Last Updated:
ಮಂಗಳೂರು ದಸರಾದಲ್ಲಿದಲ್ಲಿ ಹುಲಿವೇಷದ ಅಬ್ಬರ, ಉಳ್ಳಾಲದ ರಕ್ಷಿತ್ ಅವರ ಕಲಾತ್ಮಕ ನೋಟಿನ ಮಾಲೆ ವಿಶೇಷ. ಮದುವೆ, ವಿವಿಧ ನಗರಗಳಿಗೆ ಮಾಲೆ ಡೆಲಿವರಿ ಮಾಡುತ್ತಾರೆ.
ಮಂಗಳೂರು: ತಾಸೆ ಪೆಟ್ಟು, ಮೈಗಂಟಿದ ಹಳದಿ, ಕಪ್ಪು ಬಣ್ಣ, ಎದೆಯೆತ್ತರಕ್ಕೆ ಬರುವ ಕಾಲು, ನೆಲ ನಡುಗಿಸೋ ಹೆಜ್ಜೆ ಇದೆಲ್ಲಾ ಹುಲಿವೇಷದ ಆರ್ಭಟ ಕಣ್ರೀ! ಮಂಗಳೂರಿನಲ್ಲಿ (Mangaluru) ದಸರಾ ಸಂಭ್ರಮ ಮೇಳೈಸಿದೆ.ಎಲ್ಲಿ ನೋಡಿದೂ ಹುಲಿವೇಷ,ಹುಲಿ ಕುಣಿತದ್ದೇ (Tiger Dance) ಅಬ್ಬರ.ತಾಸೆಯ ಪೆಟ್ಟಿಗೆ ಕುಣಿಯುವ ವೇಷಧಾರಿಗಳು ಹುಲಿಕುಣಿತದ ರಂಗವನ್ನು ಇಮ್ಮಡಿಗೊಳಿಸಿದ್ದಾರೆ.ದಸರಾ ಗೆ (Dasara) ಹುಲಿವೇಷ ಒಂದು ಕಳೆಯಾದರೆ,ಹುಲಿವೇಷಧಾರಿಗಳ ಕುತ್ತಿಗೆಯಲ್ಲಿ ಹಾಕುವ ನೋಟಿನ ಹಾರ (Note Garland) ಮತ್ತೊಂದು ಆಕರ್ಷಣೆ.
ಹುಲಿವೇಷಧಾರಿಗಳಿಗೆ ಜನ ಪ್ರೀತಿಯಿಂದ ಹಾಕುವ ನೋಟಿನ ಮಾಲೆಗೆ ಸಖತ್ ಬೇಡಿಕೆ ಇದೆ. ನೋಟಿನ ಮಾಲೆ ತಯಾರಿಸುವ ಉಳ್ಳಾಲದ ರಕ್ಷಿತ್ ಕಲಾತ್ಮಕತೆಯ ನೋಟಿನ ಮಾಲೆ ರಚನೆಗೆ ಸಿದ್ಧಹಸ್ತರು. ಉಳ್ಳಾಲ ಅರಸುಹಿತ್ಲುವಿನ ರಕ್ಷಿತ್ ಈ ಬಾರಿಯೂ ವಿಧ ವಿಧವಾದ ನೋಟಿನ ಮಾಲೆ ರಚಿಸಿದ್ದಾರೆ.
10 ರೂಪಾಯಿ ನೋಟಿನಿಂದ ಆರಂಭಗೊಂಡ ಈ ಮಾಲೆಗಳನ್ನು ಒಪ್ಪ ಓರಣವಾಗಿ ಜೋಡಿಸಿಟ್ಟಿದ್ದಾರೆ. ಇದನ್ನು ಹುಲಿಗಳ ಕುತ್ತಿಗೆಗೆ ಹಾಕಿ ಕುಣಿಯುವ ಸಂದರ್ಭದಲ್ಲಿ ಒಂದೂ ನೋಟೂ ಕೆಳಕ್ಕೆ ಬೀಳದಂತೆ ಅಷ್ಟು ಭದ್ರತೆಯಿಂದ ಪೋಣಿಸಿದ್ದಾರೆ. ಇನ್ನು ಕೇವಲ ದಸರಾಕ್ಕೆ ಮಾತ್ರವಲ್ಲದೇ ಮುಸ್ಲಿಂ ಸಮುದಾಯದವರು ಕೂಡಾ ಇಂತಹ ಮಾಲೆಗಳನ್ನು ಮದುವೆ ಸಂಭ್ರಮದಲ್ಲಿ ಬಳಸಿಕೊಳ್ಳಲು ಇವರ ಕೈಯಿಂದಲೇ ಮಾಡಿಸಿಕೊಂಡು ಹೋಗುತ್ತಾರೆ. 500 ರೂಪಾಯಿಗಳಿಂದ ಆರಂಭಗೊಳ್ಳುವ ಮಾಲೆಯ ದರ ಬರೋಬ್ಬರಿ 25 ಸಾವಿರ, 50 ಸಾವಿರದ ಮಾಲೆಗಳನ್ನೂ ಇವರು ರಚಿಸಿದ್ದಾರೆ.
ಚಿಕ್ಕಂದಿನಲ್ಲೇ ಹುಲಿವೇಷಗಳನ್ನು ನೋಡಿ ಖುಷಿಪಡುತ್ತಿದ್ದ ರಕ್ಷಿತ್, ಸ್ನೇಹಿತರಿಗೆ ನೋಟಿನ ಮಾಲೆ ಮಾಡಿಕೊಡುತ್ತಿದ್ದರು. ರಕ್ಷಿತ್ ನೋಟಿನ ಮಾಲೆ ಕೇವಲ ಮಂಗಳೂರು ಮಾತ್ರವಲ್ಲದೇ ಬೆಂಗಳೂರು, ತೀರ್ಥಹಳ್ಳಿ, ಕುಂಬಳೆ, ಕೇರಳದ ಹಲವು ಭಾಗಗಳಿಗೂ ಹೋಗುತ್ತಿದೆ. ಮದುವೆ ಫಂಕ್ಷನ್‌ಗೂ ಮಾಲೆ ಮಾಡಿಸಿಕೊಂಡು ಹೋಗುತ್ತಾರೆ.
ಮನೆ ಮಂದಿಯ ಸಹಕಾರವೂ ದೊಡ್ಡದು
ನೋಟಿನ ಮಾಲೆ ಬೇಕಾದವರಿಗೆ ಅವರಿಗೆ ಬೇಕಾದ ಹಾಗೆ ಮಾಲೆ ಮಾಡಿಕೊಡುತ್ತಾರೆ. ಇವರ ನೋಟಿನ ಫಿನಿಶಿಂಗ್ ಕೂಡಾ ತುಂಬಾ ಚೆನ್ನಾಗಿದೆ. ದೂರದ ಊರಿಗೂ ಇವರು ಮಾಲೆಗಳನ್ನು ಡೆಲಿವರಿ ಮಾಡುತ್ತಾರೆ. ಗ್ರಾಹಕರಿಗೆ ಬೇಕಾದ ಮೌಲ್ಯದ ಮಾಲೆ ಮಾಡಿಕೊಡುತ್ತಾರೆ. ಇನ್ನು ಇವರ ಮಾಲೆ ತಯಾರಿಕೆಯಲ್ಲಿ ಇವರ ಸಹೋದರ ಸೇರಿದಂತೆ ಮನೆ ಮಂದಿ ಕೂಡಾ ಸಹಕಾರ ನೀಡುತ್ತಾರೆ. ಸದ್ಯ ನವರಾತ್ರಿ ಸಂಧರ್ಭದಲ್ಲಿ ರಕ್ಷಿತ್ ಉಳ್ಳಾಲ್ ಮಾಲೆ ಮಾಡುವುದರಲ್ಲಿ ತುಂಬಾ ಬ್ಯೂಸಿಯಾಗಿದ್ದಾರೆ.
Dakshina Kannada,Karnataka
September 26, 2025 2:24 PM IST