Last Updated:
ಜಹೀರ್ ಖಾನ್ 20 ವರ್ಷಗಳ ನಂತರ ‘ಐ ಲವ್ ಯು’ ಫಲಕ ತೋರಿಸಿದ್ದ ಅಭಿಮಾನಿಯನ್ನು ಭೇಟಿಯಾಗುವ ಮೂಲಕ ಅಚ್ಚರಿ ಉಂಟು ಮಾಡಿದ್ದಾರೆ.
20 ವರ್ಷಗಳ ಬಳಿಕ ಜಹೀರ್ ಭೇಟಿಯಾದ ಅಭಿಮಾನಿ
ಸದ್ಯ ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಈಗ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಮಾರ್ಗದರ್ಶಕರಾಗಿದ್ದಾರೆ. 2005 ರಲ್ಲಿ ಐ ಲವ್ ಯೂ ಎಂಬ ಫಲಕ ಪ್ರದರ್ಶಿಸಿದ್ದ ಆ ಮಹಿಳಾ ಅಭಿಮಾನಿಯನ್ನು ಜಹೋರ್ ಖಾನ್ ಬರೋಬ್ಬರಿ 20 ವರ್ಷಗಳ ನಂತರ ಭೇಟಿಯಾಗಿದ್ದಾರೆ. LSG ತಂಡವು ಈ ಭೇಟಿಯನ್ನು ವಿಡಿಯೋ ಮಾಡಿಕೊಂಡಿದೆ. ಜಹೀರ್ ಅವರನ್ನು ನೋಡಿದ ಅಭಿಮಾನಿ ಮತ್ತೆ ಅದೇ ರೀತಿ ‘ಐ ಲವ್ ಯು ಜಹೀರ್’ ಎಂಬ ಪ್ಲಕಾರ್ಡ್ ತೋರಿಸಿದರು. ಇದನ್ನು ನೋಡಿ ಜಹೀರ್ ಅಚ್ಚರಿಗೊಂಡರು.
ನಾನಿರುವಾಗ ಬೇರೆ ಕೋಚ್ ಯಾಕೆ!
ಗೌತಮ್ ಗಂಭೀರ್ ಬದಲಾಗಿ ಜಹೀರ್ LSG ತಂಡದ ಮಾರ್ಗದರ್ಶಕರಾಗಿದ್ದಾರೆ. ಗಂಭೀರ್ ಈಗ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವನ್ನು ಸೇರಿದ್ದಾರೆ. ಜಹೀರ್ LSG ತಂಡಕ್ಕೆ ಬೌಲಿಂಗ್ ಕೋಚ್ ಆಗಿಯೂ ಕೆಲಸ ಮಾಡಲಿದ್ದಾರೆ. “ನಾನೇ ಇರುವಾಗ ಬೇರೆ ಬೌಲಿಂಗ್ ಕೋಚ್ ಯಾಕೆ?” ಎಂದು ತಮಾಷೆಯಾಗಿ ಕೇಳಿದರು.
ತಂಡದ ಯಶಸ್ಸಿಗೆ ನಾನೂ ಕೊಡುಗೆ ನೀಡುತ್ತೇನೆ
ತಂಡವನ್ನು ಸೇರಿದ ನಂತರ, LSG ತಂಡದ ಸ್ಥಿರ ಪ್ರದರ್ಶನವನ್ನು ಜಹೀರ್ ಹೊಗಳಿದರು. 2025 ರ IPL ನಲ್ಲಿ ಉತ್ತಮ ಪ್ರದರ್ಶನ ನೀಡಬೇಕೆಂದು ಹೇಳಿದರು. “LSG ಹೊಸ ತಂಡವಾದರೂ ಚೆನ್ನಾಗಿ ಆಡುತ್ತಿದೆ” ಎಂದು ಜಹೀರ್ ಹೇಳಿದರು. ಪ್ಲೇಆಫ್ ತಲುಪುತ್ತಿರುವುದು ಒಳ್ಳೆಯ ಸೂಚನೆ. ತಂಡದ ಯಶಸ್ಸಿಗೆ ನಾನೂ ಕೊಡುಗೆ ನೀಡುತ್ತೇನೆ ಎಂದಿದ್ದಾರೆ.
ಎಲ್‌ಎಸ್‌ಜಿ ಮುನ್ನಡೆಸಲಿದ್ದಾರೆ ಪಂತ್
2025 ರ IPL ನಲ್ಲಿ ರಿಷಭ್ ಪಂತ್ LSG ತಂಡವನ್ನು ಮುನ್ನಡೆಸಲಿದ್ದಾರೆ. 27 ಕೋಟಿ ರೂಪಾಯಿಗೆ ಪಂತ್ ಅವರನ್ನು LSG ಖರೀದಿಸಿದೆ. IPL ಇತಿಹಾಸದಲ್ಲೇ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಆಟಗಾರ ಪಂತ್. ಕೆಎಲ್ ರಾಹುಲ್ ತಂಡ ಬಿಟ್ಟ ಕಾರಣ ಪಂತ್ ಅವರನ್ನು ತೆಗೆದುಕೊಳ್ಳಲಾಗಿದೆ. 2024 ರ IPL ನಲ್ಲಿ LSG ತಂಡ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ ಮತ್ತು ಪ್ಲೇಆಫ್ ತಲುಪಲು ವಿಫಲವಾಯಿತು.
March 15, 2025 8:10 PM IST
Viral Video: ಮೈದಾನದಲ್ಲೇ ಪ್ರಪೋಸ್ ಮಾಡಿ, ಫ್ಲೈಯಿಂಗ್ ಕಿಸ್ ಕೊಟ್ಟಿದ್ದಾಕೆಯನ್ನು 20 ವರ್ಷಗಳ ನಂತರ ಮತ್ತೆ ಭೇಟಿ ಮಾಡಿದ ಜಹೀರ್! ವಿಡಿಯೋ ವೈರಲ್