Last Updated:
ಸುಮಾರು ನಾಲ್ಕರಿಂದ ಐದು ಅಡಿಗೆ ಭಟ್ಟರು ಶ್ರೀನಿವಾಸ ಕಲ್ಯಾಣೋತ್ಸವಕ್ಕಾಗಿ ಅಂದಾಜು ಮೂವತ್ತು ಸಾವಿರ ಲಡ್ಡುಗಳನ್ನು ತಯಾರಿಸಿದ್ದು, ಈ ಲಡ್ಡುಗಳನ್ನು ಲಡ್ಡು ಪ್ರಸಾದ ಸೇವೆ ಮಾಡಿಸಿದ ಭಕ್ತಾಧಿಗಳಿಗೆ ಹಂಚಲಾಗುತ್ತದೆ.
ದಕ್ಷಿಣಕನ್ನಡ: ತಿರುಪತಿ(Tirupati) ಎಂದಾಕ್ಷಣ ನೆನಪಾಗೋದು ಅಲ್ಲಿನ ಪ್ರಮುಖ ಪ್ರಸಾದವಾದ ಲಡ್ಡು. ವೆಂಕಟರಮಣ ಸ್ವಾಮಿಯ ಸೇವೆ ಮಾಡಿಸುವ ಭಕ್ತಾಧಿಗಳು ಈ ಲಡ್ಡು ಪ್ರಸಾದವನ್ನು ಮರೆಯದೇ ತೆಗೆದುಕೊಳ್ಳೋದು ಸಾಮಾನ್ಯ ಸಂಗತಿ. ತಿರುಪತಿ ಲಡ್ಡನ್ನು ಮಾಡುವ ಪ್ರಕ್ರಿಯೆಯನ್ನು ನೋಡಲು ಸಿಗೋದು ಅಪರೂಪವೇ. ಪುತ್ತೂರಿನಲ್ಲಿ ಡಿ.28, 29 ರಂದು ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವದ(Srinivasa Kalyanotsava) ಹಿನ್ನಲೆಯಲ್ಲಿ ಪುತ್ತೂರಿನಲ್ಲೇ(Puttur) ತಿರುಪತಿ ಲಡ್ಡುಗಳ ತಯಾರಿ ಪ್ರಕ್ರಿಯೆ ಆರಂಭಗೊಂಡಿದೆ. ಶ್ರೀನಿವಾಸ ಸ್ವಾಮಿಯ ಈ ಕಲ್ಯಾಣೋತ್ಸವದಲ್ಲಿ ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಭಾಗವಹಿಸುವ ಹಿನ್ನಲೆಯಲ್ಲಿ ಭಕ್ತರಿಗೆ(Devotees) ನೀಡಲು ಸಾವಿರಾರು ಸಂಖ್ಯೆಯ ತಿರುಪತಿ ಲಡ್ಡುಗಳ ತಯಾರಿ ಪ್ರಕ್ರಿಯೆ ಭರದಿಂದ ಸಾಗುತ್ತಿದೆ.
ಇಂದು – ನಾಳೆ ಶ್ರೀನಿವಾಸ ಕಲ್ಯಾಣೋತ್ಸವ
ಪುತ್ತಿಲ ಪರಿವಾರ ಟ್ರಸ್ಟ್ ಮೂಲಕ ಪುತ್ತೂರಿನಲ್ಲಿ ಎರಡನೇ ಬಾರಿಗೆ ಶ್ರೀನಿವಾಸ ಕಲ್ಯಾಣೋತ್ಸವವನ್ನು ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ದೇವರಗದ್ದೆಯಲ್ಲಿ ಆಯೋಜಿಸಲಾಗಿದೆ. ಡಿ.28 ಮತ್ತು 29 ರಂದು ನಡೆಯುವ ಈ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಆಯೋಜಕರ ಪ್ರಕಾರ ಈ ಬಾರಿ ಸುಮಾರು 30 ರಿಂದ 40 ಸಾವಿರ ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ತಿರುಪತಿ ವೆಂಕಟರಮಣ ದೇವರ ಪ್ರಮುಖ ಪ್ರಸಾದವಾದ ಲಡ್ಡುಗಳ ತಯಾರಿಕೆಯನ್ನು ಪುತ್ತೂರಿನಲ್ಲೇ ತಯಾರಿಸಿ ಭಕ್ತರಿಗೆ ಹಂಚಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ.
ಇದನ್ನೂ ಓದಿ: Robotic Butterfly Show: ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ರೋಬೋಟಿಕ್ ಬಟರ್ ಫ್ಲೈ ಶೋ!
ತಿರುಪತಿ ಮಾದರಿಯಲ್ಲೇ ಲಡ್ಡು ತಯಾರಿ
ತಿರುಪತಿ ತಿರುಮಲ ಕ್ಷೇತ್ರಕ್ಕೆ ಸಂಬಂಧಪಟ್ಟ ತಂಡ ಈ ಶ್ರೀನಿವಾಸ ಕಲ್ಯಾಣೋತ್ಸವವನ್ನು ನಡೆಸಿಕೊಡುತ್ತಿದ್ದು, ಇದೇ ತಂಡಕ್ಕೆ ಸಂಬಂಧಪಟ್ಟ ಅಡುಗೆ ಭಟ್ಟರು ಈ ಲಡ್ಡುಗಳನ್ನು ತಯಾರಿಸಲು ಆರಂಭಿಸಿದ್ದಾರೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಪಾಕಶಾಲೆಯಲ್ಲೇ ಈ ಲಡ್ಡುಗಳ ತಯಾರಿ ಪ್ರಕ್ರಿಯೆ ಆರಂಭಗೊಂಡಿದ್ದು, ತಿರುಪತಿ ತಿರುಮಲದಲ್ಲಿ ಯಾವ ರೀತಿಯಲ್ಲಿ ಲಡ್ಡು ತಯಾರಿಸಲಾಗುತ್ತದೋ, ಅದೇ ರೀತಿಯಲ್ಲಿ ಈ ಲಡ್ಡುಗಳನ್ನು ಇಲ್ಲಿಯೂ ತಯಾರಿಸಲಾಗುತ್ತಿದೆ. ತಿರುಪತಿಯಲ್ಲಿ ಲಡ್ಡು ತಯಾರಿಕೆ ಸಂದರ್ಭದಲ್ಲಿ ಬಳಸುವ ಎಲ್ಲಾ ವಸ್ತುಗಳನ್ನು ಇಲ್ಲಿ ತಯಾರಿಸುವ ಲಡ್ಡಿನಲ್ಲೂ ಹಾಕಲಾಗುತ್ತಿದ್ದು, ತಿರುಮಲದಲ್ಲಿ ಸಿಗುವ ಲಡ್ಡಿನ ಅದೇ ಸ್ವಾದ ಈ ಲಡ್ಡಿನಲ್ಲೂ ಇರಲಿದೆ. ಸುಮಾರು ನಾಲ್ಕರಿಂದ ಐದು ಅಡಿಗೆ ಭಟ್ಟರು ಶ್ರೀನಿವಾಸ ಕಲ್ಯಾಣೋತ್ಸವಕ್ಕಾಗಿ ಅಂದಾಜು ಮೂವತ್ತು ಸಾವಿರ ಲಡ್ಡುಗಳನ್ನು ತಯಾರಿಸಿದ್ದು, ಈ ಲಡ್ಡುಗಳನ್ನು ಲಡ್ಡು ಪ್ರಸಾದ ಸೇವೆ ಮಾಡಿಸಿದ ಭಕ್ತಾಧಿಗಳಿಗೆ ಹಂಚಲಾಗುತ್ತದೆ.
ಕಳೆದ ವರ್ಷವೂ ಪುತ್ತಿಲ ಪರಿವಾರ ಟ್ರಸ್ಟ್ ನೇತೃತ್ವದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವನ್ನು ಹಮ್ಮಿಕೊಳ್ಳಲಾಗಿತ್ತು. ಭಕ್ತರ ಬೇಡಿಕೆಯ ಹಿನ್ನಲೆಯಲ್ಲಿ ಈ ಬಾರಿಯೂ ಶ್ರೀನಿವಾಸ ಕಲ್ಯಾಣೋತ್ಸವವನ್ನು ಪುತ್ತೂರಿನ ಭಕ್ತರಿಗೆ ನೋಡುವ ಅವಕಾಶವನ್ನು ಪರಿವಾರ ನೀಡಿದೆ.
Dakshina Kannada,Karnataka
December 28, 2024 2:35 PM IST