Vaibhav Suryavanshi: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಗಳಲ್ಲಿ ವೈಭವ್ ಸೂರ್ಯವಂಶಿಗೆ ಸಿಕ್ಕಿಲ್ಲಾ ಚಾನ್ಸ್‌! ಆದರೆ ಟೆಸ್ಟ್ ಪಂದ್ಯಗಳಲ್ಲಿ ಅವರ ಸಾಧನೆ ಹೇಗಿತ್ತು ಗೊತ್ತಾ? | IPL 2025 12 year old Vaibhav Suryavanshi scores century in 35 balls sets record

Vaibhav Suryavanshi: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಗಳಲ್ಲಿ ವೈಭವ್ ಸೂರ್ಯವಂಶಿಗೆ ಸಿಕ್ಕಿಲ್ಲಾ ಚಾನ್ಸ್‌! ಆದರೆ ಟೆಸ್ಟ್ ಪಂದ್ಯಗಳಲ್ಲಿ ಅವರ ಸಾಧನೆ ಹೇಗಿತ್ತು ಗೊತ್ತಾ? | IPL 2025 12 year old Vaibhav Suryavanshi scores century in 35 balls sets record

Last Updated:

ಐಪಿಎಲ್ 2025ರಲ್ಲಿ ವೈಭವ್ ಸೂರ್ಯವಂಶಿ 35 ಎಸೆತಗಳಲ್ಲಿ ಶತಕ ಬಾರಿಸಿ, ಅತಿ ಕಿರಿಯ ಆಟಗಾರರಾಗಿ ದಾಖಲೆ ಬರೆದಿದ್ದಾರೆ. 12 ವರ್ಷ ವಯಸ್ಸಿನಲ್ಲೇ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇವರ ಕ್ರಿಕೆಟ್‌ ಜೀವನದ ಇನ್ನಷ್ಡು ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ ನೋಡಿ.

ವೈಭವ್ ಸೂರ್ಯವಂಶಿವೈಭವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ

ಸೋಮವಾರದ ಐಪಿಎಲ್ 2025 (IPL 2025) ಅಭೂತಪೂರ್ವ ತಿರುವನ್ನು ಪಡೆದುಕೊಂಡಿದ್ದು, ಟಿ-20 ಕ್ರಿಕೆಟ್‌ನಲ್ಲಿ (Cricket) ಅತಿ ಕಿರಿಯ ಆಟಗಾರರಾದ ವೈಭವ್ ಸೂರ್ಯವಂಶಿ (Vaibhav Suryavanshi), ಜೈಪುರದಲ್ಲಿ ಗುಜರಾತ್ ಟೈಟಾನ್ಸ್ (GT) ವಿರುದ್ಧ ರಾಜಸ್ಥಾನ್ ರಾಯಲ್ಸ್ (RR) ಪರ 35 ಎಸೆತಗಳಲ್ಲಿ ಶತಕ ಗಳಿಸಿ ಸಾಧನೆ ಮಾಡಿದ್ದಾರೆ. ಐಪಿಎಲ್‌ನಲ್ಲಿ ಶತಕ ಗಳಿಸಲು ಭಾರತೀಯನೊಬ್ಬ ತೆಗೆದುಕೊಂಡ ಅತ್ಯಂತ ಕಡಿಮೆ ಎಸೆತಗಳು ಇದಾಗಿದ್ದು ಸೂರ್ಯವಂಶಿ ಈ ಹೆಗ್ಗುರುತನ್ನು ತಮ್ಮದಾಗಿಸಿಕೊಂಡಿದ್ದಾರೆ.  ಐಪಿಎಲ್‌ನಲ್ಲಿ ಶಾರ್ದೂಲ್ ಠಾಕೂರ್ ವಿರುದ್ಧ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸುವ ಮೂಲಕ ತಮ್ಮ ಐಪಿಎಲ್ ವೃತ್ತಿಜೀವನವನ್ನು ಆರಂಭಿಸಿದ ವೈಭವ್, ಈಗ ಮೂರು ಪಂದ್ಯಗಳಲ್ಲಿ 75.50 ಸರಾಸರಿ ಮತ್ತು 222.05 ಸ್ಟ್ರೈಕ್ ರೇಟ್‌ನಲ್ಲಿ 151 ರನ್ ಗಳಿಸಿದ್ದಾರೆ, ಅವರ ಅತ್ಯುತ್ತಮ ಸ್ಕೋರ್ 101 ಆಗಿದೆ.

ಅತ್ಯಂತ ಕಿರಿಯ ಆಟಗಾರನೆಂಬ ಹೆಗ್ಗಳಿಕೆ!

ಕಳೆದ ವರ್ಷ ನಡೆದ ಐಪಿಎಲ್ ಮೆಗಾ-ಹರಾಜಿನಲ್ಲಿ, ಸೂರ್ಯವಂಶಿ 1.1 ಕೋಟಿ ರೂ.ಗೆ ಬಿಡ್ ಆಗಿದ್ದು ಅಚ್ಚರಿಯ ಸುದ್ದಿಯಲ್ಲೊಂದಾಗಿತ್ತು. ಮಾರ್ಚ್ 27, 2011 ರಂದು ಬಿಹಾರದಲ್ಲಿ ಜನಿಸಿದ ವೈಭವ್, ಪಟ್ಟಿಯಲ್ಲಿರುವ ಅತ್ಯಂತ ಕಿರಿಯ ಆಟಗಾರ ಎಂದೆನಿಸಿದ್ದಾರೆ. ಜನವರಿ 2024 ರಲ್ಲಿ ಕೇವಲ 12 ವರ್ಷ ಮತ್ತು 284 ದಿನಗಳ ವಯಸ್ಸಿನಲ್ಲಿ ಬಿಹಾರ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಕಳೆದ ವರ್ಷ, ಅವರು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಭಾರತದ U19 ಪಂದ್ಯದ ಭಾಗವಾಗಿದ್ದರು, ಅಲ್ಲಿ ಅವರು 58 ಎಸೆತಗಳಲ್ಲಿ ಶತಕ ಬಾರಿಸಿದ್ದರು.

ಕೋಚ್ ರಾಹುಲ್‌ ಹರ್ಷ

ರಾಜಸ್ಥಾನ ರಾಯಲ್ಸ್‌ಗೆ ಪಾದಾರ್ಪಣೆ ಮಾಡಿದ್ದ ಈ ಕಿರಿಯ ಆಟಗಾರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲೇ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದರು. 11 ಸಿಕ್ಸರ್‌ಗಳನ್ನು ಬಾರಿಸಿ, ಹುಬ್ಬೇರಿಸಿದ್ದರು. ಸೋಲುಗಳಿಂದ ಕಂಗೆಟ್ಟಿದ್ದ ರಾಜಸ್ಥಾನ ರಾಯಲ್ಸ್‌ಗೆ ವೈಭವ್ ಮೊದಲಿನ ಹುರುಪನ್ನು ತಂದುಕೊಟ್ಟಿದ್ದರು. ಇನ್ನು ಕೋಚ್ ರಾಹುಲ್ ದ್ರಾವಿಡ್ ಕೂಡ ಕುಳಿತಲ್ಲಿಂದ ಮೇಲೆದ್ದು ವೈಭವ್ ಸೂರ್ಯವಂಶಿ ಅವರ ಸಾಮರ್ಥ್ಯವನ್ನು ಕೊಂಡಾಡಿದರು. ದ್ರಾವಿಡ್ ಅವರ ಕಿರಿಯ ಮಗ ಅನ್ವೇ ಗಿಂತ ಕಿರಿಯರಾದ ವೈಭವ್, ದ್ರಾವಿಡ್‌ರ ಹೊಗಳುವಿಕೆಗೆ ಭಾಜನರಾಗಿದ್ದಾರೆ ಎಂದರೆ ಅವರ ಸಾಮರ್ಥ್ಯವನ್ನು ನಾವು ಊಹಿಸಬಹುದು. ಈ ಹಿಂದೆ ದ್ರಾವಿಡ್ ಅವರೇ 19 ವರ್ಷದೊಳಗಿನವರ ಕ್ರಿಕೆಟ್ ಆಡುವಷ್ಟು ಚಿಕ್ಕವನಲ್ಲವೇ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ವೈಭವ್ ಅವರ ಅನುಮಾನವನ್ನು ನಿವಾರಿಸಿ ತಾವು ಗೆಲ್ಲುವ ಕುದುರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

ವೈಭವ್ ಈ ಹಿಂದೆ ಚಂಡೀಗಢದಲ್ಲಿ ನಡೆದ ವಿನೂ ಮಂಕಡ್ ಟ್ರೋಫಿ ಅಂಡರ್-19 ಪಂದ್ಯದ ವೇಳೆ, ಕರ್ನಾಟಕದ ಮಾಜಿ ವಿಕೆಟ್ ಕೀಪರ್-ಬ್ಯಾಟರ್, ಜೂನಿಯರ್ ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷ ವಿ.ಎಸ್. ತಿಲಕ್ ನಾಯ್ಡು ಅವರ ಗಮನ ಸೆಳೆದರು. ಈ ಪಂದ್ಯಾಟದ ವೇಳೆಗೆ ವೈಭವ್ ಅವರಿಗೆ ಕೇವಲ 12 ರ ಹರೆಯ, ಆದರೆ ಅವರು ತಮಗಿಂತ ಹೆಚ್ಚು ಪ್ರಬುದ್ಧ ಹಾಗೂ ಬಲಿಷ್ಠ ಆಟಗಾರರ ವಿರುದ್ಧ ಆಡಿದ್ದರು. ವೈಭವ್ ಆಟದ ಗತಿಯನ್ನು ಸುಧಾರಿಸಲು ಆಸ್ಟ್ರೇಲಿಯಾ ಅಂಡರ್-19 ತಂಡದ ವಿರುದ್ಧ ನಡೆದ ಏಕದಿನ ಪಂದ್ಯಗಳಿಂದ ಅವರನ್ನು ದೂರವಿರಿಸಲಾಗಿತ್ತು.

ಇದರಿಂದ ಅವರಿಗೆ ಹೆಚ್ಚಿನ ತರಬೇತಿ ಪಡೆಯುವ ಅವಕಾಶ ದೊರೆಯಿತು. ನಂತರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ವೈಭವ್ ಅಸಾಮಾನ್ಯ ಪ್ರದರ್ಶನ ನೀಡಿದರು. 62 ಎಸೆತಗಳಲ್ಲಿ 104 ರನ್ ಗಳಿಸುವ ಮೂಲಕ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬುದನ್ನು ನಿರೂಪಿಸಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Vaibhav Suryavanshi: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಗಳಲ್ಲಿ ವೈಭವ್ ಸೂರ್ಯವಂಶಿಗೆ ಸಿಕ್ಕಿಲ್ಲಾ ಚಾನ್ಸ್‌! ಆದರೆ ಟೆಸ್ಟ್ ಪಂದ್ಯಗಳಲ್ಲಿ ಅವರ ಸಾಧನೆ ಹೇಗಿತ್ತು ಗೊತ್ತಾ?