Last Updated:
ಕೆಕೆಆರ್-ಡಿಸಿಸಿ ಪಂದ್ಯದಲ್ಲಿ ಕುಲ್ದೀಪ್ ಯಾದವ್ ರಿಂಕು ಸಿಂಗ್ ಗೆ ಕಪಾಳಮೋಕ್ಷ ಮಾಡಿದ್ದು, ಈ ವಿಡಿಯೋ ವೈರಲ್ ಆಗಿದೆ. ಅಭಿಮಾನಿಗಳು ಕುಲ್ದೀಪ್ ಮೇಲೆ ನಿಷೇಧಕ್ಕೆ ಆಗ್ರಹಿಸಿದ್ದಾರೆ.
DC VS RCB: 2025ರ ಆವೃತ್ತಿಯಲ್ಲಿ ಆಟಗಾರರ ನಡುವೆ ಜಗಳ ನಡೆಯುವ ಘಟನೆಗಳು ಹೆಚ್ಚಾಗಿದೆ. ನಗು ನಗುತ್ತಲೋ ಅಥವಾ ಸಿರೀಯಸ್ ಆಗಿ ಮೈದಾನದಲ್ಲೇ ಆಟಗಾರರು ಮಾತಿನ ಯುದ್ಧ, ಜಗಳ ಮಾಡಿಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ಪಂದ್ಯದ ನಡುವೆ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಗಂಭೀರ ಮಾತಿನ ಸಮರ ನಡೆಸಿದ್ದರು. ಇಂತಹದ್ದೆ ಘಟನೆಯೊಂದು ನಿನ್ನೆಯ ಪಂದ್ಯದಲ್ಲಿ ನಡೆದಿದ್ದು, ಕೆಕೆಆರ್ ಸ್ಫೋಟಕ ಆಟಗಾರ ರಿಂಕು ಸಿಂಗ್ ಅವರನ್ನು ಕುಲ್ದೀಪ್ ಯಾದವ್ ಅವರು ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದ್ದು, ಈ ಕುರಿತ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ಹಿಂದೆ ಹರ್ಭಜನ್ ಸಿಂಗ್ ವಸರ್ಸ್ ಶ್ರೀಶಾಂತ್
ಐಪಿಎಲ್ ಇತಿಹಾಸದಲ್ಲಿ ಆಟಗಾರರು ಕಪಾಳಮೋಕ್ಷ ಮಾಡಿಕೊಳ್ಳುವುದು ಇದೇ ಮೊದಲೇನು ಅಲ್ಲ. ಈ ಹಿಂದೆ ಮುಂಬೈ ಇಂಡಿಯನ್ಸ್ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು, ಪಂಜಾಬ್ ಕಿಂಗ್ಸ್ ಮಾಜಿ ಆಟಗಾರ ಎಸ್ ಶ್ರೀಶಾಂತ್ ಅವರಿಗೆ ಮೈದಾನದಲ್ಲೇ ಕಪಾಳಕ್ಕೆ ಬಾರಿಸಿ ಭಾರೀ ಸುದ್ದಿಯಾಗಿದ್ದರು. ಶ್ರೀಶಾಂತ್ ಕಣ್ಣೀರಿಡುತ್ತಾ ಸಾಗುತ್ತಿದ್ದ ದೃಶ್ಯಗಳು ಕ್ರಿಕೆಟ್ ಅಭಿಮಾನಿಗಳಿಗೆ ಬಹುದೊಡ್ಡ ಆಘಾತವನ್ನೇ ನೀಡಿತ್ತು. ಈ ಘಟನೆಯ ವಿರುದ್ಧ ಬಿಸಿಸಿಐ ಕೂಡ ಗಂಭೀರವಾಗಿ ಪರಿಗಣಿಸಿತ್ತು. ಅಲ್ಲದೇ ಹರ್ಭಜನ್ ಸಿಂಗ್ ಅವರಿಗೆ 11 ಪಂದ್ಯಗಳಿಗೆ ನಿಷೇಧವನ್ನು ವಿಧಿಸಿತ್ತು. ಆ ಬಳಿಕ ಹರ್ಭಜನ್ ಸಿಂಗ್ ತಮ್ಮ ತಪ್ಪನ್ನು ಒಪ್ಪಿಕೊಂಡು, ನಾನು ಅಂದು ಶ್ರೀಶಾಂತ್ ಅವರಿಗೆ ಹೊಡೆಯಬಾರದಿತ್ತು ಎಂದು ಪಶ್ಚಾತ್ತಾಪ ವ್ಯಕ್ತಪಡಿಸಿದ್ದರು.
ಕುಲ್ದೀಪ್, ರಿಂಕು ಸಿಂಗ್ಗೆ ಹೊಡೆದಿದ್ದು ಏಕೆ?
ಇತ್ತೀಚೆಗೆ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಸರ್ಸ್ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದಲ್ಲಿ ಕುಲದೀಪ್ ಯಾದವ್ ಮತ್ತು ರಿಂಕು ಸಿಂಗ್ ನಡುವೆ ಅನಿರೀಕ್ಷಿತ ಘಟನೆ ನಡೆದಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಪಿನ್ನರ್ ಕುಲ್ದೀಪ್ ಯಾದವ್ ಕೆಕೆಆರ್ ಆಟಗಾರ ರಿಂಕು ಸಿಂಗ್ ಗೆ ಕಪಾಳಮೋಕ್ಷ ಮಾಡಿದ್ದಾರೆ. ಇದರೊಂದಿಗೆ, ರಿಂಕು ಕ್ಷಣ ಮಾತ್ರ ಶಾಕ್ ಆಗಿ ಬೇಸರಗೊಂಡಿದ್ದಾರೆ.
ರಿಂಕು ಮತ್ತೆ ಏನೋ ಹೇಳಲು ಹೋದಾಗ ಎರಡನೇ ಬಾರಿಯೂ ಕುಲ್ದೀಪ್ ಕೈ ಮಾಡಿಕೊಂಡಿದ್ದರು. ಆದರೆ ಕುಲದೀಪ್ ಯಾದವ್ ಅದನ್ನು ಏಕೆ ಹೊಡೆದರು ಎಂಬುದು ತಿಳಿದಿಲ್ಲ. ಈ ಘಟನೆ ಇಬ್ಬರ ನಡುವೆ ತಮಾಷೆಯಾಗಿ ನಡೆಯಿತೋ ಅಥವಾ ಸೀರಿಯಸ್ ಆಗಿ ಒಡೆದಾಡಿದರೋ ತಿಳಿದು ಬರಬೇಕಿದೆ. ಪಂದ್ಯದ ನಂತರ ಈ ಘಟನೆ ನಡೆದಿರುವಂತೆ ತೋರುತ್ತದೆ. ಈ ಮಧ್ಯೆ, ಕುಲದೀಪ್ ಬೌಲಿಂಗ್‌ನಲ್ಲಿ ರಿಂಕು ಸಿಂಗ್ 22 ರನ್ ಗಳಿಸಿದರು.
Even if this is some sort of a joke, it is not funny. Shows lack of respect a player has for another player.
Kuldeep Yadav Slaps Rinku Singh Twice. pic.twitter.com/4rKie2AjIn— Sanket Upadhyay (@sanket) April 30, 2025
ಕುಲ್ದೀಪ್ ಬ್ಯಾನ್ ಮಾಡುವಂತೆ ಆಗ್ರಹ
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕ್ರಿಕೆಟ್ ಅಭಿಮಾನಿಗಲು ವಿಭಿನ್ನವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರು ಇದನ್ನು ತಮಾಷೆಯ ಘಟನೆ ಎಂದು ಸಮರ್ಥಿಸಿಕೊಂಡರೆ, ಇನ್ನು ಕೆಲವರು ಕುಲದೀಪ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಅವರ ಮೇಲೆ ನಿಷೇಧ ಹೇರಬೇಕೆಂದು ಅವರು ಕೇಳುತ್ತಿದ್ದಾರೆ.
April 30, 2025 10:28 AM IST