Last Updated:
ಆರ್‌ಸಿಬಿ ಫ್ಯಾನ್ಸ್ ಕೇವಲ ಬೆಂಗಳೂರಲ್ಲಷ್ಟೇ ಅಲ್ಲ ಇಡೀ ವಿಶ್ವದಾದ್ಯಂತ ಇದ್ದಾರೆ ಅನ್ನೋದಕ್ಕೆ ಈ ದೃಶ್ಯಗಳೇ ಸಾಕ್ಷಿ. ನಿನ್ನೆ ಐಪಿಎಲ್ ಫೈನಲ್ನಲ್ಲಿ 2025 ಆರ್‌ಸಿಬಿ ಗೆಲುವಿನ ನಾಗಾಲೋಟ ಎತ್ತಹಿಡಿದಿದ್ದು, ಇಡೀ ಭಾರತದಾದ್ಯಂತ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಹೈಡ್ರಾಬಾದ್, ಲಕ್ನೋದಲ್ಲೂ ಮಿನಿ ದೀಪಾವಳಿಯೇ ನಡೆದಿದೆ.
ಐಪಿಎಲ್ ಫೈನಲ್ (IPL Finals) ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal challengers Bangalore) ತಂಡ ಗೆದ್ದು ಬೀಗಿದೆ. ನಿನ್ನೆ ಇಡೀ ಭಾರತದಾದ್ಯಂತ ಸಂಭ್ರಮಾಚರಣೆ (Celebration) ಜೋರಾಗಿತ್ತು. ಆರ್‌ಸಿಬಿ ಫ್ಯಾನ್ಸ್ (RCB Fans) ಕೇವಲ ಬೆಂಗಳೂರಲ್ಲಷ್ಟೇ ಅಲ್ಲದೇ ಇಡೀ ಭಾರತದಾದ್ಯಂತ (India) ಇದ್ದಾರೆ ಎಂಬುದಕ್ಕೆ ಕೆಲುವೊಂದು ದೃಶ್ಯಗಳು ಸಾಕ್ಷಿಯಾಗಿದೆ. ಬೆಂಗಳೂರಲ್ಲಿ ನಿನ್ನೆ ರಾತ್ರಿ ದೀಪಾವಳಿ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು, ಇದೇ ರೀತಿ ಹೈದ್ರಾಬಾದ್ (Hyderabad Craze) ಮತ್ತು ಲಕ್ನೊದಲ್ಲೂ (Lucknow celebration) ಸೆಲೆಬ್ರೇಷನ್ ಜೋರಾಗಿತ್ತು.
ಅತ್ತ ಅಹಮದಾಬಾದ್ ಸ್ಟೇಡಿಯಂನಲ್ಲಿ ಆರ್‌ಸಿಬಿ ತಂಡ ಕಪ್ ಹಿಡಿದು ಗೆಲುವನ್ನು ಸಂಭ್ರಮಿಸುತ್ತಿದ್ದರೆ ಇತ್ತ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಇದು ಕೇವಲ ಕರ್ನಾಟಕ ಮತ್ತು ಬೆಂಗಳೂರಷ್ಟೇ ಅಲ್ಲ, ಇಡೀ ಭಾರತದಾದ್ಯಂತ ಸಂಭ್ರಮಾಚರಣೆ ನಡೀತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅಭಿಮಾನಿಗಳ ದಶಕಗಳ ಕನಸು ಕೊನೆಗೂ ನನಸಾಗಿದೆ. ಈ ಸಲ ಕಪ್ ನಮ್ದೇ ಅನ್ನೋ ಘೋಷಣೆ ಕಡೆಗೂ ಸತ್ಯವಾಗಿದೆ. ಈ ಬಾರಿ ಆರ್‌ಸಿಬಿ ಐಪಿಎಲ್ ಟ್ರೋಫಿ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ. ಅಭಿಮಾನಿಗಳಿಗೆ ರಸದೌತಣ ನೀಡಿದೆ.
ಆರ್‌ಸಿಬಿ ಗೆಲುವನ್ನು ಸಂಭ್ರಮಿಸಿದ ಫ್ಯಾನ್ಸ್!
ಆರ್‌ಸಿಬಿ ನಿನ್ನೆ ಗೆಲುವಿನ ನಾಗಾಲೋಟ ಎತ್ತಿಹಿಡಿದಿದೆ. ಇಡೀ ಭಾರತದಲ್ಲಿ ನಿನ್ನೆ ಫ್ಯಾನ್ಸ್ ಕ್ರೇಜ್ ಜೋರಾಗಿತ್ತು. ಇಡಿ ರಾತ್ರಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಕೆಲವು ಕಡೆ ರ್ಯಾಲಿಗಳನ್ನು ಮಾಡಿ ಗೆಲುವನ್ನು ಸಂಭ್ರಮಿಸಿದ್ದಾರೆ. ಇನ್ನೂ ಕೆಲವು ಕಡೆಗಳಲ್ಲಿ ಫ್ಯಾನ್ಸ್ ಕುಣಿದು ಕುಪ್ಪಳಿಸಿದ್ದಾರೆ.
ಹೈದ್ರಾಬಾದ್ನಲ್ಲಿ ಆರ್‌ಸಿಬಿ ಫ್ಯಾನ್ಸ್ ಕ್ರೇಜ್!
ಹೈದ್ರಾಬಾದ್ನಲ್ಲಿ ನಿನ್ನೆ ರಾತ್ರಿ ದೀಪಾವಳಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಆರ್‌ಸಿಬಿ ಕಪ್ ಗೆದ್ದಿದೆ ತಡ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಆರ್‌ಸಿಬಿ ಆರ್‌ಸಿಬಿ ಜೈಘೋಶಗಳು ಮೊಳಗಿದವು. ಕೋಹ್ಲಿ ಪಡೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.
ಲಕ್ನೋದಲ್ಲಿ ಆರ್‌ಸಿಬಿ ಅಭಿಮಾನಿಗಳ ಹರ್ಷೋದ್ಘಾರ!
ಇತ್ತ ಲಕ್ನೋದಲ್ಲೂ ಆರ್‌ಸಿಬಿ ಅಭಿಮಾನಿಗಳ ಕ್ರೇಜ್ ಜೋರಾಗಿತ್ತು. ಪಂಜಾಬ್ ಕಿಂಗ್ಸ್ ವಿರುದ್ಧ ಆರ್ಸಸಿಬಿ ಗೆದ್ದು ಬೀಗಿದ್ದಕ್ಕೆ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿದೆ. ಕೋಟ್ಯಾಂತರ ಅಭಿಮಾನಿಗಳ ಕನಸು ನನಸಾಗಿದೆ. 18 ವರ್ಷಗಳ ತಪ್ಪಸ್ಸಿಗೆ ಕೊನೆಗೂ ಫಲ ಸಿಕ್ಕಿದೆ. ಆರ್‌ಸಿಬಿ ಪಂಜಾಬ್ ಕಿಂಗ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದೆ. ಈ ಸಲ ಕಪ್ ನಮ್ದೇ ಎಂದು ಕಪ್ ಎತ್ತು ಕೋಹ್ಲಿ ಪಡೆ ಮುತ್ತಿಕ್ಕಿದೆ. ಇತ್ತ ಅಭಿಮಾನಿಗಳ ಹರ್ಷೋದ್ಘಾರ ಕೂಡ ಮುಗಿಲು ಮುಟ್ಟಿತ್ತು.
ಇನ್ನೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಾಯ್ಸ್ ಇಂದು ತವರು ಮನೆಯಾದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಕಪ್ ಗೆದ್ದು ಬೆಂಗಳೂರಿಗೆ ಮತ್ತು ಕರುನಾಡಿಗೆ ಕಪ್ ಅರ್ಪಿಸಲು ಎಂಟ್ರಿ ಕೊಡ್ತಿದ್ದು, ಇದೀಗ ಆರ್‌ಸಿಬಿ ರಣಬೇಟೆಗಾರರನ್ನು ವೆಲ್ಕಮ್ ಮಾಡಿಕೊಳ್ಳಲು ಫ್ಯಾನ್ಸ್ ಸಜ್ಜಾಗಿದ್ದಾರೆ. ಜೊತೆಗೆ ಆರ್‌ಸಿಬಿ ಬಾಯ್ಸ್ ಇಂದು ಬೆಂಗಳೂರಿನಲ್ಲಿ ವಿಜಯಯಾತ್ರೆ ಮಾಡಲಿದ್ದಾರೆ.
June 04, 2025 9:50 AM IST
RCB Winning Celebration: ಬೆಂಗಳೂರಲ್ಲಷ್ಟೇ ಅಲ್ಲ ಆರ್‌ಸಿಬಿ ಗೆಲುವಿನ ಜೋಶ್; ದೇಶಾದ್ಯಂತ ದೀಪಾವಳಿಯಂತಹ ಸಂಭ್ರಮ, ಹೇಗಿತ್ತು ನೋಡಿ ಫ್ಯಾನ್ಸ್ ಕ್ರೇಜ್!