Last Updated:
ಲಾರ್ಡ್ಸ್ ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 387 ರನ್ ಗಳಿಗೆ ಅಲೌಟ್ ಆಯಿತು. ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ಗಾಯಗೊಂಡಿದ್ದು, ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾರೆ.
ಲಾರ್ಡ್ಸ್ ನಲ್ಲಿ (Lord’s Cricket Ground) ಭಾರತದ (Team India) ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ (Test Cricket) ಪಂದ್ಯದ ಮೊದಲ ದಿನದಾಟ ಮುಗಿಯುವ ಸಮಯಕ್ಕೆ ಇಂಗ್ಲೆಂಡ್ 4 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿತ್ತು. ಜೋ ರೂಟ್ ಶತಕ ಸನಿಹದಲ್ಲಿದ್ದರು. ಎರಡನೇ ದಿನದಾಟ ಆರಂಭದ ಬಳಿಕ ಶತಕ ಸಿಡಿಸಿ ಮಿಂಚಿದ್ದಾರೆ. ಆದರೆ ಮಧ್ಯಾಹ್ನದ ಊಟದ ವಿರಾಮದ ಬಳಿಕ 387 ರನ್ ಗಳಿಗೆ ಅಲೌಟ್ ಆಗಿದೆ. ಆದರೆ ಮೊದಲ ದಿನದಾಟದ ವೇಳೆ ಕ್ರಿಕೆಟರ್ ನಿತೀಶ್ ರೆಡ್ಡಿ (Nitish Reddy) ಒಂದೇ ಓವರ್ ನಲ್ಲಿ ಎರಡು ಪ್ರಮುಖ ವಿಕೆಟ್ ಪಡೆದುಕೊಂಡಿದ್ದರು. ಆದರೆ ವಿಕೆಟ್ ಕೀಪರ್ ಈ ಹಂತದಲ್ಲಿ ಗಾಯಗೊಂಡಿದ್ದರು. ಇದರೊಂದಿಗೆ ಭಾರತ ತಂಡ ಆತಂಕಕ್ಕೆ ಸಿಲುಕಿದ್ದು, ಪಂತ್ ಸ್ಥಾನದಲ್ಲಿ (Rishabh Pant) ಜುರೆಲ್ ವಿಕೆಟ್ ಕೀಪಿಂಗ್ ಗೆ ಆಗಮಿಸಿದ್ದಾರೆ. ಎರಡನೇ ದಿನದಾಟಕ್ಕೂ ಆರಂಭಕ್ಕೂ ಮುನ್ನ ಪಂತ್ ಗಾಯದ ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದ ಬಿಸಿಸಿಐ (BCCI), ಗಾಯದಿಂದ ಚೇತರಿಕೆ ಕಂಡಿಲ್ಲ, ಈ ಹಿನ್ನೆಲೆಯಲ್ಲಿ ಇಂದು ಕೂಡ ಜುರೆಲ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಿದ್ದಾರೆ.
ಮೊದಲ ದಿನದ ಆಟದಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ ಗಾಯಗೊಂಡಿದ್ದಾರೆ. ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಲೆಗ್ ಸೈಡ್‌ಗೆ ಎಸೆದ ಚೆಂಡನ್ನು ತಡೆಯುವ ಸಂದರ್ಭದಲ್ಲಿ ಪಂತ್‌ರ ಎಡಗೈ ಬೆರಳಿಗೆ ಗಾಯವಾಗಿದೆ. ಇದರಿಂದಾಗಿ ಅವರು ಮೈದಾನದಿಂದ ಹೊರ ನಡೆದಿದ್ದರು, ಅವರ ಸ್ಥಾನದಲ್ಲಿ ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿರ್ವಹಿಸಿದರು. ಪಂತ್ ಪ್ರಸ್ತುತ ವೈದ್ಯಕೀಯ ತಂಡದ ಪರಿವೀಕ್ಷಣೆಯಲ್ಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಆದರೆ, ಗಾಯದ ತೀವ್ರತೆಯ ಬಗ್ಗೆ ಬೋರ್ಡ್ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಪಂದ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ನಿತೀಶ್ ಕುಮಾರ್ ರೆಡ್ಡಿಯೂ ಈ ವಿಷಯದ ಬಗ್ಗೆ ಯಾವುದೇ ನವೀಕರಣವನ್ನು ನೀಡಲಿಲ್ಲ.
ಪಂತ್ ಶೀಘ್ರವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್ ಮುಗಿದ ನಂತರ ಭಾರತವು ಕೇವಲ ಹತ್ತು ಬ್ಯಾಟ್ಸ್‌ಮನ್‌ಗಳೊಂದಿಗೆ ಕಣಕ್ಕಿಳಿಯಬೇಕಾಗುತ್ತದೆ. ಐಸಿಸಿ ನಿಯಮಗಳ ಪ್ರಕಾರ, ಬದಲಿ ಆಟಗಾರನು ಅಂಪೈರ್‌ಗಳ ಅನುಮತಿಯೊಂದಿಗೆ ವಿಕೆಟ್ ಕೀಪಿಂಗ್ ಮಾಡಬಹುದು, ಆದರೆ ಬೌಲಿಂಗ್ ಅಥವಾ ನಾಯಕತ್ವವನ್ನು ಮಾಡಲು ಸಾಧ್ಯವಿಲ್ಲ. ಬ್ಯಾಟಿಂಗ್‌ಗೂ ಇದೇ ನಿಯಮ ಅನ್ವಯಿಸುತ್ತದೆ. ಆದ್ದರಿಂದ, ಧ್ರುವ್ ಜುರೆಲ್ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ.
ಪ್ರಸ್ತುತ ನಿಯಮಗಳ ಪ್ರಕಾರ, ಕನ್‌ಕಶನ್ (ತಲೆಗೆ ಗಾಯವಾದಾಗ) ಅಥವಾ ಕೋವಿಡ್-19 ಸೋಂಕಿನ ಸಂದರ್ಭದಲ್ಲಿ ಮಾತ್ರ ಪೂರ್ಣ ಬದಲಿ ಆಟಗಾರನನ್ನು ಅನುಮತಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ, ಗಾಯಗೊಂಡ ಆಟಗಾರನಂತೆಯೇ ಇನ್ನೊಬ್ಬ ಆಟಗಾರನನ್ನು ಬದಲಿಯಾಗಿ ಆಡಿಸಬಹುದು.
ಈ ಟೆಸ್ಟ್‌ನಲ್ಲಿ ಪಂತ್ ಆಡಲು ಸಾಧ್ಯವಾಗದಿದ್ದರೆ, ಭಾರತವು ಪ್ರಮುಖ ಬ್ಯಾಟ್ಸ್‌ಮನ್‌ನನ್ನು ಕಳೆದುಕೊಂಡಂತೆ ಆಗುತ್ತದೆ. ಈ ಸರಣಿಯಲ್ಲಿ ಇದುವರೆಗೆ ಭಾರತದ ಪರವಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಪಂತ್ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಎರಡು ಶತಕಗಳನ್ನು ಬಾರಿಸಿದ ಪಂತ್, ಎರಡನೇ ಟೆಸ್ಟ್‌ನಲ್ಲಿ ಅರ್ಧಶತಕವನ್ನು ಗಳಿಸಿದ್ದಾರೆ. ವಿಕೆಟ್‌ನ ಹಿಂದೆ ನಿಂತು ಬೌಲರ್‌ಗಳಲ್ಲಿ ಉತ್ಸಾಹವನ್ನು ತುಂಬುವ ಪಂತ್, ತಮ್ಮ ಮಾತುಗಳಿಂದ ವಿರೋಧಿ ಬ್ಯಾಟ್ಸ್‌ಮನ್‌ಗಳನ್ನು ಕೆಣಕುತ್ತಾರೆ. ಡಿಆರ್‌ಎಸ್ ತೆಗೆದುಕೊಳ್ಳುವಲ್ಲಿ ಕೂಡ ಪಂತ್‌ನ ಪಾತ್ರವು ನಿರ್ಣಾಯಕವಾಗಿದೆ.
ಕಳೆದ ತಿಂಗಳಲ್ಲಿ ಐಸಿಸಿ ಹೊಸ ನಿಯಮಗಳನ್ನ ಪ್ರಕಟಿಸಿದೆ. ದೇಶೀಯ ಪ್ರಥಮ ದರ್ಜೆ ಪಂದ್ಯಗಳಲ್ಲಿ ಯಾವುದೇ ಆಟಗಾರನಿಗೆ ಗಾಯವಾದರೆ, ಪೂರ್ಣ ಬದಲಿ ಆಟಗಾರರನ್ನು ಅನುಮತಿಸುವ ಬಗ್ಗೆ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಲಾಗುವುದು ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಘೋಷಿಸಿದೆ.
“ಪಂದ್ಯ ಆರಂಭವಾದ ನಂತರ (ವಾರ್ಮ್-ಅಪ್ ಅವಧಿಯನ್ನು ಒಳಗೊಂಡಂತೆ) ಯಾವುದೇ ಸಮಯದಲ್ಲಿ ಆಟಗಾರನಿಗೆ ತೀವ್ರವಾದ ಗಾಯವಾದರೆ, ಉಳಿದ ಪಂದ್ಯದಲ್ಲಿ ಅದೇ ಸಾಮರ್ಥ್ಯದ (ಕೀಪರ್, ಸ್ಪಿನ್ನರ್, ಬ್ಯಾಟ್ಸ್‌ಮನ್…) ಆಟಗಾರನನ್ನು ಆಡಿಸಬಹುದು” ಎಂದು ಐಸಿಸಿಯ ಹೊಸ ನಿಯಮ ಹೇಳುತ್ತದೆ. ಆದರೆ, ಈ ನಿಯಮವು 2025ರ ಅಕ್ಟೋಬರ್‌ನಿಂದ ಆರು ತಿಂಗಳ ಕಾಲ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. ಆದ್ದರಿಂದ, ಈ ನಿಯಮವು ಪಂತ್‌ಗೆ ಅನ್ವಯಿಸುವುದಿಲ್ಲ.
July 11, 2025 7:13 PM IST