SRH vs MI: ಬೌಲ್ಟ್​, ಚಾಹರ್​ ದಾಳಿಗೆ ತವರಿನಲ್ಲೇ ತತ್ತರಿಸಿದ ಹೈದರಾಬಾದ್! ಮುಂಬೈಗೆ ಕೇವಲ 144 ರನ್​ಗಳ ಗುರಿ

SRH vs MI: ಬೌಲ್ಟ್​, ಚಾಹರ್​ ದಾಳಿಗೆ ತವರಿನಲ್ಲೇ ತತ್ತರಿಸಿದ ಹೈದರಾಬಾದ್! ಮುಂಬೈಗೆ ಕೇವಲ 144 ರನ್​ಗಳ ಗುರಿ

Last Updated:

ಸನ್​​ರೈಸರ್ಸ್​ ಹೈದರಾಬಾದ್​ ತಂಡ 20 ಓವರ್​ಗಳಲ್ಲಿ 143 ರನ್​ಗಳಿಸಿ 8 ವಿಕೆಟ್​ ಕಳೆದುಕೊಂಡಿತು. ಕ್ಲಾಸೆನ್ 71, ಅಭಿನವ್ ಮನೋಹರ್ 43 ರನ್​ಗಳಿಸಿದರು. ಟ್ರೆಂಟ್ ಬೌಲ್ಟ್​ 4 ವಿಕೆಟ್​ ಪಡೆದರು.

ಮುಂಬೈ ಇಂಡಿಯನ್ಸ್ಮುಂಬೈ ಇಂಡಿಯನ್ಸ್
ಮುಂಬೈ ಇಂಡಿಯನ್ಸ್

ಸನ್​​ರೈಸರ್ಸ್​ ಹೈದರಾಬಾದ್​ ತಂಡ ತನ್ನ ಬ್ಯಾಟಿಂಗ್ ವೈಫಲ್ಯವನ್ನ ಮುಂದುವರಿಸಿದೆ. ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸಂಪೂರ್ಣ ಬ್ಯಾಟೊಂಗ್ ವೈಫಲ್ಯ ಅನುಭವಿಸಿ 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 143 ರನ್​ಗಳಿಸಿದೆ. 100 ರನ್​​ಗಳಿಸುವುದು ಅನುಮಾನ ಎನ್ನುವಂತಿದ್ದ ಸಂದರ್ಭದಲ್ಲಿ ಕ್ಲಾಸೆನ್ ಹಾಗೂ ಕನ್ನಡಿಗ ಅಭಿನವ್ ಮನೋಹರ್ 99 ರನ್​​ಗಳ ಜೊತೆಯಾಟ ನಡೆಸಿ ಅಲ್ಪಮೊತ್ತಕ್ಕೆ ಆಲೌಟ್ ಆಗದಂತೆ ತಡೆದರು. ಆದರೂ ಈ ಮೈದಾನದಲ್ಲಿ ಈ ಸ್ಕೋರ್ ಚೇಸ್ ಮಾಡುವುದು ಮುಂಬೈನಂತಹ ಬಲಿಷ್ಠ ತಂಡಕ್ಕೆ ಸುಲಭದ ಗುರಿಯಾಗಿದೆ.

ಟಾಸ್​ ಸೋತು ಬ್ಯಾಟಿಂಗ್ ಮಾಡಿದ ಸನ್​​ರೈಸರ್ಸ್ ಹೈದರಾಬಾದ್ ತಂಡ ದಾರುಣ ವೈಫಲ್ಯ ಅನುಭವಿಸಿತು. ತಂಡದ ಮೊತ್ತ 35 ರನ್​ಗಳಾಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು. ಸ್ಫೋಟಕ ಆಟಗಾರ ಟ್ರಾವಿಸ್ ಹೆಡ್​ ಇಂದು ಸೊನ್ನೆ ಸುತ್ತಿದರು. ಮತ್ತೊಬ್ಬ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ 8ರನ್​​ಗಳಿಗೆ ಸೀಮಿತವಾದರು. ಇಬ್ಬರು ಆರಂಭಿಕರು ಟ್ರೆಂಟ್ ಬೌಲ್ಟ್​​ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಇಶಾನ್ ಕಿಶನ್ 4 ಎಸೆತಗಳಲ್ಲಿ ಕೇವಲ 1 ರನ್​ಗಳಿಸಿ ಚಾಹರ್ ಬೌಲಿಂಗ್​​ನಲ್ಲಿ ಕೀಪರ್​ಗೆ ಕ್ಯಾಚ್ ನೀಡಿ ಔಟ್ ಆದರು. ಆದರೆ ಚೆಂಡು ಬ್ಯಾಟ್​​ಗೆ ಟಚ್​ ಆಗದಿರುವುದು ಅಲ್ಟ್ರಾ ಎಡ್ಜ್​​ನಲ್ಲಿ ಕಂಡುಬಂದಿತು.

ನಂತರ ಬಂದ ನಿತೀಶ್ ಕುಮಾರ್ ರೆಡ್ಡಿ 6 ಎಸೆತಗಳಲ್ಲಿ ಕೇವಲ 2 ರನ್​ಗಳಿಸಿ ಚಾಹರ್ ಬೌಲಿಂಗ್​​ನಲ್ಲಿ ಸ್ಯಾಂಟ್ನರ್​ಗೆ ಕ್ಯಾಚ್ ನೀಡಿ ಔಟ್ ಆದರು. 6ನೇ ಕ್ರಮಾಂಕದಲ್ಲಿ ಬಂದ ಅನಿಕೇತ್ ವರ್ಮಾ ಕೇವಲ 12 ರನ್​ಗಳಿಸಿ ಹಾರ್ದಿಕ್ ಪಾಂಡ್ಯ ಬೌಲಿಂಗ್​​ನಲ್ಲಿ ರಿಕಲ್ಟನ್​ಗೆ ಕ್ಯಾಚ್ ನೀಡಿದರು. ಹೈದರಾಬಾದ್ ತಂಡ 100 ರನ್​​ಗಳಿಸುವುದು ಅಸಾಧ್ಯ ಎನ್ನುವ ಸಂದರ್ಭದಲ್ಲಿ ಜೊತೆಯಾದ ಕ್ಲಾಸೆನ್ ಹಾಗೂ ಅಭಿನವ್ ಮನೋಹರ್ 6ನೇ ವಿಕೆಟ್​​ಗೆ 99 ರನ್​​ಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನ 100ರ ಗಡಿ ದಾಟಿಸಿದರು. ಕ್ಲಾಸೆನ್ 44 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್​ಗಳ ನೆರವಿನಿಂದ 71 ರನ್​ಗಳಿಸಿ 19ನೇ ಓವರ್​​​ನಲ್ಲಿ ಬುಮ್ರಾ ಬೌಲಿಂಗ್​​ನಲ್ಲಿ ತಿಲಕ್​ ವರ್ಮಾಗೆ ಕ್ಯಾಚ್ ನೀಡಿ ಔಟ್ ಆದರು. ಅಭಿನವ್​ ಮನೋಹರ್ 37 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್​ಗಳ ನೆರವಿನಿಂದ 43 ರನ್​ಗಳಿಸಿ ಕೊನೆಯ ಓವರ್​​ನಲ್ಲಿ ಬೌಲ್ಟ್​ ಬೌಲಿಂಗ್​​ನಲ್ಲಿ ಕ್ಲೀನ್ ಬೌಲ್ಡ್ ಆದರು. ಒಟ್ಟಾರೆ 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 143 ರನ್​ಗಳಿಸಿದೆ.

ಟ್ರೆಂಟ್ ಬೌಲ್ಟ್​ 26 ರನ್​ ನೀಡಿ 4 ವಿಕೆಟ್​ ಪಡೆದು ಮಿಂಚಿದರು. ದೀಪಕ್ ಚಾಹರ್ 12ಕ್ಕೆ2 ಹಾಗೂ ಹಾರ್ದಿಕ್ ಪಾಂಡ್ಯ 31ಕ್ಕೆ1 ವಿಕೆಟ್ ಪಡೆದು ಮಿಂಚಿದರು.