ಮೈದಾನದ ರಿಪೋರ್ಟ್
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದ ಪಿಚ್ ವರದಿಯ ಕುರಿತು ಹೇಳುವುದಾದರೆ, ಇಲ್ಲಿ ಇಲ್ಲಿಯವರೆಗೆ 81 ಐಪಿಎಲ್ ಪಂದ್ಯಗಳು ನಡೆದಿವೆ. ಇವುಗಳಲ್ಲಿ, ಮೊದಲು ಬ್ಯಾಟಿಂಗ್ ಮಾಡಿದ ತಂಡ 35 ಪಂದ್ಯಗಳಲ್ಲಿ ಗೆದ್ದಿದ್ದರೆ, ಗುರಿ ಬೆನ್ನಟ್ಟಿದ ತಂಡ 45 ಪಂದ್ಯಗಳಲ್ಲಿ ಗೆದ್ದಿದೆ. ಇಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 166 ಮತ್ತು ಎರಡನೇ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 155 ರನ್ಗಳಾಗಿದೆ. ಕಳೆದ ಋತುವಿನಲ್ಲಿ ರನ್ಗಳ ಮಳೆಯೇ ಹರಿದಿತ್ತಾದರೂ ಈ ಋತುವಿನಲ್ಲಿ ಕೇವಲ 2 ಪಂದ್ಯಗಳಲ್ಲಿ ಮಾತ್ರ 200ರ ಗಡಿ ದಾಟಿದೆ. ಆದರೂ ಈ ಮೈದಾನ ಬ್ಯಾಟರ್ಗಳಿಗೆ ಹೇಳಿ ಮಾಡಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಇದನ್ನೂ ಓದಿ: ಲಖನೌ ಮಾಲೀಕನಿಗೆ ತವರಿನ ಅಭಿಮಾನಿಗಳ ಮುಂದೆ ಕೂಲ್ ಆಗಿಯೇ ತಿರುಗೇಟು ಕೊಟ್ಟ ರಾಹುಲ್!
4 ಪಂದ್ಯಗಳಲ್ಲಿ 2 ಗೆಲುವು-2 ಸೋಲು
ಈ ಋತುವಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಏಳು ಪಂದ್ಯಗಳನ್ನು ಆಡಿದ್ದು, ಎರಡರಲ್ಲಿ ಗೆದ್ದಿದೆ. ಈ ಮೈದಾನದಲ್ಲಿ SRH ಎರಡೂ ಪಂದ್ಯಗಳನ್ನು ಗೆದ್ದಿದೆ.ಹಾಗಾಗಿ ಈ ಪಂದ್ಯ ಗೆಲ್ಲುವುದು ಮುಂಬೈಗೆ ಕಷ್ಟವಾಗಬಹುದು. ಹಾಗೆಯೇ ಈ ಋತುವಿನಲ್ಲಿ ಎಸ್‌ಆರ್‌ಹೆಚ್ ಇಲ್ಲಿ ಎರಡು ಪಂದ್ಯಗಳನ್ನು ಸೋತಿದೆ. ನಾವು ಈ ಪಿಚ್ ಅನ್ನು ಬೌಲರ್ ದೃಷ್ಟಿಕೋನದಿಂದ ನೋಡಿದರೆ, ವೇಗದ ಬೌಲರ್‌ಗಳು ಇಲ್ಲಿ ಪ್ರಾಬಲ್ಯ ಸಾಧಿಸುತ್ತಾರೆ. ಐಪಿಎಲ್‌ನಲ್ಲಿ ಇಲ್ಲಿ ಶೇ 71 ಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ವೇಗದ ಬೌಲರ್‌ಗಳು ಪಡೆದಿದ್ದಾರೆ. ಆದರೆ ಸ್ಪಿನ್ನರ್‌ಗಳು ಶೇಕಡಾ 29 ಕ್ಕಿಂತ ಕಡಿಮೆ ವಿಕೆಟ್‌ಗಳನ್ನು ಪಡೆದಿದ್ದಾರೆ. ಇದು ಸ್ಪಿನ್ನರ್ಗಳಿಗೆ ಸೂಕ್ತವಾದ ವಿಕೆಟ್ ಅಲ್ಲ. ಹಾಗಾಗಿ ಮತ್ತೊಂದು ರನ್ಗಳ ಉತ್ಸವವನ್ನ ಕಾಣಬಹುದಾಗಿದೆ.
ಹೈದರಾಬಾದ್‌ನ ಪ್ಲೇಯಿಂಗ್ XI
ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅನಿಕೇತ್ ವರ್ಮಾ, ಪ್ಯಾಟ್ ಕಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಜಯದೇವ್ ಉನಾದ್ಕತ್, ಜೀಶನ್ ಅನ್ಸಾರಿ, ಇಶಾನ್ ಮಾಲಿಂಗ
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ XI
ರಯಾನ್ ರಿಕಲ್ಟನ್ (ವಿಕೆಟ್ ಕೀಪರ್), ವಿಲ್ ಜಾಕ್ಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹಾರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ, ವಿಘ್ನೇಶ್ ಪುತ್ತೂರು
ಎರಡೂ ತಂಡಗಳ ಪ್ರಭಾವಿ ಆಟಗಾರರು
SRH: ಅಭಿನವ್ ಮನೋಹರ್, ಸಚಿನ್ ಬೇಬಿ, ರಾಹುಲ್ ಚಹಾರ್, ವಿಯಾನ್ ಮುಲ್ಡರ್, ಮೊಹಮ್ಮದ್ ಶಮಿ
MI: ರೋಹಿತ್ ಶರ್ಮಾ, ಕಾರ್ಬಿನ್ ಬಾಷ್, ರಾಜ್ ಬಾವಾ, ಸತ್ಯನಾರಾಯಣ ರಾಜು, ರಾಬಿನ್ ಮಿಂಜ್
April 23, 2025 7:12 PM IST