Sabarimala: ಶಬರಿಮಲೆಯಲ್ಲಿ ಮಂಡಲ, ಮಕರಜ್ಯೋತಿ ತೀರ್ಥಾಟನೆಗೆ ಸಿದ್ಧತೆ | Preparations for Mandala, Makarjyothi Pilgrimage at Sabarimala

Sabarimala: ಶಬರಿಮಲೆಯಲ್ಲಿ ಮಂಡಲ, ಮಕರಜ್ಯೋತಿ ತೀರ್ಥಾಟನೆಗೆ ಸಿದ್ಧತೆ | Preparations for Mandala, Makarjyothi Pilgrimage at Sabarimala

Last Updated:

Dakshin Kannadaಫ್ಲೈ ಓವರ್ ತೆರವುಗೊಳಿಸಿದರೆ ಭಕ್ತರನ್ನು ಕೊಡಿಮರದ ಬುಡದಿಂದ ನೇರವಾಗಿ ದೇಗುಲಕ್ಕೆ ಬಿಡಬೇಕಾಗಿ ಬರುವ ಅನಿವಾರ್ಯತೆಯಿಂದಾಗಿ ದರ್ಶನ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ತರಲು ತೀರ್ಮಾನಿಸಲಾಗಿದೆ.

X

ವಿಡಿಯೋ ಇಲ್ಲಿ ನೋಡಿ

ದೇಶದ ಹೆಸರಾಂತ‌ ಕ್ಷೇತ್ರ ಕೇರಳದ ಶಬರಿಮಲೆ ಶ್ರೀ ಅಯ್ಯಪ್ಪ ಸನ್ನಿಧಾನದಲ್ಲಿ(Sabarimala) ಮಂಡಲ, ಮಕರಜ್ಯೋತಿ ತೀರ್ಥಾಟನೆಯ ಸಿದ್ಧತೆಗಳು ನಡೆಯುತ್ತಿವೆ. ಮಂಡಲ ಮಕರ ಜ್ಯೋತಿ ತೀರ್ಥಾಟನೆ (Makara Mandala Jyothi Theertatane) ಋತುವಿನಲ್ಲಿ ಭಾರೀ ಜನ ಸಂದಣಿಯಿಂದ ದೇಗುಲಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಭಕ್ತರ ದೂರುಗಳನ್ನು ಪರಿಗಣಿಸಿ ಶಬರಿಮಲೆಯಲ್ಲಿ(Sabarimala) ಪ್ರಸ್ತುತ ಚಾಲ್ತಿಯಲ್ಲಿರುವ ದರ್ಶನ ವ್ಯವಸ್ಥೆಯಲ್ಲಿ ಮಾರ್ಪಾಡು ತರಲಾಗುವುದು.

18 ಮೆಟ್ಟಿಲುಗಳನ್ನೇರಿ ಸನ್ನಿಧಾನ ತಲುಪುವ ಯಾತ್ರಾರ್ಥಿಗಳಿಗೆ ಕೊಡಿಮರ ಪರಿಸರದಿಂದ ಮೇಲ್ಸೇತುವೆ ಮೂಲಕ ಅವಕಾಶ ನೀಡದೆ ನೇರವಾಗಿ ದೇಗುಲಕ್ಕೆ ತೆರಳಲು ಅವಕಾಶ ನೀಡಲಾಗುವುದು. ಅಲ್ಲಿಂದ ಮಾಳಿಕಪ್ಪುರಂ ದೇವಸ್ಥಾನಕ್ಕೆ ಬಿಡಲಾಗುವುದು. ನವೆಂಬರ್‌ನಲ್ಲಿ ಮಂಡಲ-ಮಕರ ಜ್ಯೋತಿ ತೀರ್ಥಾಟನೆ ಮುಗಿದ ಬಳಿಕ ತಿರುವಿದಾಂಕೂರ್ ದೇವಸ್ವಂಬೋರ್ಡ್ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ.

ಇದನ್ನೂ ಓದಿ: Tirupati Mango: ತಿರುಪತಿಯ ಮಾವಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಬೇಡಿಕೆ!

ದೇಗುಲದ ಕೆಳಗಿನ ಪ್ರಾಂಗಣದಲ್ಲಿ ವಾಸ್ತುಶಾಸ್ತ್ರಕ್ಕೆ ಹೊರತಾಗಿ ನಿರ್ಮಿಸಲಾದ ರಚನೆಗಳು, ಮೇಲಿನ ಪ್ರಾಂಗಣದಲ್ಲಿ ದೇವಸ್ಥಾನಕ್ಕಿಂತ ಎತ್ತರದಲ್ಲಿ ನಿರ್ಮಿಸಲಾದ ಮೇಲ್ಸೇತುವೆ ಸೇರಿದಂತೆ ಇತರ ರಚನೆಗಳನ್ನು ತೆರವುಗೊಳಿಸುವಂತೆ ಒತ್ತಾಯ ಕೇಳಿಬಂದಿತ್ತು. ಶಬರಿಮಲೆ ಉನ್ನತಾಧಿಕಾರ ಸಮಿತಿಯ ಇದೇ ನಿಲುವು ವ್ಯಕ್ತಪಡಿಸಿದೆ. ಫ್ಲೈ ಓವರ್ ತೆರವುಗೊಳಿಸಿದರೆ ಭಕ್ತರನ್ನು ಕೊಡಿಮರದ ಬುಡದಿಂದ ನೇರವಾಗಿ ದೇಗುಲಕ್ಕೆ ಬಿಡಬೇಕಾಗಿ ಬರುವ ಅನಿವಾರ್ಯತೆಯಿಂದಾಗಿ ದರ್ಶನ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ತರಲು ತೀರ್ಮಾನಿಸಲಾಗಿದೆ.

ಪ್ರಸ್ತುತ ಮೇಲಿನ ಪ್ರಾಂಗಣದಲ್ಲಿ ದಟ್ಟಣೆ ನಿಯಂತ್ರಿಸಲು ಯಾತ್ರಾರ್ಥಿಗಳನ್ನು ಫ್ಲೈಓವರ್ ಮೂಲಕ ಬಿಡಲಾಗುತ್ತಿದೆ. 18 ಮೆಟ್ಟಿಲೇರಿ ಬರುವ ತೀರ್ಥಾಟಕರು ಹಾಗೂ ಇರುಮುಡಿ ಇಲ್ಲದೆ ದೇಗುಲದ ಉತ್ತರ ಭಾಗದಿಂದ ನೇರವಾಗಿ ಬರುವವರು ಸಂಗಮಿಸುವಾಗ ದೇಗುಲದ ಮುಂದೆ ಅಪಾರ ಜನಸ್ತೋಮ ಉಂಟಾಗುತ್ತಿದೆ. ಆದರೆ ಬದಲಾವಣೆಗಳನ್ನು ಕಾರ್ಯಗತಗೊಳಿಸುವ ಮೊದಲು ಪರ್ಯಾಯ ವ್ಯವಸ್ಥೆಗಳನ್ನು ಮಾಡುವ ಅಗತ್ಯವಿದೆ. ಪೂಜೆಗಾಗಿ ದೇಗುಲ ಮುಚ್ಚುವ ಸಂದರ್ಭದಲ್ಲಿ 18 ಮೆಟ್ಟಿಲುಗಳನ್ನು ಏರಿ ಬರುವ ಭಕ್ತರನ್ನು ಎಲ್ಲಿ ನಿಲ್ಲಿಸುವುದು ಎಂಬ ಪ್ರಶ್ನೆಯೂ ಉದ್ಭವಿಸಿದೆ.

ಈಗಿರುವ ವಿಶಾಲವಾದ ನಡಪ್ಪಂದಲ್ (ಪಾದಚಾರಿ ಮಾರ್ಗವನ್ನು) ಎರಡು ಮಹಡಿಗಳನ್ನಾಗಿ ಮಾಡಬೇಕು. ಮೇಲಿನ ಮಹಡಿಯಲ್ಲಿ ಯಾತ್ರಾರ್ಥಿಗಳ ವಿಶ್ರಾಂತಿಗೆ ಅವಕಾಶ ನೀಡಿ, ಬಳಿಕ 18 ಮೆಟ್ಟಿಲೇರಲು ಅನುಮತಿ ನೀಡಲು ದೇವಸ್ವಂ ಮಂಡಳಿ ಚಿಂತನೆ ನಡೆಸಿದೆ. ಮೇಲಿನ ಪ್ರಾಂಗಣದ ಕಟ್ಟಡಗಳನ್ನು ತೆರವುಗೊಳಿಸಿದರೆ ಹೆಚ್ಚಿನ ಸ್ಥಳಾವಕಾಶ ದೊರೆತು ಯಾತ್ರಾರ್ಥಿಗಳಿಗೆ ತಂಗಲು ಅವಕಾಶ ಸಿಗಲಿದೆ.