‘ಅದ್ಭುತ, ನಮ್ಮ ಕೆಲಸದ ಬಗ್ಗೆ ತುಂಬಾನೇ ಹೆಮ್ಮೆಯಿದೆ’: – TOXIC – Rocking star Yash

‘ಅದ್ಭುತ, ನಮ್ಮ ಕೆಲಸದ ಬಗ್ಗೆ ತುಂಬಾನೇ ಹೆಮ್ಮೆಯಿದೆ’: – TOXIC – Rocking star Yash

‘ಅದ್ಭುತ, ನಮ್ಮ ಕೆಲಸದ ಬಗ್ಗೆ ತುಂಬಾನೇ ಹೆಮ್ಮೆಯಿದೆ’: ಟಾಕ್ಸಿಕ್​ ಆ್ಯಕ್ಷನ್ ಸೀಕ್ವೆನ್ಸ್​ ಶೂಟಿಂಗ್​ ಕಂಪ್ಲೀಟ್ – TOXIC

ಹಾಲಿವುಡ್ ಸ್ಟಂಟ್ ಮ್ಯಾನ್​ ಜೆಜೆ ಪೆರ್ರಿ, ಸ್ಯಾಂಡಲ್​ವುಡ್​ನ ರಾಕಿಂಗ್​ ಸ್ಟಾರ್​ ಯಶ್ ಮುಖ್ಯಭೂಮಿಕೆಯ ‘ಟಾಕ್ಸಿಕ್‌’ನಲ್ಲಿನ ತಮ್ಮ ಕೆಲಸ ಪೂರ್ಣಗೊಳಿಸಿದ್ದಾರೆ – Rocking star Yash

 

ಜಾನ್ ವಿಕ್, ಫಾಸ್ಟ್ ಅಂಡ್​​ ಫ್ಯೂರಿಯಸ್, ಅವತಾರ್: ದಿ ವೇ ಆಫ್ ವಾಟರ್ ಮತ್ತು ಟ್ರಾನ್ಸ್‌ಫಾರ್ಮರ್ಸ್: ದಿ ಲಾಸ್ಟ್ ನೈಟ್‌ನಂತಹ ಬ್ಲಾಕ್‌ಬಸ್ಟರ್ ಆ್ಯಕ್ಷನ್ ಫ್ರಾಂಚೈಸಿಗಳ ಭಾಗವಾಗಿ ಹೆಸರುವಾಸಿಯಾಯೋ ಹಾಲಿವುಡ್ ಸ್ಟಂಟ್ ಮ್ಯಾನ್​ ಜೆಜೆ ಪೆರ್ರಿ, ಸ್ಯಾಂಡಲ್​ವುಡ್​ನ ರಾಕಿಂಗ್​ ಸ್ಟಾರ್​ ಯಶ್ ಮುಖ್ಯಭೂಮಿಕೆಯ ‘ಟಾಕ್ಸಿಕ್‌’ನಲ್ಲಿನ ತಮ್ಮ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ಇತ್ತೀಚೆಗೆ ನಾಯಕ ನಟ ಯಶ್ ಅವರೊಂದಿಗೆ ಕೆಲಸ ಮಾಡಿರುವ ಪೆರ್ರಿ, ಸೋಷಿಯಲ್​ ಮೀಡಿಯಾದಲ್ಲಿ ಬಹು ನಿರೀಕ್ಷಿತ ಚಿತ್ರದ ಅಪ್ಡೇಟ್​ ಹಂಚಿಕೊಂಡಿದ್ದಾರೆ.

’ನಮ್ಮ ಕೆಲಸದ ಬಗ್ಗೆ ತುಂಬಾನೇ ಹೆಮ್ಮೆಯಿದೆ’: ಕೆಜಿಎಫ್​​ ಸ್ಟಾರ್ ಯಶ್ ಜೊತೆಗಿನ ಫೋಟೋ ಹಂಚಿಕೊಂಡ ಸ್ಟಂಟ್​ ಎಕ್ಸ್​​ಪರ್ಟ್, “ನನ್ನ ಸ್ನೇಹಿತ ಯಶ್ ಜೊತೆ ಟಾಕ್ಸಿಕ್ ಚಿತ್ರದಲ್ಲಿ ಕೆಲಸ ಮಾಡಿದ್ದು ಬಹಳ ಸಂತೋಷವಾಯಿತು. ಭಾರತದಲ್ಲಿ ಉತ್ತಮ ಸಮಯ ಕಳೆದೆ. ಯುರೋಪಿನಾದ್ಯಂತ ನನ್ನ ಅನೇಕ ಆತ್ಮೀಯ ಸ್ನೇಹಿತರೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಎಲ್ಲರೂ ಈ ಸಿನಿಮಾ ವೀಕ್ಷಿಸೋದನ್ನು ನೋಡಲು ಹೆಚ್ಚು ಕಾಯಲು ಸಾಧ್ಯವಿಲ್ಲ. ಅದ್ಭುತವಾಗಿದೆ. ನಮ್ಮ ಕೆಲಸದ ಬಗ್ಗೆ ತುಂಬಾನೇ ಹೆಮ್ಮೆಯಿದೆ” ಎಂದು ಬರೆದುಕೊಂಡಿದ್ದಾರೆ.

ಈ ವರ್ಷದ ಅಂತ್ಯಕ್ಕೆ ಬಿಡುಗಡೆ: ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ, ಇಂಗ್ಲಿಷ್​ ಸೇರಿ ಬಹು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಚಿತ್ರ ಆರಂಭದಲ್ಲಿ ಏಪ್ರಿಲ್ 7, 2025ರಂದು ಬಿಡುಗಡೆಯಾಗಲಿದೆ ಎಂದು ತಿಳಿಸಲಾಗಿತ್ತು. ಅದಾಗ್ಯೂ, ಚಿತ್ರೀಕರಣ ವಿಳಂಬದಿಂದಾಗಿ, ಬಿಡುಗಡೆಯನ್ನು ಈ ಸಾಲಿನ ಅಂತ್ಯಕ್ಕೆ ಮುಂದೂಡಲಾಗಿದೆ.

ತಾರಾಗಣದಲ್ಲಿ ಇವರೆಲ್ಲಾ ಇದ್ದಾರೆ: ಕೆಜಿಎಫ್ ಸ್ಟಾರ್ ಜೊತೆಗೆ, ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ಮತ್ತು ನಯನತಾರಾ ಕೂಡಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಜೆಜೆ ಪೆರ್ರಿ ಅವರ ಹೈ-ಆ್ಯಕ್ಟೇನ್ ಸ್ಟಂಟ್​ಗಳನ್ನು ಒಳಗೊಂಡಿರುವ ಟಾಕ್ಸಿಕ್, ಬಿಗ್​ ಬಜೆಟ್​​ನಲ್ಲಿ ನಿರ್ಮಾಣಗೊಳ್ಳುತ್ತಿದೆ.

ಟಾಕ್ಸಿಕ್ ನಾಯಕ ನಟ ಯಶ್ (Photo: Teaser youtube)
yash toxic movie screenshot

ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ ಕುತೂಹಲ: ರಾಕಿಂಗ್​ ಸ್ಟಾರ್​ನ 39ನೇ ಜನ್ಮದಿನದ ಸಂದರ್ಭ, ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್‌’ನಿಂದ ವಿಡಿಯೋ ಒಂದನ್ನು ಅನಾವರಣಗೊಳಿಸಿದ್ದರು. ಈ ವಿಡಿಯೋ ನಾಯಕ ನಟನ ಒಂದು ನೋಟವನ್ನು ಒದಗಿಸಿದ್ದು, ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.

ಯಶ್ ಅವರ ಮತ್ತೊಂದು ಬಿಗ್​ ಪ್ರಾಜೆಕ್ಟ್​​ ನಿತೇಶ್ ತಿವಾರಿ ಅವರ ರಾಮಾಯಣ. ಬಾಲಿವುಡ್​​ ಸೂಪರ್ ಸ್ಟಾರ್ ರಣ್​​​ಬೀರ್ ಕಪೂರ್ ಅವರ ರಾಮ್ ಪಾತ್ರದೆದುರು ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ. ಸಾಯಿ ಪಲ್ಲವಿ ಮತ್ತು ಸನ್ನಿ ಡಿಯೋಲ್ ಕೂಡಾ ಈ ಚಿತ್ರದಲ್ಲಿದ್ದು, 2026ರ ದೀಪಾವಳಿಗೆ ಬಿಡುಗಡೆಯಾಗಲಿದೆ. ಯಶ್ ಇತ್ತೀಚೆಗೆ ಮುಂಬೈನಲ್ಲಿ ಈ ಚಿತ್ರದ ಪ್ರಮುಖ ದೃಶ್ಯಗಳ ಚಿತ್ರೀಕರಣದಲ್ಲಿ ಕಾಣಿಸಿಕೊಂಡರು.

Leave a Reply

Your email address will not be published. Required fields are marked *