RR vs MI: ರಿಕಲ್ಟನ್‌-ರೋಹಿತ್‌ ರಗಡ್‌ ಬ್ಯಾಟಿಂಗ್‌! ರಾಜಸ್ಥಾನಕ್ಕೆ ರಾಯಲ್‌ ಟಾರ್ಗೆಟ್‌ ಕೊಟ್ಟ ಪಾಂಡ್ಯ ಪಡೆ!IPL 2025 RR vs MI massive batting from Ryan Rickelton Rohit Sharma Big Score target for rajastan royals

RR vs MI: ರಿಕಲ್ಟನ್‌-ರೋಹಿತ್‌ ರಗಡ್‌ ಬ್ಯಾಟಿಂಗ್‌! ರಾಜಸ್ಥಾನಕ್ಕೆ ರಾಯಲ್‌ ಟಾರ್ಗೆಟ್‌ ಕೊಟ್ಟ ಪಾಂಡ್ಯ ಪಡೆ!IPL 2025 RR vs MI massive batting from Ryan Rickelton Rohit Sharma Big Score target for rajastan royals

Last Updated:

ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ 50ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮುಂಬೈ ಇಂಡಿಯನ್ಸ್ ತಂಡದ ರಿಕಲ್ಟನ್‌ ಮತ್ತು ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ನೀಡಿದರು.

RR vs MIRR vs MI
RR vs MI

ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ 50 ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (Rajasthan Royals) ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians) ತಂಡವನ್ನು ಎದುರಿಸುತ್ತಿದ್ದು, ಟಾಸ್​ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟಿಂಗ್‌ಗೆ ಆಗಮಿಸಿದ ಮುಂಬೈ ಇಂಡಿಯನ್ಸ್ ಆರಂಭದಲ್ಲಿ ಅಬ್ಬರಿಸಿತು. ರಿಕಲ್ಟನ್‌ ಹಾಗೂ ರೋಹಿತ್ ಶರ್ಮಾ ಅದ್ಭುತವಾಗಿ ಆಟವಾಡಿದ್ರು. ಇನ್ನೂ ಇವರು ಔಟಾದ ಬಳಿಕ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಸರೆಯಾಗಿದ್ದು ಸೂರ್ಯ ಕುಮಾರ್ ಯಾದವ್‌ ಹಾಗೂ ನಾಯಕ ಹಾರ್ದಿಕ್‌ ಪಾಂಡ್ಯ. 20 ಓವರ್‌‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 217 ರನ್‌‌ಗಳಿಸಿದೆ. ರಾಜಸ್ಥಾನ ಗೆಲ್ಲಲು 218ರನ್‌ ಗಳಿಸಬೇಕಿದೆ.

ರೋಹಿತ್‌-ರಿಕಲ್ಟನ್‌ 116 ಜೊತೆಯಾಟ!

ಮುಂಬೈ ಇಂಡಿಯನ್ಸ್‌ಗಾಗಿ ರೋಹಿತ್ ಶರ್ಮಾ ಮತ್ತು ರಯಾನ್ ರಿಕಲ್ಟನ್‌ ಆರಂಭದ ಬ್ಯಾಟಿಂಗ್ ಮಾಡಿದರು. ಮೊದಲ ಎರಡು ಓವರ್‌ಗಳಲ್ಲಿ ಜೋಫ್ರಾ ಆರ್ಚರ್ ಮತ್ತು ಫಜಲ್ಹಕ್ ಫಾರೂಕಿ ಉತ್ತಮವಾಗಿ ಬೌಲಿಂಗ್ ಮಾಡಿದರು. ಫಜಲ್ಹಕ್‌ನ ಚೆಂಡಿನಿಂದ ರೋಹಿತ್ ಎಲ್ಬಿಡಬ್ಲ್ಯೂ ಆಗುವ ಸಾಧ್ಯತೆ ಕಂಡಿತು. ಆದರೆ, 38 ವರ್ಷದ ರೋಹಿತ್ ಡಿಆರ್‌ಎಸ್ ತೆಗೆದುಕೊಂಡರು. ರಿವ್ಯೂನಲ್ಲಿ ಚೆಂಡು ಲೆಗ್‌ನಿಂದ ಹೊರಗೆ ಇದೆ ಎಂದು ತೋರಿತು, ಅವರು ಔಟಾಗದೆ ಉಳಿದರು. ನಿಧಾನ ಆರಂಭದ ನಂತರ, ರೋಹಿತ್ ಮತ್ತು ರಯಾನ್ ರಾಜಸ್ಥಾನ್ ರಾಯಲ್ಸ್ ಬೌಲರ್‌ಗಳ ಮೇಲೆ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿ, 6 ಓವರ್‌ಗಳಲ್ಲಿ 58 ರನ್ ಗಳಿಸಿದರು.

ಮುಂಬೈ ಇಂಡಿಯನ್ಸ್ ತಂಡ 116 ರನ್‌ಗಳಿಸಿದ್ದಾಗ ತೀಕ್ಷಣ ಬೌಲಿಂಗ್‌ಗೆ ರಿಕಲ್ಟನ್‌ ಕ್ಲೀನ್‌ ಬೋಲ್ಡ್‌ ಆದ್ರು. ಇನ್ನೂ ರಿಯಾನ್‌ ಪರಾಗ್ ಬೌಲಿಂಗ್‌‌ನಲ್ಲಿ ರೋಹಿತ್ ಶರ್ಮಾ ಕ್ಯಾಚ್ ನೀಡಿ ಔಟಾದ್ರು.