Terrace Garden: ವಯಸ್ಸು 71 ಆದ್ರೂ ಬತ್ತದ ಉತ್ಸಾಹ, ಟೆರೇಸ್‌ ಮೇಲೆ ತರಹೇವಾರಿ ತರಕಾರಿ ಬೆಳೆದ ಮಂಗಳೂರಿನ ವ್ಯಕ್ತಿ | This Retired man growing varieties of vegetables on his house terrace

Terrace Garden: ವಯಸ್ಸು 71 ಆದ್ರೂ ಬತ್ತದ ಉತ್ಸಾಹ, ಟೆರೇಸ್‌ ಮೇಲೆ ತರಹೇವಾರಿ ತರಕಾರಿ ಬೆಳೆದ ಮಂಗಳೂರಿನ ವ್ಯಕ್ತಿ | This Retired man growing varieties of vegetables on his house terrace

Last Updated:

ಕಳೆದ 15 ವರ್ಷಗಳ ಹಿಂದೆ ಇವರಿಗೆ ಹಸಿರಿನೊಂದಿಗೆ ನಂಟು ಆರಂಭವಾಗಿದ್ದು, ಇನ್ನೂ ಮುಂದುವರಿದಿದೆ. ಈಗ ಇವರಿಗೆ 71 ವರ್ಷ, ಆದರೂ ಇವರಿಗೆ ಉತ್ಸಾಹ ಬತ್ತಿಲ್ಲ. ಸುಮಾರು ಹತ್ತು ಬಗೆಯ ಗಡ್ಡೆ ಗೆಣಸು ಹಾಗೂ ಹತ್ತಕ್ಕೂ ಅಧಿಕ ಕೆಸುವಿನ ವೈವಿಧ್ಯವೂ ಇವರಲ್ಲಿದೆ.

X

ವಿಡಿಯೋ ಇಲ್ಲಿ ನೋಡಿ

ತರಕಾರಿಗಳ ದರ(Vegetables Rate) ಗಗನಕ್ಕೇರಿದೆ. ತರಕಾರಿಗಳನ್ನು ಬೆಳೆಯುವವರಿಗೆ ತರಕಾರಿಯನ್ನು ಮಾರುಕಟ್ಟೆಯಿಂದ ತರುವ ಪ್ರಮೇಯ ಇಲ್ಲ. ಆದರೆ ಸಿಟಿಯಲ್ಲಿ ಬದುಕುವ ಮಂದಿಗೆ ಮಾರುಕಟ್ಟೆಯಲ್ಲಿನ (Market) ದರ ಕಿಸೆಗೆ ಕತ್ತರಿ ಹಾಕುತ್ತಿದೆ. ಆದರೆ ಮಂಗಳೂರು ನಗರದಲ್ಲಿ(Mangaluru City) ಒಂದು ಮನೆಯಿದೆ.‌ ಮನೆಯ ತಾರಸಿಗೆ(Terrace) ಹೋದರೆ ಅಲ್ಲಿ ಕಾಣಸಿಗುತ್ತವೆ ತರಹೇವಾರಿ ತರಕಾರಿಗಳು.

ಹೌದು, ಮಂಗಳೂರು ನಗರದೊಳಗಿರುವ ಹಸಿರು ಮನೆ. ಮನೆಯ ಸುತ್ತಮುತ್ತಲೂ ವೀಳ್ಯದೆಲೆ, ತೊಂಡಬಳ್ಳಿ ಹಾಗೂ ವಿಧ ವಿಧ ಗಡ್ಡೆ ಗೆಣಸಿನ ಬಳ್ಳಿಗಳೇ ತುಂಬಿದ್ದು ಹಸಿರಿನಿಂದ ಕಂಗೊಳಿಸುತ್ತಿವೆ. ಹೌದು, ಇದು ನಗರದ ಪಂಪವೆಲ್ ಸಮೀಪದ ನಿವೃತ್ತ ಡಾಕ್ಟರ್ ಸುಂದರ್ ಭಟ್ ಅವರ ಮನೆ. ಕಳೆದ 15 ವರ್ಷಗಳ ಹಿಂದೆ ಇವರಿಗೆ ಹಸಿರಿನೊಂದಿಗೆ ನಂಟು ಆರಂಭವಾಗಿದ್ದು, ಇನ್ನೂ ಮುಂದುವರಿದಿದೆ. ಈಗ ಇವರಿಗೆ 71 ವರ್ಷ, ಆದರೂ ಇವರಿಗೆ ಉತ್ಸಾಹ ಬತ್ತಿಲ್ಲ. ಸುಮಾರು ಹತ್ತು ಬಗೆಯ ಗಡ್ಡೆ ಗೆಣಸು ಹಾಗೂ ಹತ್ತಕ್ಕೂ ಅಧಿಕ ಕೆಸುವಿನ ವೈವಿಧ್ಯವೂ ಇವರಲ್ಲಿದೆ.

ಇದನ್ನೂ ಓದಿ: Mangaluru: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೋಟಿ ಗಾಯತ್ರಿಯಾಗ ಕಣ್ತುಂಬಿಕೊಂಡ ಜನರು

ಮನೆಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಇವರೇ ಬೆಳೆದ ತರಕಾರಿ ಹಾಗೂ ಗಡ್ಡೆ ಗೆಣಸುಗಳನ್ನು ಬಳಸುತ್ತಿದ್ದಾರೆ. ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಮೆಡಿಸಿನ್ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಸುಂದರ್ ಅವರು ಈಗ ನಿವೃತ್ತರಾಗಿದ್ದಾರೆ. ವೃತ್ತಿಯಲ್ಲಿದ್ದಾಗ ಬಿಡುವಿನ ಸಮಯವನ್ನು ತಾರಸಿ ಕೃಷಿಗೆ ನೀಡುತ್ತಿದ್ದರೆ, ನಿವೃತ್ತರಾದ ಬಳಿಕ ಸಂಪೂರ್ಣ ಸಮಯವನ್ನು ತಾರಸಿ ಕೃಷಿಗೇ ಮೀಸಲಿರಿಸಿದ್ದಾರೆ.

ಏನೆಲ್ಲಾ ಬೆಳೆದಿದ್ದಾರೆ?

ಹರಿವೆ, ಪಾಲಕ್, ತೊಂಡೆ, ಬೆಂಡೆ, ಕುಂಬಳ-ಬೂದುಗುಂಬಳ, ಸೌತೆ- ಮುಳ್ಳುಸೌತೆ, ಬದನೆ- ಗುಳ್ಳಬದನೆ, ಅವರೆ, ನುಗ್ಗೆ, ಮಡಹಾಗಲ, ಕಾನಕಲ್ಲಟೆ, ಕರ್ಚಿಕಾಯಿ, ಬಸಳೆ- ನೆಲ ಬಸಳೆ ಹೀಗೆ ತರಕಾರಿಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಕ್ಯಾರೇಟ್, ಬೀನ್ಸ್‌ ನಂತಹ ಕರಾವಳಿಯ ಪ್ರದೇಶದಲ್ಲಿ ಬೆಳೆಯದ ತರಕಾರಿ ಬಿಟ್ಟು ಉಳಿದ ಎಲ್ಲ ತರಕಾರಿಗಳನ್ನು ತಾರಸಿಯಲ್ಲಿ ಹಾಗೂ ನೆಲದಲ್ಲಿ ಹಾಳಾದ ಫ್ರಿಡ್ಜ್‌ನ್ನು ಗುಜರಿಯವರಲ್ಲಿ ಖರೀದಿಸಿ ಬೆಳೆಯುತ್ತಿದ್ದಾರೆ. ತಾವು ಬೆಳೆದ ತರಕಾರಿಯನ್ನು ಸ್ವಂತ ಬಳಕೆ ಮಾಡಿ ಉಳಿದದ್ದನ್ನು ತಮ್ಮ ಕುಟುಂಬದವರಿಗೆ, ಬಳಗದವರಿಗೆ ನೀಡುತ್ತಾರೆ.