Special Fest: ಪೂಕರೆ ಇಲ್ಲದಿದ್ದರೆ ನಡೆಯೋಲ್ಲ ಕಂಬಳ, ನೇಮ! ಪುತ್ತೂರಿನ ಮಹಾಲಿಂಗನ ಸಾನಿಧ್ಯದಲ್ಲಿ ದೈವ-ದೇವರ ಸಮಾಗಮ! | Puttur Mahalingeshwara Temple hosts Pookare Utsava with grandeur | ದಕ್ಷಿಣ ಕನ್ನಡ

Special Fest: ಪೂಕರೆ ಇಲ್ಲದಿದ್ದರೆ ನಡೆಯೋಲ್ಲ ಕಂಬಳ, ನೇಮ! ಪುತ್ತೂರಿನ ಮಹಾಲಿಂಗನ ಸಾನಿಧ್ಯದಲ್ಲಿ ದೈವ-ದೇವರ ಸಮಾಗಮ! | Puttur Mahalingeshwara Temple hosts Pookare Utsava with grandeur | ದಕ್ಷಿಣ ಕನ್ನಡ

Last Updated:

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೀಪಾವಳಿಯ ಪೂಕರೆ ಉತ್ಸವವು ನ.16 ರಂದು ವೈಭವದಿಂದ ನಡೆಯಿತು, ಶ್ರೀ ದೇವರಿಗೆ ಬಲಿ, ಪೂಜೆ, ಸೀಯಾಳ ಪ್ರಸಾದ ಮತ್ತು ವಿಶೇಷ ಸಂಪ್ರದಾಯಗಳು ಜರುಗಿದವು.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಇತಿಹಾಸ ಪ್ರಸಿದ್ಧ(Historical Prominence) ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೀಪಾವಳಿಯ ಬಲೀಂದ್ರ ಪೂಜೆಯಂದು ಬಲಿಹೊರಟು, ಶ್ರೀದೇವರ (Almighty) ವರ್ಷದ ಪ್ರಥಮ ಸವಾರಿಯಾಗಿ ಪೂಕರೆ ಉತ್ಸವವು (Festival) ಕಾರ್ತಿಕ ಮಾಸದ ಹಸ್ತಾ ನಕ್ಷತ್ರ ಒದಗುವ ನ.16 ರಂದು ಸಂಜೆ ವೈಭವದಿಂದ (Grandness) ನಡೆಯಿತು.

ನಂದಿಯ ಮುಖವಾಡ ಧರಿಸಿ ಕುಣಿತ

ನಂದಿ/ಬಸವನ ಮುಖವಾಡ ಧರಿಸಿದ (ಎರುಕೋಲ) ದೈವ ಶ್ರೀ ದೇವರನ್ನು ಪೂಕರೆ ಕಟ್ಟೆಗೆ ಕರೆದುಕೊಂಡು ಬರುವುದೇ ವಿಶೇಷ. ಸಂಜೆ ಶ್ರೀ ದೇವರ ಬಲಿ ಹೊರಟು ದೇಗುಲದ ಪಶ್ಚಿಮ ದ್ವಾರದಿಂದ ರಾಜಮಾರ್ಗದಲ್ಲಿ ಭಂಡಾರದ ಬಿರುದಾವಳಿ, ಛತ್ರ ಚಾಮರ, ಬೇತಾಳ, ಹಸ್ರಕೊಡೆ, ದಂಡುಶಿಲಾಲು, ವಾದ್ಯ ಮೇಳ, ನಂದಿ ಮುಖವಾಡದ ದೈವದೊಂದಿಗೆ ನೇರವಾಗಿ ಪೂಕರೆ ಕಟ್ಟೆಗೆ ತೆರಳಿ, ಪೂಕರೆ ಕಟ್ಟೆಯಿಂದ ದೇವಳದ ಗದ್ದೆಯನ್ನು ನೋಡಿದ ಬಳಿಕ ಶ್ರೀ ದೇವರು ಕಟ್ಟೆಯಲ್ಲಿ ವಿರಾಜಮಾನರಾದರು. ವೇ. ಮೂ. ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಪ್ರಧಾನ ಅರ್ಚಕ ವೇ. ಮೂ. ವಸಂತ ಕೆದಿಲಾಯ ಅವರು ಮೂಲ ನಾಗ ಸನ್ನಿಧಿಗೆ ತೆರಳಿದರು. ತಂತ್ರಿಯವರು ಪೂಕರೆ ಗದ್ದೆಗೆ ಪ್ರಾರ್ಥನೆ ಮಾಡಿದರು.

ಬಂದ ಭಕ್ತರಿಗೆ ಸೀಯಾಳದ ಪ್ರಸಾದ

ಪೂಕರೆ ಸಿದ್ಧಪಡಿಸಿದ ಸ್ಥಳದಲ್ಲಿ ದೈವ ಮಧ್ಯಸ್ಥ ಶಶಾಂಕ್ ನೆಲ್ಲಿತ್ತಾಯ ಅವರು ನುಡಿಗಟ್ಟಿನೊಂದಿಗೆ ಪ್ರಾರ್ಥಿಸಿದರು. ಪೂಕರೆ ಉತ್ಸವಕ್ಕೆ ಸಂಬಂಧಿಸಿದವರು ಜೋಡು ಪೂಕರೆಯನ್ನು ದೇವರಮಾರು ಗದ್ದೆ ಮತ್ತು ಬಾಕಿತಮಾರು ಗದ್ದೆಯಲ್ಲಿ ಇಟ್ಟು ಪ್ರಾರ್ಥನೆ ಮಾಡಿದರು. ಬಳಿಕ ಪೂಕರೆ ಕಟ್ಟೆಯಲ್ಲಿ ಶ್ರೀದೇವರಿಗೆ ದೀವಟಿಕೆ ಪ್ರಣಾಮ್, ಕಟ್ಟೆಪೂಜೆ ನಡೆದು, ಬುಲೆಕಾಣಿಕೆಯನ್ನು ಸಂಪ್ರದಾಯದಂತೆ ಸೀಮಿತ ಭಕ್ತರಿಗೆ ಸೀಯಾಳ ವಿತರಿಸಲಾಯಿತು.

ಪೂಕರೆ ಕಟ್ಟೆಯಲ್ಲಿ ಕುಳಿತ ಪುತ್ತೂರ ಮಹಾಲಿಂಗ

ಇದನ್ನೂ ಓದಿ: Raj B Shetty: ಸಾಮಾನ್ಯರಲ್ಲಿ ಸಾಮಾನ್ಯರು ರಾಜ್. ಬಿ ಶೆಟ್ರು, ಹೊಸ ಸಿನಿಮಾದ ತಯಾರಿ ಜೋರು!

ಶ್ರೀ ದೇವರು ಪೂಕರೆ ಕಟ್ಟೆಯಲ್ಲಿ ಕುಳಿತ ಬಳಿಕ ದೇವರಿಗೆ ಬುಲೆಕಾಣಿಕೆ ಸಮರ್ಪಣೆ ಸಂಪ್ರದಾಯದಂತೆ ಎರಡರೆಡರಂತೆ ಸುಮಾರು 15 ಜೊತೆ ಸೀಯಾಳವನ್ನು ಪೂಕರೆ ಕಟ್ಟೆಯ ಮುಂದೆ ಆರಂಭದಲ್ಲಿ ಇರಿಸಲಾಯಿತು. ಶ್ರೀ ದೇವರಿಗೆ ಮಂಗಳಾರತಿಯ ಬಳಿಕ ಎರಡು ಜೊತೆಯಿಂದ ಒಂದು ದೇವಳಕ್ಕೆ ಇನ್ನೊಂದು ದೇವಳದ ಆಡಳಿತ ಮಂಡಳಿ ಮತ್ತು ಮಾಜಿ ಸದಸ್ಯರಿಗೆ ಹಾಗೂ ಸೀಮಿತ ಭಕ್ತರಿಗೆ ನೀಡುವ ಸಂಪ್ರದಾಯ ನಡೆಯುವುದು ವಿಶೇಷ. ಇದೇ ಸಂದರ್ಭದಲ್ಲಿ ದೇವರ ಪ್ರಸಾದ ರೂಪದಲ್ಲಿ ಅಷ್ಟದ್ರವ್ಯವನ್ನು ಭಕ್ತರಿಗೆ, ನಿತ್ಯ ಕರಸೇವಕರಿಗೆ ವಿತರಿಸಲಾಯಿತು.