Last Updated:
ಮುಂಬೈ ಇಂಡಿಯನ್ಸ್, ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 7 ವಿಕೆಟ್ಗಳ ಗೆಲುವು ಸಾಧಿಸಿದೆ. 144 ರನ್ಗಳ ಗುರಿ ಮುಂಬೈ 15.4 ಓವರ್ಗಳಲ್ಲಿ ತಲುಪಿತು. ರೋಹಿತ್ ಶರ್ಮಾ 70, ಸೂರ್ಯಕುಮಾರ್ ಯಾದವ್ 40 ರನ್ಗಳಿಸಿದರು.
ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಅತಿಥೇಯ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸಂಪೂರ್ಣ ವೈಫಲ್ಯ ಸಾಧಿಸಿ 7 ವಿಕೆಟ್ಗಳ ಗೆಲುವು ಸಾಧಿಸಿದೆ. ಹೈದರಾಬಾದ್ ತಂಡ ನೀಡಿದ್ದ 144 ರನ್ಗಳ ಗುರಿಯನ್ನ ಮುಂಬೈ ಇಂಡಿಯನ್ಸ್ 15.4 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಸುಲಭವಾಗಿ ಗುರಿ ತಲುಪಿದೆ. ಅನುಭವಿ ಬ್ಯಾಟ್ಸ್ಮನ್ 46 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ಗಳ ಸಹಿತ 70 ರನ್ ಹಾಗೂ ಸೂರ್ಯಕುಮಾರ್ ಯಾದವ್ 19 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಹಿತ ಅಜೇಯ 40 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.
144 ರನ್ಗಳ ಸುಲಭ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಪವರ್ ಪ್ಲೇನ 2ನೇ ಓವರ್ನಲ್ಲಿ ರಯಾನ್ ರಿಕಲ್ಟನ್(11) ಕಳೆದುಕೊಂಡಿತು. ಆದರೆ 2ನೇ ವಿಕೆಟ್ ಜೊತೆಯಾಟದಲ್ಲಿ ವಿಲ್ ಜಾಕ್ಸ್ ಹಾಗೂ ರೋಹಿತ್ ಶರ್ಮಾ 64 ರನ್ಗಳ ಜೊತೆಯಾಟ ನೀಡಿದರು. ವಿಲ್ ಜಾಕ್ಸ್ 19 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 22 ರನ್ಗಳಿಸಿದರು. ಆದರೆ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ 3ನೇ ವಿಕೆಟ್ ಜೊತೆಯಾಟದಲ್ಲಿ 32 ಎಸೆತಗಳಲ್ಲಿ 53 ರನ್ಗಳ ಜೊತೆಯಾಟ ನೀಡಿದರು. ರೋಹಿತ್ ಶರ್ಮಾ ಗೆಲುವಿಗೆ 14 ರನ್ಗಳ ಅಗತ್ಯವಿದ್ದಾಗ ಔಟದ್ ಮಾಲಿಂಗ್ ಬೌಲಿಂಗ್ನಲ್ಲಿ ಅಭಿಷೇಕ್ ಶರ್ಮಾಗೆ ಕ್ಯಾಚ್ ನೀಡಿ ಔಟ್ ಆದರು. ಅವರು 46 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಸಹಿತ 70 ರನ್ಗಳಿಸಿದರು, ಸೂರ್ಯಕುಮಾರ್ ಯಾದವ್ 19 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಹಿತ ಅಜೇಯ 40 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡ ದಾರುಣ ವೈಫಲ್ಯ ಅನುಭವಿಸಿತು. ತಂಡದ ಮೊತ್ತ 35 ರನ್ಗಳಾಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು. ಸ್ಫೋಟಕ ಆಟಗಾರ ಟ್ರಾವಿಸ್ ಹೆಡ್ ಇಂದು ಸೊನ್ನೆ ಸುತ್ತಿದರು. ಮತ್ತೊಬ್ಬ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ 8ರನ್ಗಳಿಗೆ ಸೀಮಿತವಾದರು. ಇಬ್ಬರು ಆರಂಭಿಕರು ಟ್ರೆಂಟ್ ಬೌಲ್ಟ್ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಇಶಾನ್ ಕಿಶನ್ 4 ಎಸೆತಗಳಲ್ಲಿ ಕೇವಲ 1 ರನ್ಗಳಿಸಿ ಚಾಹರ್ ಬೌಲಿಂಗ್ನಲ್ಲಿ ಕೀಪರ್ಗೆ ಕ್ಯಾಚ್ ನೀಡಿ ಔಟ್ ಆದರು. ಆದರೆ ಚೆಂಡು ಬ್ಯಾಟ್ಗೆ ಟಚ್ ಆಗದಿರುವುದು ಅಲ್ಟ್ರಾ ಎಡ್ಜ್ನಲ್ಲಿ ಕಂಡುಬಂದಿತು.
ನಂತರ ಬಂದ ನಿತೀಶ್ ಕುಮಾರ್ ರೆಡ್ಡಿ 6 ಎಸೆತಗಳಲ್ಲಿ ಕೇವಲ 2 ರನ್ಗಳಿಸಿ ಚಾಹರ್ ಬೌಲಿಂಗ್ನಲ್ಲಿ ಸ್ಯಾಂಟ್ನರ್ಗೆ ಕ್ಯಾಚ್ ನೀಡಿ ಔಟ್ ಆದರು. 6ನೇ ಕ್ರಮಾಂಕದಲ್ಲಿ ಬಂದ ಅನಿಕೇತ್ ವರ್ಮಾ ಕೇವಲ 12 ರನ್ಗಳಿಸಿ ಹಾರ್ದಿಕ್ ಪಾಂಡ್ಯ ಬೌಲಿಂಗ್ನಲ್ಲಿ ರಿಕಲ್ಟನ್ಗೆ ಕ್ಯಾಚ್ ನೀಡಿದರು. ಹೈದರಾಬಾದ್ ತಂಡ 100 ರನ್ಗಳಿಸುವುದು ಅಸಾಧ್ಯ ಎನ್ನುವ ಸಂದರ್ಭದಲ್ಲಿ ಜೊತೆಯಾದ ಕ್ಲಾಸೆನ್ ಹಾಗೂ ಅಭಿನವ್ ಮನೋಹರ್ 6ನೇ ವಿಕೆಟ್ಗೆ 99 ರನ್ಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನ 100ರ ಗಡಿ ದಾಟಿಸಿದರು. ಕ್ಲಾಸೆನ್ 44 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ಗಳ ನೆರವಿನಿಂದ 71 ರನ್ಗಳಿಸಿ 19ನೇ ಓವರ್ನಲ್ಲಿ ಬುಮ್ರಾ ಬೌಲಿಂಗ್ನಲ್ಲಿ ತಿಲಕ್ ವರ್ಮಾಗೆ ಕ್ಯಾಚ್ ನೀಡಿ ಔಟ್ ಆದರು. ಅಭಿನವ್ ಮನೋಹರ್ 37 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ಗಳ ನೆರವಿನಿಂದ 43 ರನ್ಗಳಿಸಿ ಕೊನೆಯ ಓವರ್ನಲ್ಲಿ ಬೌಲ್ಟ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. ಒಟ್ಟಾರೆ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 143 ರನ್ಗಳಿಸಿದೆ.
ಟ್ರೆಂಟ್ ಬೌಲ್ಟ್ 26 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು. ದೀಪಕ್ ಚಾಹರ್ 12ಕ್ಕೆ2, ಬುಮ್ರಾ 39ಕ್ಕೆ1 ಹಾಗೂ ಹಾರ್ದಿಕ್ ಪಾಂಡ್ಯ 31ಕ್ಕೆ1 ವಿಕೆಟ್ ಪಡೆದು ಮಿಂಚಿದರು.
April 23, 2025 11:02 PM IST