Last Updated:
ಅಂಗಡಿಗಳಿಗೆ ಬರುವ ಗೋಲಿಸೋಡಾವನ್ನು 12 ಫ್ಲೇವರ್‌ಗಳಲ್ಲಿ ಮತ್ತು ಸಭೆ ಸಮಾರಂಭಕ್ಕೆ ವೆಲ್ ಕಂ ಡ್ರಿಂಕ್ಸ್ ಆಗಿ ಇರುವ ಗೋಲಿಸೋಡಾವನ್ನು 20 ಫ್ಲೇವರ್ ಗಳಲ್ಲಿ ತಯಾರಿಸುತ್ತಿದ್ದಾರೆ. ಅಂಗಡಿಗಳಲ್ಲಿ ಇದೀಗ ಗೋಲಿಸೋಡಾಕ್ಕೆ ಡಿಮ್ಯಾಂಡ್ ಹೆಚ್ಚಿದ್ದು, ಬೇಡಿಕೆಯಷ್ಟು ಪೂರೈಸಲು ಸಾಲುತ್ತಿಲ್ಲ.
ದಕ್ಷಿಣ ಕನ್ನಡ: ಮೂರು ದಶಕಗಳ ಹಿಂದೆ ತಂಪು ಪಾನೀಯ(Cool Drinks) ಎಂದರೆ ಅದು ಗೋಲಿಸೋಡಾ(Goli Soda). ಸ್ಥಳೀಯವಾಗಿ ತಯಾರಾಗುತ್ತಿದ್ದ ಗೋಲಿಸೋಡಾಕ್ಕೆ ವಿಪರೀತ ಡಿಮ್ಯಾಂಡ್(Demand) ಇತ್ತು. ಆಗಿನ ಕಾಲದ ಗೋಲಿಸೋಡಾ ಕ್ರಮೇಣ ನೇಪಥ್ಯಕ್ಕೆ ಸರಿದಿತ್ತು. ಆದರೆ ಮೂರು ದಶಕಗಳ ಬಳಿಕ ಮತ್ತೆ ಈ ಗೋಲಿಸೋಡಾಕ್ಕೆ ಡಿಮ್ಯಾಂಡ್ ಬಂದಿದೆ.
ಗೋಲಿಸೋಡಾ ಮರೆತ ಕಾಲದಲ್ಲಿ ಮಂಗಳೂರಿನ ವಿನಾಯಕ ಪೈ ಅವರು ಎಂಜಾಯ್ ಎಂಬ ಬ್ರಾಂಡ್‌ನಲ್ಲಿ ಗೋಲಿಸೋಡಾದ ಉತ್ಪಾದನೆ ಆರಂಭಿಸಿದರು. ನಗರದ ಬಂದರ್‌ನಲ್ಲಿ ಅವರು ತಮ್ಮ ಫ್ಯಾಕ್ಟರಿಯನ್ನು ಆರಂಭಿಸಿ ಗೋಲಿಸೋಡಾ ಉತ್ಪಾದನೆ ಮಾಡಿದರು.
ಶುದ್ದ ನೀರನ್ನು ಬಳಸಿ ಉತ್ತರ ಪ್ರದೇಶದಿಂದ ತರಿಸಲಾದ ಗೋಲಿಸೋಡಾದ ಬಾಟಲಿಗೆ ಫ್ಲೇವರ್ ಗಳನ್ನು ಹಾಕಿ ಅದನ್ನು ಯಂತ್ರದ ಮೂಲಕ ನೀರು ಮತ್ತು ಗ್ಯಾಸ್ ತುಂಬಿಸಿ ಈ ಗೋಲಿಸೋಡಾ ತಯಾರಿಕೆ ಮಾಡುತ್ತಿದ್ದಾರೆ. ಇದೀಗ ಅವರು ಸುಮಾರು 20 ಬಗೆಯ ಫ್ಲೇವರ್‌ಗಳಲ್ಲಿ ಗೋಲಿಸೋಡಾವನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ.
ಅಂಗಡಿಗಳಿಗೆ ಬರುವ ಗೋಲಿಸೋಡಾವನ್ನು 12 ಫ್ಲೇವರ್‌ಗಳಲ್ಲಿ ಮತ್ತು ಸಭೆ ಸಮಾರಂಭಕ್ಕೆ ವೆಲ್ ಕಂ ಡ್ರಿಂಕ್ಸ್ ಆಗಿ ಇರುವ ಗೋಲಿಸೋಡಾವನ್ನು 20 ಫ್ಲೇವರ್ ಗಳಲ್ಲಿ ತಯಾರಿಸುತ್ತಿದ್ದಾರೆ. ಅಂಗಡಿಗಳಲ್ಲಿ ಇದೀಗ ಗೋಲಿಸೋಡಾಕ್ಕೆ ಡಿಮ್ಯಾಂಡ್ ಹೆಚ್ಚಿದ್ದು, ಬೇಡಿಕೆಯಷ್ಟು ಪೂರೈಸಲು ಸಾಲುತ್ತಿಲ್ಲ.
ಇನ್ನು ಸಭೆ-ಸಮಾರಂಭಗಳಲ್ಲಿ ಗೋಲಿಸೋಡಾವನ್ನು ವೆಲ್ ಕಂ ಡ್ರಿಂಕ್ಸ್ ಆಗಿ ನೀಡಲು ಶುರು ಮಾಡಿರುವುದರಿಂದ ಗೋಲಿಸೋಡಾಕ್ಕೆ ಡಿಮ್ಯಾಂಡ್ ಹೆಚ್ಚಿದೆ.
Dakshina Kannada,Karnataka
May 07, 2025 12:21 PM IST