Rishabh Pant: ಆರ್​ಸಿಬಿ ವಿರುದ್ಧ ದಾಖಲೆ ಶತಕವನ್ನ ವಿಶಿಷ್ಟ ಶೈಲಿಯಲ್ಲಿ ಸಂಭ್ರಮಿಸಿದ ಪಂತ್! ಯಾರೂ ಈ ರೀತಿ ಟ್ರೈ ಕೂಡ ಮಾಡಲ್ಲ! | Pant Celebrates Century Front Flip Video Goes Viral

Rishabh Pant: ಆರ್​ಸಿಬಿ ವಿರುದ್ಧ ದಾಖಲೆ ಶತಕವನ್ನ ವಿಶಿಷ್ಟ ಶೈಲಿಯಲ್ಲಿ ಸಂಭ್ರಮಿಸಿದ ಪಂತ್! ಯಾರೂ ಈ ರೀತಿ ಟ್ರೈ ಕೂಡ ಮಾಡಲ್ಲ! | Pant Celebrates Century Front Flip Video Goes Viral

Last Updated:

ಲಖನೌ ಪರ ನಾಯಕ ರಿಷಬ್ ಪಂತ್ ಅಮೋಘ ಶತಕದ ನೆರವಿನಿಂದ 227 ರನ್‌ಗಳನ್ನು ಗಳಿಸಲು ನೆರವಾದರು. ಟೂರ್ನಿಯುದ್ಧಕ್ಕೂ ಕಳಪೆ ಪ್ರದರ್ಶನ ನೀಡಿದ್ದ ಪಂತ್ ಇಂದಿನ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿ ಮಿಂಚಿದರು.

ರಿಷಬ್ ಪಂತ್ರಿಷಬ್ ಪಂತ್
ರಿಷಬ್ ಪಂತ್

ಇಂಡಿಯನ್ ಪ್ರೀಮಿಯರ್ ಲೀಗ್‌ನ ಕೊನೆಯ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳು ಲಖನೌನಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಪರ ನಾಯಕ ರಿಷಬ್ ಪಂತ್ ಅಮೋಘ ಶತಕದ ನೆರವಿನಿಂದ 227 ರನ್‌ಗಳನ್ನು ಗಳಿಸಲು ನೆರವಾದರು. ಟೂರ್ನಿಯುದ್ಧಕ್ಕೂ ಕಳಪೆ ಪ್ರದರ್ಶನ ನೀಡಿದ್ದ ಪಂತ್ ಇಂದಿನ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿ ಮಿಂಚಿದರು. ಈ ವೇಳೆ ಅವರ ಸಂಭ್ರಮಾಚರಣೆಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ.

ಕೊನೆಯ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ಪಂತ್

ಮೇ 27, 2025ರಂದು ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಪಂತ್ ಕೇವಲ 54 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಇನ್ನಿಂಗ್ಸ್‌ನಲ್ಲಿ 10 ಫೋರ್‌ಗಳು ಮತ್ತು 8 ಸಿಕ್ಸರ್‌ಗಳನ್ನು ಒಳಗೊಂಡಂತೆ ಅವರ ಬ್ಯಾಟಿಂಗ್ ಆರ್‌ಸಿಬಿ ಬೌಲರ್‌ಗಳ ಮೇಲೆ ಸಂಪೂರ್ಣ ಮೇಲುಗೈ ಸಾಧಿಸಿದರು.

ಈ ಶತಕದ ಮೂಲಕ ಪಂತ್ ಅವರು ಐಪಎಲ್ ಇತಿಹಾಸದಲ್ಲಿ ತಮ್ಮ ಎರಡನೇ ಶತಕ ಸಿಡಿಸಿದರು. 2018ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸಿಡಿಸಿದ 128* ರನ್‌ಗಳಿಸಿದ ಬಳಿಕ ಈ ಶತಕ ಬಂದಿದೆ. ಪಂತ್‌ರ ಈ ಶತಕವು ಐಪಿಎಲ್ 2025ರ ಋತುವಿನಲ್ಲಿ ಅವರ ಕಳಪೆ ಫಾರ್ಮ್‌ನಿಂದ ಹೊರಬರಲು ಸಾಧ್ಯವಾಯಿತು.

ಇಡೀ ಟೂರ್ನಿಯುದ್ಧಕ್ಕೂ ಫೇಲ್ ಆಗಿದ್ದ ಪಂತ್ ಕಳೆದ 11 ಇನ್ನಿಂಗ್ಸ್‌ಗಳಲ್ಲಿ ಕೇವಲ 151 ರನ್‌ ಗಳಿಸಿದ್ದರು. ಈ ಪಂದ್ಯದಲ್ಲಿ 61 ಎಸೆತಗಳಲ್ಲಿ ಅಜೇಯ 118 ರನ್‌ ಗಳಿಸಿ ಎಲ್‌ಎಸ್‌ಜಿಯನ್ನು 227/3 ರನ್‌ಗಳಿಗೆ ಕೊಂಡೊಯ್ದರು. ಈ ಇನ್ನಿಂಗ್ಸ್‌ನಲ್ಲಿ ಮಿಚೆಲ್ ಮಾರ್ಷ್ ಜೊತೆಗಿನ 152 ರನ್‌ಗಳ ಜೊತೆಗೂಡಿಕೆ ಆರ್‌ಸಿಬಿಗೆ ಭಾರೀ ಸವಾಲು ನೀಡಿದರು.

ಆದರೆ, ಪಂತ್‌ರ ಶತಕದ ಸಂಭ್ರಮಾಚರಣೆಯು ಈ ಪಂದ್ಯದ ಮುಖ್ಯಾಂಶವಾಯಿತು. ಶತಕ ಪೂರೈಸಿದ ನಂತರ, ಪಂತ್ ತಮ್ಮ ಬ್ಯಾಟಿಂಗ್ ಗ್ಲೌಸ್‌ಗಳನ್ನು ತೆಗೆದು, ಪ್ಯಾಡ್‌ಗಳೊಂದಿಗೆ ಒಂದು ಅದ್ಭುತ ಸಾಲ್ಟೊ (ಕಸರತ್‌ನ ಫ್ರಂಟ್ ಫ್ಲಿಪ್) ಮಾಡಿ, ತಮ್ಮ ಫಿಟ್‌ನೆಸ್ ಮತ್ತು ಉತ್ಸಾಹವನ್ನು ಪ್ರದರ್ಶಿಸಿದರು. ಈ ಸಂಭ್ರಮಾಚರಣೆಯು ಏಕಾನಾ ಕ್ರೀಡಾಂಗಣದಲ್ಲಿ ಸೇರಿದ್ದ ಕ್ರಿಕೆಟ್ ಅಭಿಮಾನಿಗಳನ್ನು ರಂಚಿಸಿತ್ತು. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ ಭಾರೀ ವೈರಲ್ ಆಗಿದ್ದು, ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಪಂತ್‌ರ ಈ ಅನನ್ಯ ಸೆಲೆಬ್ರೇಷನ್ ಅನ್ನು 1 ರಿಂದ 10ರವರೆಗಿನ ಸ್ಕೇಲ್‌ನಲ್ಲಿ 10 ಎಂದು ರೇಟ್ ಮಾಡಿದರು.

ಎಲ್‌ಎಸ್‌ಜಿ ಪರ ಮಾರ್ಷ್, ಪಂತ್ ಅಬ್ಬರ

ಪ್ಲೇ ಆಫ್​ ರೇಸ್​ನಿಂದ ಈಗಾಗಲೇ ಹೊರಬಿದ್ದಿರುವ ಲಖನೌ ತಂಡ ಕೇವಲ ಗೆಲುವಿನೊಂದಿಗೆ ಅಭಿಯಾನ ಅಂತ್ಯಗೊಳಿಸುವ ಪಂದ್ಯದಲ್ಲಿ ಅಕ್ಷರಃ ಅಬ್ಬರಿಸಿತು. ಇನ್ನಿಂಗ್ಸ್​ ಆರಂಭಿಸಿದ 3ನೇ ಓವರ್​ನಲ್ಲೇ ಮ್ಯಾಥ್ಯೂ ಬ್ರೀಡ್ಜ್ಕ್​ (14) ವಿಕೆಟ್ ಕಳೆದುಕೊಂಡಿತು. ಆದರೆ 2ನೇ  ವಿಕೆಟ್ ಜೊತೆಯಾಟದಲ್ಲಿ ಪಂತ್ ಮತ್ತು ಮಾರ್ಷ್​ 78 ಎಸೆತಗಳಲ್ಲಿ 152 ರನ್​ಗಳ ಜೊತೆಯಾಟ ನೀಡಿದರು.

ಗೋಲ್ಡನ್ ಫಾರ್ಮ್​ನಲ್ಲಿರುವ ಮಿಚೆಲ್ ಮಾರ್ಷ್​ ಈ ಪಂದ್ಯದಲ್ಲೂ ಅಬ್ಬರಿಸಿದರು.  ಕೇವಲ 35 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್​ಗಳ ಸಹಿತ 67 ರನ್​ಗಳಿಸಿ 16ನೇ ಓವರ್​​ನಲ್ಲಿ ಭುವನೇಶ್ವರ್ ಕುಮಾರ್ಗೆ ವಿಕೆಟ್ ಒಪ್ಪಿಸಿದರು. ಇನ್ನು ಪಂತ್ 61 ಎಸೆತಗಳಲ್ಲಿ 11 ಬೌಂಡರಿ, 8 ಸಿಕ್ಸರ್​ಗಳ ಸಹಿತ ಅಜೇಯ 118 ರನ್​ಗಳಿಸಿದರು. ನಿಕೋಲಸ್ ಪೂರನ್ 10 ಎಸೆತಗಳಲ್ಲಿ 13 ರನ್​ಗಳಿಸಿ ಔಟ್ ಆದರು.