬುದನ್ನು ತಿಳಿಸಿದ್ದಾರೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಆರ್‌ಸಿಬಿ 4ನೇ ಬಾರಿಗೆ ಫೈನಲ್ ಆಡುತ್ತಿದ್ದರೆ, ಪಂಜಾಬ್ ಎರಡನೇ ಬಾರಿಗೆ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದೆ. ಈ ಕುರಿತು ಆರ್‌ಸಿಬಿಗೆ ತನ್ನ ಸಪೋರ್ಟ್ ಇರಲಿದೆ ಎಂಬುದನ್ನು ಒಂದು ರೀತಿಯ ವ್ಯಂಗ್ಯವಾಗಿ ಹೇಳಿಕೆ ನೀಡಿದ್ದಾರೆ.
“ಆರ್‌ಸಿಬಿ ಗೆಲ್ಲುತ್ತದೆ ಎಂದು ನಾನು ಭಾವಿಸುತ್ತೇನೆ. ನಾನು ನನ್ನ ಹಳೆಯ ಫಾರ್ಮ್‌ಗೆ ಮರಳುತ್ತಿದ್ದೇನೆ. ಏಕೆಂದರೆ ನಾನು ಯಾವುದೇ ತಂಡವನ್ನು ಬೆಂಬಲಿಸಿದರೂ ಅವರು ಸೋಲುವುದನ್ನು ನಾನು ನೋಡಿದ್ದೇನೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಆಗಿರಲಿ ಅಥವಾ ಆರ್‌ಸಿಬಿ ವಿರುದ್ಧದ ಕ್ವಾಲಿಫೈಯರ್ -1 ರಲ್ಲಿ ಪಂಜಾಬ್ ಆಗಿರಲಿ. ಕ್ವಾಲಿಫೈಯರ್ -2 ರಲ್ಲಿ ಪಂಜಾಬ್ ವಿರುದ್ಧ ಮುಂಬೈ ಅನ್ನು ನಾನು ಬೆಂಬಲಿಸಿದ್ದೆ ಆದರೆ ಮುಂಬೈ ತಂಡ ಸೋತಿದೆ” ಎಂದು ಕ್ರಿಕ್‌ಬಜ್‌ನ ಕಾರ್ಯಕ್ರಮದಲ್ಲಿ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ. ಹೀಗೆ ಆರ್‌ಸಿಬಿ ಗೆಲ್ಲುತ್ತೆ ಎಂದು ಹೇಳುತ್ತಲೇ ತಮ್ಮ ಮಾಜಿ ತಂಡ ಪಂಜಾಬ್‌ಗೆ ಸಪೋರ್ಟ್ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಕಾರ್ಯಕ್ರಮದ ನಿರೂಪಕ ಗೌರವ್ ಕಪೂರ್ ಸೆಹ್ವಾಗ್ ಅವರನ್ನು ಕೇಳುತ್ತಾರೆ. “ಯಾರು ಈ ಬಾರಿ ಕಪ್ ಗೆಲ್ಲುತ್ತಾರೆ ಎಂದು ನೀವು ಭಾವಿಸುತ್ತೀರಿ, ಈಗ ನಾನು ನಿಮ್ಮನ್ನು ಕೇಳುತ್ತಿದ್ದೇನೆ, ನೀವು ಯಾರನ್ನು ಬೆಂಬಲಿಸುತ್ತಿದ್ದೀರಿ ಎಂದು,” ಸೆಹ್ವಾಗ್ ಹೇಳಿದರು, “ಆರ್‌ಸಿಬಿ.” ಆರ್‌ಸಿಬಿ ಮತ್ತು ಪಿಬಿಕೆಎಸ್ ಎರಡೂ ಬಹಳ ದಿನಗಳಿಂದ ಟ್ರೋಫಿ ಗೆಲ್ಲಲು ಬಯಸುತ್ತಿವೆ ಎಂದರು. ವಿರಾಟ್ ಕೊಹ್ಲಿ ಅವರ ಉಪಸ್ಥಿತಿಯಲ್ಲಿ, ಆರ್‌ಸಿಬಿ ಕಳೆದ ಮೂರು ಫೈನಲ್‌ಗಳಲ್ಲಿ ಸೋತ ನಂತರ ಮತ್ತೆ ಪುಟಿದೇಳಲು ಪ್ರಯತ್ನಿಸುತ್ತಿದೆ. ಈ ನಡುವೆ ಪಿಬಿಕೆಎಸ್ ಅನ್ನು ಶ್ರೇಯಸ್ ಅಯ್ಯರ್ ಮುನ್ನಡೆಸುತ್ತಿದ್ದು ಅವರ ಫಾರ್ಮ್ ಮತ್ತು ತಂತ್ರಗಾರಿಕೆ ಈ ಸೀಸನ್‌ನಲ್ಲಿ ಎಲ್ಲರ ಗಮನ ಸೆಳೆದಿದೆ.
June 03, 2025 7:07 PM IST