SRH vs GT: ಪ್ಲೇ ಆಫ್​ ಪ್ರವೇಶಕ್ಕೆ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ! ದುಬಾರಿ ಬೌಲರ್​​ ಹೊರಗಿಟ್ಟ ಜಿಟಿ | Sunrisers Hyderabad to bowl first after winning toss vs Gujarat Titans

SRH vs GT: ಪ್ಲೇ ಆಫ್​ ಪ್ರವೇಶಕ್ಕೆ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ! ದುಬಾರಿ ಬೌಲರ್​​ ಹೊರಗಿಟ್ಟ ಜಿಟಿ | Sunrisers Hyderabad to bowl first after winning toss vs Gujarat Titans

Last Updated:

ಐಪಿಎಲ್ 2025ರ 51ನೇ ಪಂದ್ಯದಲ್ಲಿ ಹೈದರಾಬಾದ್ ನಾಯಕ ಪ್ಯಾಟ್ ಕಮಿನ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೈದರಾಬಾದ್ ಪ್ಲೇ ಆಫ್ ಪ್ರವೇಶಕ್ಕೆ ಉಳಿದ 5 ಪಂದ್ಯಗಳನ್ನ ಗೆಲ್ಲಬೇಕಿದೆ.

ಹೈದರಾಬಾದ್  vs ಗುಜರಾತ್ ಟೈಟನ್ಸ್ಹೈದರಾಬಾದ್  vs ಗುಜರಾತ್ ಟೈಟನ್ಸ್
ಹೈದರಾಬಾದ್ vs ಗುಜರಾತ್ ಟೈಟನ್ಸ್

ಐಪಿಎಲ್ 2025ರ 51ನೇ ಪಂದ್ಯವು ಶುಕ್ರವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಡೆಯುತ್ತಿದ್ದು, ಟಾಸ್​ ಗೆದ್ದಿರುವ ತಂಡದ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. 9 ಪಂದ್ಯಗಳಲ್ಲಿ ಕೇವಲ 6 ಅಂಕಗಳನ್ನು ಮಾತ್ರ ಹೊಂದಿರುವ ಹೈದರಾಬಾದ್​ ತಂಡ ಇಂದಿನ ಪಂದ್ಯ ಸೇರಿ ಉಳಿದ 5 ಪಂದ್ಯಗಳನ್ನ ದೊಡ್ಡ ಅಂತರದಿಂದ ಗೆದ್ದರೆ ಮಾತ್ರ ಪ್ಲೇ ಆಫ್​ ಪ್ರವೇಶಿಸಲಿದೆ. ಅತ್ತ ಗುಜರಾತ್ ಟೈಟನ್ಸ್ ತಂಡ ನಾಲ್ಕನೇ ಸ್ಥಾನದಲ್ಲಿದ್ದು, ಇಂದಿನ ಪಂದ್ಯವನ್ನ ಗೆದ್ದ 2ನೇ ಸ್ಥಾನಕ್ಕೆ ಲಗ್ಗೆ ಇಡುವ ಆಲೋಚನೆಯಲ್ಲಿದೆ.

ಗುಜರಾತ್ ಟೈಟಾನ್ಸ್ ಐಪಿಎಲ್ 2025 ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಪ್ಲೇಆಫ್ ರೇಸ್‌ನಲ್ಲಿ  ಬಲಿಷ್ಠ ತಂಡವಾಗಿ ಉಳಿದುಕೊಂಡಿದೆ. ತಂಡವು 9 ಪಂದ್ಯಗಳಲ್ಲಿ 6 ರಲ್ಲಿ ಗೆದ್ದಿದ್ದು, ಪ್ಲೇಆಫ್‌ಗೆ ಅರ್ಹತೆ ಪಡೆಯುವ ಸಮೀಪದಲ್ಲಿದೆ. ಗುಜರಾತ್ ತಂಡ ಹೈದರಾಬಾದ್ ವಿರುದ್ಧ ಆಡಿದ ಕಳೆದ ನಾಲ್ಕು ಪಂದ್ಯಗಳಲ್ಲಿ ಪ್ರತಿಯೊಂದನ್ನು ಗೆದ್ದಿದೆ. 

ಸನ್​ರೈಸರ್ಸ್ ಹೈದರಾಬಾದ್ ತಂಡ ಇಂದು ಯಾವುದೇ ಬದಲಾವಣೆ ಇಲ್ಲದೆ ಕಣಕ್ಕಿಳಿಯುತ್ತಿದ್ದರೆ, ಗುಜರಾತ್ ತಂಡ ಕಳೆದ ಪಂದ್ಯದಲ್ಲಿ ಒಂದೇ ಓವರ್​ನಲ್ಲಿ 30 ರನ್​ ಬಿಟ್ಟುಕೊಟ್ಟಿದ್ದ ಕರೀಮ್ ಜನತ್ ಬದಲಿಗೆ ಜೆರಾಲ್ಡ್ ಕೊಯೆಟ್ಜಿ ತಂಡಕ್ಕೆ ಸೇರಿಕೊಂಡಿದ್ದಾರೆ. ಗುಜರಾತ್ ಪರ ಮೊದಲ ಪಂದ್ಯವಾಗಿದೆ.

ಪ್ಲೇಯಿಂಗ್ ಇಲೆವೆನ್

ನ್‌ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ XI): ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅನಿಕೇತ್ ವರ್ಮಾ, ಕಮಿಂದು ಮೆಂಡಿಸ್, ನಿತೀಶ್ ಕುಮಾರ್ ರೆಡ್ಡಿ, ಪ್ಯಾಟ್ ಕಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಜಯದೇವ್ ಉನದ್ಕತ್, ಮೊಹಮ್ಮದ್ ಶಮಿ, ಜೀಶನ್ ಅನ್ಸಾರಿ

ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ರಾಹುಲ್ ತೆವಾಟಿಯಾ, ಶಾರುಖ್ ಖಾನ್, ರಶೀದ್ ಖಾನ್, ರವಿ  ಸಾಯಿ ಕಿಶೋರ್, ಜೆರಾಲ್ಡ್ ಕೋಯೆಟ್ಜಿ,  ಪ್ರಸಿರ್ದ ಕೃಷ್ಣ, ಮೊಹಮ್ಮದ್ ಸಿರಾಜ್