Last Updated:
ಹೌದು, ಭಾರತದ ಟಿ20 ನಾಯಕ ಮಂಗಳವಾರ ತಮ್ಮ ಪತ್ನಿ ದೇವಿಶಾ ಜೊತೆ ಜೊತೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದಾರೆ.
ಭಾರತದ ಟಿ20 ನಾಯಕ ಸೂರ್ಯಕುಮಾರ್ ಯಾದವ್(Indiaʼs T20 Captain Suryakumar Yadav) ಕರ್ನಾಟಕಕ್ಕೆ ಭೇಟಿ ನೀಡುವುದು ಹೊಸತೇನಲ್ಲ. ಅದರಲ್ಲೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಧಾರ್ಮಿಕ ಕ್ಷೇತ್ರಗಳಿಗೆ ಆಗ್ಗಿಂದಾಗ್ಗೆ ಬರುತ್ತಲೇ ಇರುತ್ತಾರೆ. ಈ ಬಾರಿಯೂ ಕೂಡ ತಮ್ಮ ಪತ್ನಿ ಜೊತೆ ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ(Kukke Subrahmanya) ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.
ಹೌದು, ಭಾರತದ ಟಿ20 ನಾಯಕ ಮಂಗಳವಾರ ತಮ್ಮ ಪತ್ನಿ ದೇವಿಶಾ ಜೊತೆ ಜೊತೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಶ್ರೀ ಸಂಪುತ್ ನರಸಿಂಹಸ್ವಾಮಿ ಸುಬ್ರಮಣ್ಯ ಮಠದಲ್ಲಿ ನಡೆದ ʻಆಶ್ಲೇಷಾ ಬಲಿ ಸೇವಾʼ ಮತ್ತು ʻನಾಗ ಪ್ರತಿಷ್ಠಾಪನಾ ಪೂಜೆʼಯಲ್ಲಿ ದಂಪತಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ: Bengaluru Jobs: ನಾಳೆ ಬೆಂಗಳೂರಿನಲ್ಲಿ ಉದ್ಯೋಗ ಸಂದರ್ಶನ- ತಿಂಗಳಿಗೆ ಒಂದೂವರೆ ಲಕ್ಷ ಸಂಬಳ
ಪೂಜೆ ಬಳಿಕ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಸೂರ್ಯಕುಮಾರ್ ದಂಪತಿಗೆ ದೇವಾಲಯದ ಕಚೇರಿಯಲ್ಲಿ ಸಾಂಪ್ರದಾಯಿಕವಾಗಿ ಶಾಲು ಹೊದಿಸಿ ಗೌರವಾನ್ವಿತವಾಗಿ ಸನ್ಮಾನಿಸಲಾಯಿತು.
ದೇವಾಲಯದ ಎಕ್ಸಿಕ್ಯೂಟಿವ್ ಆಫೀಸರ್ ಅಯ್ಯಪ್ಪ ಸುತಗುಂಡಿ, AEO ಯೇಸುರಾಜ್ ಮತ್ತು ದೇವಾಲಯದ ಇತರೆ ಸಿಬ್ಬಂದಿ ಈ ಸಂದರ್ಭದಲ್ಲಿ ಭಾಗಿಯಾಗಿದ್ದರು.
Dakshina Kannada,Karnataka
November 20, 2024 6:13 PM IST