Retired Out: ತಂಡದ ಎಲ್ಲಾ 10 ಬ್ಯಾಟರ್ಸ್ ರಿಟೈರ್ಡ್ ಔಟ್; ಕ್ರಿಕೆಟ್ ಚರಿತ್ರೆಯಲ್ಲಿ ಇದೇ ಮೊದಲು! ಕಾರಣವೇನು? | Cricket History Made UAE Women s Team Sees All 10 Batters Retire Out in T20 World Cup Qualifier

Retired Out: ತಂಡದ ಎಲ್ಲಾ 10 ಬ್ಯಾಟರ್ಸ್ ರಿಟೈರ್ಡ್ ಔಟ್; ಕ್ರಿಕೆಟ್ ಚರಿತ್ರೆಯಲ್ಲಿ ಇದೇ ಮೊದಲು! ಕಾರಣವೇನು? | Cricket History Made UAE Women s Team Sees All 10 Batters Retire Out in T20 World Cup Qualifier

Last Updated:


ಬ್ಯಾಂಕಾಕ್​​ನಲ್ಲಿ ನಡೆದ ಟಿ20 ವಿಶ್ವಕಪ್ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಯುಎಇ ಮಹಿಳಾ ತಂಡ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿತು. 16 ಓವರ್​ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 192 ರನ್​ಗಳಿಸಿದ ನಂತರ ಎಲ್ಲಾ ಬ್ಯಾಟರ್ಸ್ ರಿಟೈರ್ಡ್ ಔಟ್ ಆದರು.

ಯುಎಇ ಮಹಿಳಾ ಕ್ರಿಕೆಟ್ ತಂಡಯುಎಇ ಮಹಿಳಾ ಕ್ರಿಕೆಟ್ ತಂಡ
ಯುಎಇ ಮಹಿಳಾ ಕ್ರಿಕೆಟ್ ತಂಡ

ಕ್ರಿಕೆಟ್ ಪಂದ್ಯದಲ್ಲಿ (Cricket) ಒಬ್ಬ ಅಥವಾ ಇಬ್ಬರು ರಿಟೈರ್ಡ್ ಔಟ್ (Retire Out) ಆಗುವುದನ್ನ ನಾವು ಕೇಳಿರುತ್ತೇವೆ. ಕೆಲವು ಅಭ್ಯಾಸ ಪಂದ್ಯಗಳಲ್ಲಿ ಅಥವಾ ಟೆಸ್ಟ್ ಕ್ರಿಕೆಟ್​ನಲ್ಲಿ ಮೂರು ನಾಲ್ಕು ಆಟಗಾರರು ರಿಟೈರ್ಡ್ ಔಟ್ ಆಗಿರುವುದನ್ನ ನೋಡಿರುತ್ತೇವೆ. ಆದರೆ ಯುಎಇ (UAE) ತಂಡದ 10 ಬ್ಯಾಟರ್​ಗಳು ರಿಟೈರ್ಡ್ ಔಟ್ ತೆಗೆದುಕೊಂಡ ಅಚ್ಚರಿಯ ಬೆಳವಣಿಗೆ ಶನಿವಾರ ನಡೆದಿದೆ. ಟಿ20 ವಿಶ್ವಕಪ್ ಏಷ್ಯನ್ ಕ್ವಾಲಿಫೈಯರ್​​ ಪಂದ್ಯದ ವೇಳೆ ಕತಾರ್​ ವಿರುದ್ಧದ ಪಂದ್ಯದ ವೇಳೆ ಎಲ್ಲಾ ಆಟಗಾರರು ರಿಟೈರ್ಡ್ ಔಟ್ ಆಗಿ ಕ್ರಿಕೆಟ್ ಜಗತ್ತನ್ನ ಅಚ್ಚರಿಗೊಳಿಸಿದರು.

ಬ್ಯಾಂಕಾಕ್​​ನಲ್ಲಿ ನಡೆದ ಟಿ20 ವಿಶ್ವಕಪ್ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಯುಎಇ ಮಹಿಳಾ ತಂಡ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿತು. 16 ಓವರ್​ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 192 ರನ್​ಗಳಿಸಿತು. ಓಪನರ್ ಇಶಾ ರೋಹಿತ್ ಓಜಾ 55 ಎಸೆತಗಳಲ್ಲಿ 14 ಬೌಂಡರಿ, 5 ಸಿಕ್ಸರ್​ಗಳ ಸಹಿತ 113 ರನ್​ಗಳಿಸಿದರೆ, ಮತ್ತೊಬ್ಬ ಆಟಗಾರ್ತಿ ತೀರ್ಥ ಸತೀಶ್ 42 ಎಸೆತಗಳಲ್ಲಿ 11 ಬೌಂಡರಿಗಳ ಸಹಿತ 74 ರನ್​ಗಳಿಸಿದರು.

ಡಿಕ್ಲೇರ್​ಗೆ ಅವಕಾಶವಿಲ್ಲದ ಕಾರಣ ಈ ನಿರ್ಧಾರ

ಯುಎಇ ತಂಡ ಡಿಕ್ಲೇರ್ ಘೋಷಿಸಲು ಪ್ರಮುಖ ಕಾರಣವೆಂದರೆ ಮಳೆ ಬರುವ ಸಾಧ್ಯತೆ ಇದ್ದಿದ್ದು. ಮಳೆ ಬಂದರೆ ಇಡೀ ಪಂದ್ಯ ರದ್ಧಾಗುತ್ತದೆ. ರದ್ದಾದರೆ ಸುಲಭವಾಗಿ ಗೆಲ್ಲುವ ಪಂದ್ಯದಲ್ಲಿ 2 ಅಂಕಗಳ ಬದಲಾಗಿ ಒಂದು ಅಂಕ ಮಾತ್ರ ಸಿಗುತ್ತದೆ. ಹಾಗಾಗಿ ಯುಎಇ ತಂಡದ ಎಲ್ಲಾ 10 ಬ್ಯಾಟರ್​ಗಳು ಪ್ಯಾಡ್ ಕಟ್ಟಿಕೊಂಡು ಬಂದು ರಿಟೈರ್ಡ್ ಔಟ್ ಆದರು. ಇದು ಕ್ರಿಕೆಟ್ ಜಗತ್ತಿನಲ್ಲೇ ಇದೇ ಮೊದಲ ನಿದರ್ಶನವಾಗಿದೆ. ಯಾವುದೇ ಅಂತಾರಾಷ್ಟ್ರೀಯ ಹಾಗೂ ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ಈ ರೀತಿಯ 10 ಬ್ಯಾಟರ್​ಗಳು ರಿಟೈರ್ಡ್ ಔಟ್ ಆದ ಘಟನೆ ಇಲ್ಲ.

ಡಿಕ್ಲೇರ್ ಘೋಷಿಸಲು ಅನುಮತಿ ಇಲ್ಲ

ಡಿಕ್ಲೇರ್ ಘೋಷಿಸಬಹುದಿತ್ತಲ್ಲಾ ಎಂದು ಕೆಲವರಲ್ಲಿ ಪ್ರಶ್ನೆ ಮೂಡಿಸಬಹುದು. ಆದರೆ ಐಸಿಸಿ ನಿಯಮಗಳ ಪ್ರಕಾರಣ ಸೀಮಿತ ಓವರ್​ಗಳ ಪಂದ್ಯಗಳಲ್ಲಿ ಎಲ್ಲಾ ಓವರ್​ಗಳನ್ನು ಸಂಪೂರ್ಣವಾಗಿ ಆಡಲೇಬೇಕು. ಈ ಎರಡು ಮಾದರಿಯಲ್ಲಿ ಡಿಕ್ಲೇರ್​ ಕೊಡಲು ಅವಕಾಶವಿಲ್ಲ.

ಸೀಮಿತ ಓವರ್​ಗಳ ಕ್ರಿಕೆಟ್​​ನಲ್ಲಿ ಡಿಕ್ಲೇರ್ ಕೊಡುವುದಕ್ಕೆ ಅವಕಾಶ ನೀಡಿದರೆ, ಟೂರ್ನಮೆಂಟ್​ಗಳ ಸಂದರ್ಭಗಳಲ್ಲಿ ಕೆಲವು ತಂಡಗಳು ಬೇಕಂತಲೇ ಡಿಕ್ಲೇರ್ ಘೋಷಿಸಿಕೊಂಡು ಸೋಲು ಅನುಭವಿಸುತ್ತವೆ. ರನ್​ ರೇಟ್​ ಕಾಪಾಡಿಕೊಳ್ಳಲು ಈ ರೀತಿಯ ತಂತ್ರಗಾರಿಕೆ ಬಳಸುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಈ ರೀತಿಯ ಸಂದರ್ಭ ಬಂದಿಲ್ಲವಾದರೂ ಕೌಂಟಿ ಕ್ರಿಕೆಟ್​​ ಟೂರ್ನಿಯಲ್ಲಿ ಸಮರ್ಸೆಟ್ ತಂಡವೂ ಒಂದೇ ಓವರ್​ಗೆ ಡಿಕ್ಲೇರ್ ಘೋಷಿಸಿಕೊಂಡಿತ್ತು. ಆ ಪಂದ್ಯದಲ್ಲಿ ವೊರ್ಸೆಸ್ಟರ್‌ಶೈರ್ ಗೆದ್ದರೂ ನೆಟ್​ರನ್​ರೇಟ್​​ನಲ್ಲಿ ಸಮರ್ಸೆಟ್ ಮುಂದಿತ್ತು. ಆದರೆ ಸಮರ್ಸೆಟ್​ನ ಈ ನಿರ್ಧಾರದಿಂದ ಆ ಟೂರ್ನಿಯಿಂದಲೇ ಆ ತಂಡವನ್ನ ಅನರ್ಹಗೊಳಿಸಲಾಗಿತ್ತು. ಈ ಪಂದ್ಯದ ನಂತರ ಸೀಮಿತ ಓವರ್​ಗಳ ಟೂರ್ನಿಯಲ್ಲಿ ಡಿಕ್ಲೇರ್ ಅವಕಾಶವನ್ನ ರದ್ದುಗೊಳಿಸಲಾಯಿತು ಎಂದು ತಿಳಿದುಬಂದಿದೆ.

ಪಂದ್ಯದ ಬಗ್ಗೆ ಮಾಹಿತಿ

ಇನ್ನು ಈ ಪಂದ್ಯದಲ್ಲಿ ಯುಎಇ ನೀಡಿದ 193 ರನ್​ಗಳ ಗುರಿಯನ್ನ ಬೆನ್ನಟ್ಟಿದ ಕತಾರ್ ಮಹಿಳಾ ತಂಡ 11.1 ಓವರ್​ಗಳಲ್ಲಿ ಕೇವಲ 29 ರನ್​ಗಳಿಗೆ ಆಲೌಟ್ ಆಗುವ ಮೂಲಕ 163 ರನ್​ಗಳ ಸೋಲು ಕಂಡಿತು.ಯುಎಇ ಪರ ಮಿಚೆಲ್ ಬೋತಾ 11ಕ್ಕೆ3, ಕೇಟಿ ಥಾಮ್ಸನ್ 6ಕ್ಕೆ2 ವಿಕೆಟ್ ಪಡೆದರೆ ವೈಷ್ಣವಿ ಮಹೇಶ್, ಇಂಧುಜಾ ನಂದಕುಮಾರ್, ಇಶಾ ರೋಹಿತ್ ಹಾಗೂ ಹೀನಾ ತಲಾ 1 ವಿಕೆಟ್ ಪಡೆದು 163 ರನ್​ಗಳ ಗೆಲುವಿಗೆ ಕಾರಣರಾದರು.