Last Updated:
ದೇವಸ್ಥಾನಗಳ ಗರ್ಭಗುಡಿಯಲ್ಲಿರುವ ದೇವರ ಮೂಲ ವಿಗ್ರಹಕ್ಕಿರುವಷ್ಟು ಪ್ರಾಮುಖ್ಯತೆ ಆ ಕ್ಷೇತ್ರದಲ್ಲಿ ಬೇರೆ ಯಾವುದಕ್ಕೂ ಇರೋದಿಲ್ಲ. ಪುರಾತನ ಕಾಲದಿಂದಲೂ ಗರ್ಭಗುಡಿಯ ದೇವರ ವಿಗ್ರಹಗಳು ಭಕ್ತನಿಗೆ ಕೇವಲ ಎಣ್ಣೆಯ ದೀಪದ ಬೆಳಕಲ್ಲಿ ನೋಡುವ ವ್ಯವಸ್ಥೆಯನ್ನು ಮಾತ್ರ ಮಾಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ನೂತನವಾಗಿ ನಿರ್ಮಾಣಗೊಂಡ ದೇವಸ್ಥಾನಗಳ(Temple) ಗರ್ಭಗುಡಿಯಲ್ಲೂ ಕೆಲವು ಕಡೆಗಳಲ್ಲಿ ವಿದ್ಯುತ್ ದೀಪಗಳನ್ನು(Electric Light) ಅಳವಡಿಸಲಾಗುತ್ತದೆ. ಆದರೆ ಪ್ರಾಚೀನ ದೇಗುಲಗಳಲ್ಲಿ ಇಂದಿಗೂ ವಿದ್ಯುತ್ ದೀಪಗಳನ್ನು ದೇವರ ಗರ್ಭಗುಡಿಯಲ್ಲಿ ಬಳಸಲಾಗುತ್ತಿಲ್ಲ. ದೇವರಿಗೆ ಹಚ್ಚಿದ ಎಣ್ಣೆ ದೀಪಗಳ ಬೆಳಕಿನಲ್ಲೇ ದೇವರನ್ನು ನೋಡುವ ಅವಕಾಶ ಮಾತ್ರ ದೇವಸ್ಥಾನಗಳಲ್ಲಿ ಇವೆ. ದೇವರ ಗರ್ಭಗುಡಿಯೊಳಗೆ ಪ್ರಕಾಶಮಾನವಾದ ವಿದ್ಯುತ್ ದೀಪಗಳನ್ನು ಯಾಕೆ ಬಳಸಬಾರದು ಎನ್ನುವ ವಿಚಾರ ಕೆಲವರಿಗೆ ಮಾತ್ರ ತಿಳಿದಿರೋದು. ಹಾಗಾದರೆ ಬನ್ನಿ ಈ ರೀತಿ ಮಾಡುವುದರ ಹಿಂದಿನ ಉದ್ಧೇಶವೇನು ಅನ್ನೋದನ್ನ ತಿಳಿಯೋಣ..
ಕೋಟ್ಯಾಂತರ ರೂಪಾಯಿ ವ್ಯಯಿಸಿ ಕಟ್ಟಿದ ದೇವಸ್ಥಾನವಿರಲೀ, ಅತೀ ಕಡಿಮೆ ಸಂಪನ್ಮೂಲಗಳನ್ನು ಕ್ರೂಢೀಕರಿಸಿ ಕಟ್ಟಿದ ಸಣ್ಣ ದೇವಸ್ಥಾನವಿರಲಿ,ಈ ಎರಡರಲ್ಲೂ ಇರುವ ದೈವಿಕ ಶಕ್ತಿ ಮಾತ್ರ ಒಂದೇ. ದೇವಸ್ಥಾನಗಳ ಗರ್ಭಗುಡಿಯಲ್ಲಿರುವ ದೇವರ ಮೂಲ ವಿಗ್ರಹಕ್ಕಿರುವಷ್ಟು ಪ್ರಾಮುಖ್ಯತೆ ಆ ಕ್ಷೇತ್ರದಲ್ಲಿ ಬೇರೆ ಯಾವುದಕ್ಕೂ ಇರೋದಿಲ್ಲ. ಪುರಾತನ ಕಾಲದಿಂದಲೂ ಗರ್ಭಗುಡಿಯ ದೇವರ ವಿಗ್ರಹಗಳು ಭಕ್ತನಿಗೆ ಕೇವಲ ಎಣ್ಣೆಯ ದೀಪದ ಬೆಳಕಲ್ಲಿ ನೋಡುವ ವ್ಯವಸ್ಥೆಯನ್ನು ಮಾತ್ರ ಮಾಡಲಾಗಿದೆ.
ಇದನ್ನೂ ಓದಿ: Double Dekker Bus: ಹಾಸನದಲ್ಲಿ ದೀಪಾಲಂಕಾರ ದರ್ಶನ ನೋಡಲು ಡಬಲ್ ಡೆಕ್ಕರ್ ಬಸ್ ರೆಡಿ!
ಆದರೆ ಇತ್ತೀಚಿನ ದಿನಗಳಲ್ಲಿ ಕಟ್ಟಲಾಗುವ ಕೆಲವು ದೇವಸ್ಥಾನಗಳಲ್ಲಿ ದೇವರ ಗರ್ಭಗುಡಿಯಲ್ಲೂ ವಿದ್ಯುತ್ ದೀಪಗಳ ಜೊತೆಗೆ ದೇವರನ್ನು ಕ್ಯಾಮರಾ ಮೂಲಕ ತೋರಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಆದರೆ ಈ ರೀತಿ ದೇವರ ವಿಗ್ರಹದ ಮೇಲೆ ವಿದ್ಯುತ್ ದೀಪಗಳ ಪ್ರಕಾಶಮಾನವಾದ ಬೆಳಕು ಬೀಳಬಾರದು, ಕ್ಯಾಮೆರಾಗಳ ಬಿಂಬ ಸ್ಪರ್ಶಿಸಬಾರದು ಎನ್ನುವ ಅಭಿಪ್ರಾಯಗಳು ಧಾರ್ಮಿಕ ವಲಯದಲ್ಲಿದೆ. ಈ ಬಗ್ಗೆ ಹಲವು ರೀತಿಯ ಚರ್ಚೆಗಳೂ ಧಾರ್ಮಿಕ ನೆಲೆಗಟ್ಟಿನಲ್ಲಿ ನಡೆದಿದೆ.
ಗರ್ಭ ಗುಡಿಯಲ್ಲಿ ನಡೆಯುವ ಯಾವುದೇ ಪೂಜೆಯನ್ನು ಕ್ಯಾಮೆರಾ, ವಿಡಿಯೋ ಮುಖಾಂತರ ಸೆರೆಹಿಡಿಯುವ ಪದ್ಧತಿ ಅನಾದಿಕಾಲದಿಂದಲೂ ಕ್ಷೇತ್ರಗಳಲ್ಲಿಲ್ಲ. ಆದ ಕಾರಣ ಗರ್ಭಗುಡಿಯಲ್ಲಿ ನಡೆಯುವ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ಕ್ಯಾಮರಾ ಮೂಲಕ ತೋರಿಸೋದು,ವಿದ್ಯುತ್ ದೀಪಗಳನ್ನು ಹಾಕಿ ಬೆಳಗಿಸೋದು ಸಮಂಜಸವಲ್ಲ ಎನ್ನುವ ಚರ್ಚೆಗಳು ನಡೆಯುತ್ತಲೇ ಇವೆ.
ತಾಂತ್ರಿಕ ವ್ಯವಸ್ಥೆಗಳ ಮೂಲಕ ದೇವರ ಮೂರ್ತಿಯ ದರ್ಶನವನ್ನು ಲೈವ್ ನೀಡಿದ್ದೇ ಆದಲ್ಲಿ ದೇವರ ಬಿಂಬದ ಸಾನಿಧ್ಯ ನಾಶವಾಗುತ್ತದೆ. ಋಷಿ ಮುನಿಗಳ ಕಾಲದಲ್ಲೇ ದೇವರ ಮೂರ್ತಿಯನ್ನು ಕೇವಲ ದೀಪಗಳ ಮೂಲಕವೇ ನೋಡಬೇಕು ಎನ್ನುವ ವಿಚಾರವಿದ್ದರೂ, ಇದೀಗ ವಿದ್ಯುತ್ ದೀಪಗಳನ್ನು ಬಳಸಲಾಗುತ್ತಿದೆ. ಆದರೆ ಕೆಲವು ಕ್ಷೇತ್ರಗಳಲ್ಲಿ ಇಂದಿಗೂ ವಿದ್ಯುತ್ ದೀಪಗಳನ್ನು ಗರ್ಭಗುಡಿಯಲ್ಲಿ ಬಳಸುತ್ತಿಲ್ಲ. ಇದಕ್ಕೆ ಕಾರಣ ದೇವರ ಸಾನಿಧ್ಯ ನಷ್ಟವಾಗದಿರಲಿ, ಇದರಿಂದ ಭಕ್ತರಿಗೆ ತೊಂದರೆಯಾಗದಿರಲಿ ಎನ್ನುವುದೇ ಆಗಿದೆ ಎನ್ನುವುದು ಧಾರ್ಮಿಕ ಮುಂದಾಳುಗಳ ಅಭಿಪ್ರಾಯವಾಗಿದೆ. ಅಲ್ಲದೇ ಭಕ್ತರು ಸಾಲಾಗಿ ನಿಂತು ಗರ್ಭಗುಡಿಯಲ್ಲಿದ್ದ ದೇವರನ್ನು ನೋಡಿದರೆ, ದೇವರ ಪಾಸಿಟಿವ್ ಎನರ್ಜಿ ಭಕ್ತನ ಮೇಲಾಗುತ್ತದೆ ಎನ್ನುವ ಅಭಿಪ್ರಾಯಗಳೂ ಚಾಲ್ತಿಯಲ್ಲಿವೆ.
Dakshina Kannada,Karnataka
October 25, 2024 5:03 PM IST