Team India: ಗಿಲ್ ನಾಯಕತ್ವದಲ್ಲೂ ಬದಲಾಗುತ್ತಿಲ್ಲ ಭಾರತದ ಅದೃಷ್ಟ! ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಟಾಸ್ ಸೋತ ಟೀಮ್ ಇಂಡಿಯಾ | India’s Toss Losing Streak Continues: 18th Straight Loss Against Australia in Sydney | ಕ್ರೀಡೆ

Team India: ಗಿಲ್ ನಾಯಕತ್ವದಲ್ಲೂ ಬದಲಾಗುತ್ತಿಲ್ಲ ಭಾರತದ ಅದೃಷ್ಟ! ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಟಾಸ್ ಸೋತ ಟೀಮ್ ಇಂಡಿಯಾ | India’s Toss Losing Streak Continues: 18th Straight Loss Against Australia in Sydney | ಕ್ರೀಡೆ

Last Updated:



ಇದಕ್ಕೂ ಮುನ್ನ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಟಾಸ್ ಸೋಲುತ್ತಲೇ ಇತ್ತು, ಆದರೆ ಹೊಸ ನಾಯಕ ಶುಭ್​ಮನ್ ಗಿಲ್ ಆಗಮನದ ನಂತರವೂ ಅದೃಷ್ಟ ಬದಲಾಗಲಿಲ್ಲ.

ಭಾರತ ತಂಡ
ಭಾರತ ತಂಡ

ಏಕದಿನ  ಕ್ರಿಕೆಟ್​ನಲ್ಲಿ ಭಾರತ ತಂಡಕ್ಕೆ (Team India) ದುರಾದೃಷ್ಟ ಕಾಡುತ್ತಿದೆ. ಕಳೆದ ಎರಡು ವರ್ಷಗಳಿಂದ ಒಂದು ಅಥವಾ ಎರಡು ಅಲ್ಲ ಸತತ 18 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಒಮ್ಮೆಯೂ ಟಾಸ್ ಗೆಲ್ಲಲು ಸಾಧ್ಯವಾಗಲಿಲ್ಲ. 2023ರ ನವೆಂಬರ್ 19ರಂದು ನಡೆದ ಏಕದಿನ ವಿಶ್ವಕಪ್ ಫೈನಲ್ (World Cup) ನೊಂದಿಗೆ ಪ್ರಾರಂಭವಾದ ಭಾರತದ ಟಾಸ್ ಸೋಲು ನಿರಂತರವಾಗಿ ಮುಂದುವರೆದಿದೆ. ಭಾರತ ತಂಡ ಸತತ 18ನೇ ಬಾರಿಗೆ ಟಾಸ್ ಸೋತಿದ್ದು, ಇದು ವಿಶ್ವ ದಾಖಲೆಯಾಗಿದೆ.

ರೋಹಿತ್ ನಾಯಕತ್ವದಲ್ಲಿ ಶುರುವಾದ ಸೋಲಿನ ಸರಣಿ

ಇದಕ್ಕೂ ಮುನ್ನ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಟಾಸ್ ಸೋಲುತ್ತಲೇ ಇತ್ತು, ಆದರೆ ಹೊಸ ನಾಯಕ ಶುಭ್​ಮನ್ ಗಿಲ್ ಆಗಮನದ ನಂತರವೂ ಅದೃಷ್ಟ ಬದಲಾಗಲಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಪ್ರಸ್ತುತ ಸರಣಿಯಲ್ಲಿ, ಗಿಲ್ ಸತತ ಮೂರು ಏಕದಿನ ಪಂದ್ಯಗಳಲ್ಲಿ ಟಾಸ್ ಕಳೆದುಕೊಂಡರು. ಪರ್ತ್ ಮತ್ತು ಅಡಿಲೇಡ್ ನಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಇಂದು ಟಾಸ್ ಗೆದ್ದ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಏಕದಿನ ಕ್ರಿಕೆಟ್​ನಲ್ಲಿ ಹೊಸ ದಾಖಲೆ

ಕ್ರಿಕೆಟ್ನಲ್ಲಿ ಅತಿ ಹೆಚ್ಚು ಬಾರಿ ಟಾಸ್ ಸೋತ ತಂಡ ಎಂಬ ಹೆಗ್ಗಳಿಕೆಗೆ ಭಾರತ ತಂಡ ಪಾತ್ರವಾಗಿದೆ. ಮೆನ್ ಇನ್ ಬ್ಲೂ ನೆದರ್ಲೆಂರ್ಡ್ಸ್​ ದಾಖಲೆಯನ್ನು ಮುರಿದಿದೆ. ಮಾರ್ಚ್ 2011 ಮತ್ತು ಆಗಸ್ಟ್ 2013 ರ ನಡುವೆ ಡಚ್ ತಂಡ 11 ಟಾಸ್ ಸೋತಿತ್ತು. ಮೂರನೇ ಸ್ಥಾನದಲ್ಲಿರುವ ಇಂಗ್ಲೆಂಡ್ 27 ಜನವರಿ 2023 ಮತ್ತು 13 ಸೆಪ್ಟೆಂಬರ್ 2023ರ ನಡುವೆ ಸತತ 9 ಟಾಸ್ ಗಳನ್ನು ಕಳೆದುಕೊಂಡಿದೆ.

ತಂಡದಲ್ಲಿ ಎರಡು ಬದಲಾವಣೆ

ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್ ಟಾಸ್ ಗೆದ್ದು ಭಾರತ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಆಸ್ಟ್ರೇಲಿಯಾ ಬದಲಾವಣೆ ಮಾಡಿತು ಮತ್ತು ಕ್ಸೇವಿಯರ್ ಬಾರ್ಟ್ಲೆಟ್ ಬದಲಿಗೆ ನೇಥನ್ ಎಲ್ಲಿಸ್ ಅವರನ್ನು ಸೇರಿಸಿಕೊಂಡಿತು. ಟೀಂ ಇಂಡಿಯಾ ನಾಯಕ ಶುಭ್​ಮನ್ ಗಿಲ್ ವೇಗದ ಬೌಲರ್ ಗಳಾದ ಅರ್ಷ್ದೀಪ್ ಸಿಂಗ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಬದಲಿಗೆ ರಿಸ್ಟ್ ಸ್ಪಿನ್ನರ್ಗಳಾದ ಕುಲದೀಪ್ ಯಾದವ್ ಮತ್ತು ಪ್ರಸಿಧ್ ಕೃಷ್ಣ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಎಡ ಸ್ನಾಯುವಿನ ಗಾಯದಿಂದಾಗಿ ನಿತೀಶ್ ಕುಮಾರ್ ರೆಡ್ಡಿ ಮೂರನೇ ಏಕದಿನ ಪಂದ್ಯದಿಂದ ಹೊರಗುಳಿದಿದ್ದಾರೆ. ಅಡಿಲೇಡ್ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ನಿತೀಶ್ ಕುಮಾರ್ ರೆಡ್ಡಿ ಅವರ ಎಡಗೈಯಲ್ಲಿ ಹ್ಯಾಮ್ಸ್ಟ್ರಿಂಗ್ ಗಾಯವಾಗಿದ್ದು, ಮೂರನೇ ಏಕದಿನ ಪಂದ್ಯಕ್ಕೆ ಆಯ್ಕೆಯಾಗಲು ಲಭ್ಯವಿರಲಿಲ್ಲ. ಅವರನ್ನು ಬಿಸಿಸಿಐ ವೈದ್ಯಕೀಯ ತಂಡ ಪ್ರತಿದಿನವೂ ಮೇಲ್ವಿಚಾರಣೆ ಮಾಡುತ್ತಿದೆ. ಪರ್ತ್ ಮತ್ತು ಅಡಿಲೇಡ್ ನಲ್ಲಿ ಸೋಲನುಭವಿಸಿದ ಭಾರತ ಸರಣಿಯಲ್ಲಿ 0-2 ಅಂತರದಲ್ಲಿ ಹಿನ್ನಡೆ ಅನುಭವಿಸಿದೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Team India: ಗಿಲ್ ನಾಯಕತ್ವದಲ್ಲೂ ಬದಲಾಗುತ್ತಿಲ್ಲ ಭಾರತದ ಅದೃಷ್ಟ! ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಟಾಸ್ ಸೋತ ಟೀಮ್ ಇಂಡಿಯಾ